52ನೇ ವಾರ್ಷಿಕ ಕಲಾ ಸ್ಪರ್ಧೆ/ಪ್ರದರ್ಶನಕ್ಕೆ ಅರ್ಜಿ ಆಹ್ವಾನ

2 years ago

2024-25ನೇ ಸಾಲಿನ 52ನೇ ವಾರ್ಷಿಕ ಕಲಾ ಸ್ಪರ್ಧೆ/ಪ್ರದರ್ಶನಕ್ಕೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯು 2024-25ನೇ ಸಾಲಿನ 52ನೇ ವಾರ್ಷಿಕ ಕಲಾ ಸ್ಪರ್ಧೆ/ಪ್ರದರ್ಶನಕ್ಕೆ ಬಹುಮಾನಕ್ಕಾಗಿ ಈ ಕೆಳಕಂಡ ನಿಯಮಗಳನುಸಾರ ಚಿತ್ರಕಲಾವಿದರಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

೧. ಕರ್ನಾಟಕದ ನಿವಾಸಿಗಳಾಗಿರುವ ಅಥವಾ ಕಳೆದ ಐದು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿರುವ ಕಲಾವಿದರು ಈ ಕಲಾಪ್ರದರ್ಶನದಲ್ಲಿ ಭಾಗವಹಿಸಬಹುದಾಗಿದೆ.
೨. 52ನೇ ವಾರ್ಷಿಕ ಕಲಾಪ್ರದರ್ಶನ ಬಹುಮಾನಕ್ಕೆ ತೀರ್ಪುಗಾರರಿಂದ ಆಯ್ಕೆ ಮಾಡಿದ ಒಟ್ಟು ಹತ್ತು ಕಲಾಕೃತಿಗಳಿಗೆ ತಲಾ ರೂ.25,೦೦೦/-(ಇಪ್ಪತ್ತೈದು ಸಾವಿರ ಮಾತ್ರ) ರೂಪಾಯಿಗಳ ನಗದು, ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.
೩. 52ನೇ ವಾರ್ಷಿಕ ಕಲಾ ಸ್ಪರ್ಧೆ/ಪ್ರದರ್ಶನಕ್ಕೆ ಭಾಗವಹಿಸಲಿಚ್ಚಿಸುವ ಕಲಾವಿದರ ವಯಸ್ಸು ಕನಿಷ್ಠ 18ವರ್ಷ ಮೇಲ್ಪಟ್ಟು ವೃತ್ತಿಪರ ಕಲಾವಿದರಾಗಿರಬೇಕು.
೪. 52ನೇ ವಾರ್ಷಿಕ ಕಲಾ ಸ್ಪರ್ಧೆ/ ಕಲಾಪ್ರದರ್ಶನದಲ್ಲಿ ಭಾಗವಹಿಸಲಿಚ್ಛಿಸುವ ಕಲಾವಿದರು ತಮ್ಮ ಕಲಾಕೃತಿಗಳ ಛಾಯಾಚಿತ್ರಗಳನ್ನು ನಿಗದಿತ ಅರ್ಜಿಯೊಂದಿಗೆ ಸಲ್ಲಿಸಬೇಕು. (2023-24ರ ಇಸವಿಗಿಂತ ಹಿಂದೆ ರಚಿತವಾದ ಕಲಾಕೃತಿಗಳನ್ನು ಅಕಾಡೆಮಿಯು ಬಹುಮಾನಕ್ಕಾಗಿ ಪರಿಗಣಿಸುವುದಿಲ್ಲ.) ಆಯ್ಕೆ ಸಮಿತಿಯು ಮೂಲಕೃತಿಗಳ ಛಾಯಾಚಿತ್ರ ಆಧರಿಸಿ ಆಯ್ಕೆ ಮಾಡಿದ ನಂತರ ಮೂಲಕೃತಿಗಳನ್ನು ಕಳುಹಿಸಬೇಕಾಗುತ್ತದೆ.
೫. ಬಹುಮಾನ/ಪ್ರದರ್ಶನಕ್ಕೆ ಕಳುಹಿಸುವ ಕಲಾಕೃತಿಗಳು ಗರಿಷ್ಠ 3*3ಅಡಿ ಅಳತೆಯನ್ನು ಮೀರದಂತೆ ಕಳುಹಿಸಬೇಕು. ಪ್ರತಿಷ್ಠಾಪನಾ ಕಲೆಯು(ಇನ್‌ಸ್ಟಾಲೇಷನ್ಗೆ 10*10*10 ಅಡಿ ಅಳತೆ ಮೀರದಂತೆ ಕಲಾಕೃತಿಯ ವಿಭಿನ್ನ ನೋಟಗಳ ಛಾಯಾಚಿತ್ರಗಳನ್ನು ದಾಖಲೆಗಳೊಂದಿಗೆ ಸಲ್ಲಿಸಬೇಕು.
೬. ಅನುಸೂಚಿಯನ್ನು ಸರಿಯಾಗಿ ಭರ್ತಿಮಾಡಿ ಮೂಲ ಕಲಾಕೃತಿಗಳ, ಛಾಯಾಚಿತ್ರಗಳೊಂದಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಅರ್ಜಿಯನ್ನು 21.09.2024 ರೊಳಗೆ (ಸರ್ಕಾರಿ ರಜಾ ದಿನಗಳನ್ನು ಹೊರತು ಪಡಿಸಿ) ಕಳುಹಿಸಬೇಕು. ಅವಧಿ ಮುಗಿದ ನಂತರ ಬರುವ ಯಾವುದೇ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ತಡವಾದ ಅಂಚೆ, ಕೊರಿಯರ್‌ಗಳಿಗೆ ಅಕಾಡೆಮಿಯು ಜವಾಬ್ದಾರಿಯಾಗಿರುವುದಿಲ್ಲ.
೭. ವ್ಯಕ್ತಿ ಪರಿಚಯ, ದೂರವಾಣಿ/ಮೊಬೈಲ್ ಸಂಖ್ಯೆ/ಆಧಾರ್ ಸಂಖ್ಯೆ, ಇ-ಮೇಲ್ ಹಾಗೂ ಕಲಾವಿದರ ಭಾವಚಿತ್ರದೊಂದಿಗೆ, ಕಲಾಕೃತಿಯ “6*8” ಅಳತೆಯ ಛಾಯಾಚಿತ್ರಗಳನ್ನು ಮಾತ್ರ ಸ್ವೀಕರಿಸಲಾಗುವುದು.
೮. ಪ್ರವೇಶ ಶುಲ್ಕ ರೂ.300/-ಗಳ ನಗದು ಅಥವಾ ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಸಲ್ಲುವಂತೆ ಪಡೆದ ಡಿ.ಡಿ.ಮೂಲಕ ಅಕಾಡೆಮಿಗೆ ನೀಡಿ ರಸೀದಿ ಪಡೆಯಬೇಕು.(ಬಿ.ಪಿ.ಎಲ್ ಕಾರ್ಡ್ ಇದ್ದವರಿಗೆ ಪ್ರವೇಶ ಶುಲ್ಕದಿಂದ ವಿನಾಯಿತಿ ಇದೆ, ಕಡ್ಡಾಯವಾಗಿ ಅರ್ಜಿಯೊಂದಿಗೆ ಬಿ.ಪಿ.ಎಲ್ ಕಾರ್ಡ್ನ ಪ್ರತಿಯನ್ನು ಲಗತ್ತಿಸುವುದು)
೯. ವಾರ್ಷಿಕ ಕಲಾಪ್ರದರ್ಶನ/ಬಹುಮಾನಕ್ಕೆ ಕಲಾವಿದರು ಪ್ರವೇಶಪತ್ರ ಹಾಗೂ ಇತರೆ ದಾಖಲೆಗಳನ್ನು ನೇರವಾಗಿ ಅಕಾಡೆಮಿಗೆ ತಲುಪಿಸಬೇಕು.
೧೦. 52ನೇ ವಾರ್ಷಿಕ ಬಹುಮಾನದ ಆಯ್ಕೆಗೆ, ತೀರ್ಪುಗಾರರದೇ ಅಂತಿಮ ತೀರ್ಮಾನವಾಗಿರುತ್ತದೆ.
೧೧. ಆಯ್ಕೆಯಾದ ಕಲಾವಿದರು ಅರ್ಜಿ ನಮೂನೆಯಲ್ಲಿ ತಮ್ಮ ಕಲಾಕೃತಿಯ ಮಾಧ್ಯಮದ ವಿವರಗಳನ್ನು ಸ್ಪಷ್ಟವಾಗಿ ತಿಳಿಸುವುದು.
೧೨. ಇನ್ನೂ ಹೆಚ್ಚಿನ ಮಾಹಿತಿಯನ್ನು 52ನೇ ವಾರ್ಷಿಕ ಕಲಾಪ್ರದರ್ಶನ-೨೦೨೪ರ ವಿವರಣ ಪತ್ರದಲ್ಲಿ ನಮೂದಿಸಲಾಗಿರುತ್ತದೆ.
೧೩. ಅನ್ ಲೈನ್ ಮೂಲಕ https://lalitkala.karnataka.gov.in/ ನಲ್ಲಿ ಅರ್ಜಿ ಪಡೆಬಹುದು.

ಮೇಲ್ಕಂಡ ಅವಧಿಯಲ್ಲಿ ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ,2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002, ಇವರಿಗೆ ಖುದ್ದಾಗಿ ಅಥವಾ ರೂ.10/-ಗಳ ಅಂಚೆ ಚೀಟಿ ಲಗತ್ತಿಸಿದ ಸ್ವ-ವಿಳಾಸವುಳ್ಳ(ದೂರವಾಣಿಯ ಸಂಖ್ಯೆಯೊಂದಿಗೆ)ಲಕೋಟೆಯನ್ನು ಕಳುಹಿಸಿ ಪಡೆಯಬಹುದಾಗಿದೆ ಅಥವಾ ಕೊರಿಯರ್ ಮೂಲಕ 21 ಸಪ್ಟೆಂಬರ್ 2024ರೊಳಗಾಗಿ ಅರ್ಜಿಯನ್ನು ತಲುಪಿಸಬೇಕಾಗಿ ಕೋರಿದೆ. ಕಳುಹಿಸಲ್ಪಡುವ ಲಕೋಟೆಯ ಮೇಲೆ 52 ನೇ ವಾರ್ಷಿಕ ಕಲಾಪ್ರದರ್ಶನಕ್ಕಾಗಿ ಅರ್ಜಿ ಎನ್ನುವುದನ್ನು ಸ್ಪಷ್ಟವಾಗಿ ಬರೆದಿರಬೇಕು.

ಅರ್ಜಿ ಡೌನ್ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ .
https://lalitkala.karnataka.gov.in/storage/pdf-files/52annaual%20show/2024pro6x6(1).pdf

Leave a Reply