ಕಾಡುಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ

3 years ago

ಲಕ್ಷಾಂತರ ಭಕ್ತರು ಭಾಗಿ

ಬೆಂಗಳೂರು: ಮಲ್ಲೇಶ್ವರಂನ ಶ್ರೀ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲೇಶ್ವರ ಸ್ವಾಮಿ ದೇವಸ್ಥಾನ ಮತ್ತು ಕಾಡುಮಲ್ಲೇಶ್ವರ ಗೆಳಯರ ಬಳಗ ಸಹಯೋಗ ಕಾಡುಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ ಸಮಾರಂಭ ನಡೆಯಿತು.

ರಥಗಳಿಗೆ ಶಾಸ್ತ್ರಬದ್ದವಾಗಿ ಕಳಸಪೂಜೆ ಪೂಜೆ ಮಾಡಿ, ಹೋಮಹವನ ನೇರವೆರಿಸಿ, ಭಕ್ತರಿಂದ ಹಗ್ಗ ಕಟ್ಟಿ ರಥ ಎಳೆಯಲು ಚಾಲನೆ ನೀಡಲಾಯಿತು.

ಶ್ರೀ ಕಾಡುಮಲ್ಲಿಕಾರ್ಜುನ ಮತ್ತು ಗಣೇಶ, ಸುಬ್ರಮಣ್ಯ ದೇವರುಗಳನ್ನು ಮೂರು ರಥಗಳಲ್ಲಿ ಭವ್ಯ ಮೆರವಣಿಗೆಯಲ್ಲಿ ಮಲ್ಲೇಶ್ವರಂ ರಾಜ ಬೀದಿಗಳಲ್ಲಿ ಮೆರವಣಿಗೆ ಸಾಗಿತು.

ಬಂದ ಭಕ್ತರಿಗೆ ಪುಳಿಯೋಗರೆ, ಪಲಾವ್ ಮತ್ತು ಕೊಸಂಬರಿ, ಪಾನಕ, ಮಜ್ಜಿಗೆ ವಿತರಿಸಲಾಯಿತು.

ಭಕ್ತರ ಸಂಕಷ್ಟಗಳ ನಿವಾರಣೆಗಾಗಿ ಮೆಣಸು, ಉಪ್ಪು ರಥಕ್ಕೆ ಸಮರ್ಪಣೆ ಮಾಡಿದರು, ರಥಕ್ಕೆ ಎಲಕ್ಕಿ ಬಾಳೆಹಣ್ಣು, ಧವನವನ್ನು ಎರಚುವ ಮೂಲಕ ಇಷ್ಟಾರ್ಥ, ಬಯಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.

  • ಹಾರಿಕಾ ಮಂಜುನಾಥ್ ವಿದೇಶಿ ವಿಶ್ವವಿದ್ಯಾಲಯಗಳಿಂದ ಡಿಗ್ರಿ ಪಡೆದಿದ್ದಾರೆಯೇ?
    ಫ್ಯಾಕ್ಟ್‌ಚೆಕ್: ಕ್ಲೈಮ್ (ಸಾಮಾಜಿಕ ಜಾಲತಾಣಗಳಲ್ಲಿನ ಹೇಳಿಕೆ): ಕನ್ನಡದ ಭಾಷಣಗಾರ್ತಿ ಹಾರಿಕಾ ಮಂಜುನಾಥ್ ಅವರು ವಿದೇಶಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ 10ಕ್ಕೂ ಹೆಚ್ಚು ಅಧಿಕೃತ ಪದವಿಗಳನ್ನು (Degrees) ಪಡೆದಿದ್ದಾರೆ ಎಂದು ಫೋಟೋ ಸಹಿತ ಪೋಸ್ಟ್‌ಗಳು ಹರಿದಾಡುತ್ತಿವೆ. ಫ್ಯಾಕ್ಟ್‌ಚೆಕ್ ತೀರ್ಪು: ಸುಳ್ಳು / ತಪ್ಪು ಮಾಹಿತಿವಿವರವಾದ ಪರಿಶೀಲನೆ ಪ್ರಮಾಣಪತ್ರಗಳ ಸತ್ಯಾಸತ್ಯತೆ: ವೈರಲ್ ಆಗಿರುವ ಫೋಟೋದಲ್ಲಿ ಹಾರಿಕಾ ಮಂಜುನಾಥ್ ಅವರು ಪ್ರದರ್ಶಿಸಿರುವ ಫ್ರೇಮ್ ಮಾಡಲಾದ ಪತ್ರಗಳು Coursera ನಂತಹ ಆನ್‌ಲೈನ್ ವೇದಿಕೆಗಳ ಕೋರ್ಸ್ ಮುಕ್ತಾಯ ಪ್ರಮಾಣಪತ್ರಗಳು. ಪದವಿ ಪ್ರಮಾಣಪತ್ರಗಳಲ್ಲ: ಈ ಪ್ರಮಾಣಪತ್ರಗಳ ವಿನ್ಯಾಸ… Read more: ಹಾರಿಕಾ ಮಂಜುನಾಥ್ ವಿದೇಶಿ ವಿಶ್ವವಿದ್ಯಾಲಯಗಳಿಂದ ಡಿಗ್ರಿ ಪಡೆದಿದ್ದಾರೆಯೇ?
  • ಪೌರ ಕಾರ್ಮಿಕರ ದಿರಿಸಿನಲ್ಲಿ ಡಿ ಕೆ ಶಿವಕುಮಾರ್
    “ಮಗಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಮಗಳನ್ನು ನಾನು ಶಾಲೆಗೆ ಬಿಡಲು ಹೋದಾಗ ಮಗಳ ಸಹಪಾಠಿ, “ನಿಮ್ಮಮ್ಮ ಕಾರ್ಪೋರೇಶನ್ ಯುನಿಫಾರ್ಮ್ ಹಾಕ್ಕೊಂಡು ಬಂದಿದ್ದಾರೆ, ವಾಸನೆ.. ದೂರ ಕೂತ್ಕೋ..ನನ್ನ ಪಕ್ಕ ಬರಬೇಡ” ಅಂತ ಹೀಯಾಳಿಸಿ ದೂರ ತಳ್ಳಿದಳಂತೆ!” ಅರಮನೆ ಮೈದಾನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ, ಈ ಘಟನೆಯನ್ನು ನೆನೆದು ಪೌರಕಾರ್ಮಿಕೆ ತಾಯಿಯೊಬ್ಬರು ಕಣ್ಣೀರು ಹಾಕಿದ ವಿಡಿಯೋ ನೋಡಿ ಮನಸ್ಸಿಗೆ ಅತೀವ ನೋವಾಯಿತು. ಶ್ರಮದಲ್ಲೇ ಶಿವನನ್ನು ಕಾಣುವ ಪೌರಕಾರ್ಮಿಕರೇ ನಿಜವಾದ ಕಾಯಕಯೋಗಿಗಳು. ಅವರಿಲ್ಲದೆ ನಮ್ಮ ನಗರಗಳು ಸ್ವಚ್ಛವಾಗಿರಲು ಹಾಗೂ ನಾವೆಲ್ಲರೂ ಆರೋಗ್ಯವಾಗಿರಲು… Read more: ಪೌರ ಕಾರ್ಮಿಕರ ದಿರಿಸಿನಲ್ಲಿ ಡಿ ಕೆ ಶಿವಕುಮಾರ್
  • ಹಾಸನದಲ್ಲಿ ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಸಮಾವೇಶ
    3ನೇ ರಾಜ್ಯ ಮಟ್ಟದ ವೈಚಾರಿಕ ಸಂವಾದ ಹಾಸನ:ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ಹಾಸನದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ (ಕೆ.ಟಿ. ಶಿವಪ್ರಸಾದ್ ವೇದಿಕೆ) 2026ರ ಸೆಪ್ಟೆಂಬರ್ 27ರ ಭಾನುವಾರದಂದು ‘ನಾನೇಕೆ ನಾಸ್ತಿಕ’ ಶೀರ್ಷಿಕೆಯಡಿ 3ನೇ ರಾಜ್ಯ ಮಟ್ಟದ ವೈಚಾರಿಕ ಸಂವಾದ ಸಮಾವೇಶವನ್ನು ಫಿರಾ, ನೇಗಿಲ ಯೋಗಿ ಟ್ರಸ್ಟ್, ಅಖಿಲ ಕರ್ನಾಟಕ ವಿಚಾರ ವೇದಿಕೆ ಮತ್ತುಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ, BGVS, SFI, DYFI, AIYF, JMS, AITUC, CITU, KPRS,… Read more: ಹಾಸನದಲ್ಲಿ ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಸಮಾವೇಶ
  • ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 25 ಸೀಟು ಕೂಡ ಬರುವುದಿಲ್ಲ: ಆರ್‌.ಅಶೋಕ
    ಬೆಂಗಳೂರು: ವಿಶೇಷ ಅಧಿವೇಶನದಲ್ಲಿ ತಿಪ್ಪೆ ಸಾರಿಸುವ ಕೆಲಸ ಮಾಡಿರುವ ಕಾಂಗ್ರೆಸ್‌ ಸರ್ಕಾರ ಭಿಕ್ಷುಕರಿಗೆ ನೀಡುವಂತೆ ಪರಿಹಾರ ನೀಡಿದೆ. ಅನ್ನದಾತ ರೈತರಿಗೆ ಅಪಮಾನ ಮಾಡಿ ಭ್ರಮನಿರಸನ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ಅಧಿವೇಶನದಲ್ಲಿ ಸರ್ಕಾರ ರೈತರಿಗೆ ಉತ್ತಮ ಪರಿಹಾರ ನೀಡಲಿದೆ ಅಥವಾ ಸಾಲಮನ್ನಾ ಮಾಡಲಿದೆ ಎಂದುಕೊಂಡಿದ್ದೆವು. ಆದರೆ 2,500 ರೂ. ಪರಿಹಾರ ನೀಡುವ ಮೂಲಕ ಭ್ರಮನಿರಸನವಾಗಿದೆ ಎಂದರು. ಎನ್‌ಡಿಆರ್‌ಎಫ್‌ ಮಾರ್ಗಸೂಚಿ ನೋಡಿದರೆ ಎಕರೆಗೆ 8000 ರೂ. ಪರಿಹಾರ ನೀಡಬೇಕಾಗುತ್ತದೆ.… Read more: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 25 ಸೀಟು ಕೂಡ ಬರುವುದಿಲ್ಲ: ಆರ್‌.ಅಶೋಕ
  • ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
    ನಕಲಿ ಔಷಧಿ ತಯಾರಕರು ಮತ್ತು ಮಾರಾಟಗಾರರನ್ನು ದೇಶದ್ರೋಹಿ ಕಾನೂನಿನ ಅಡಿಯಲ್ಲಿ ಶಿಕ್ಷಿಸಿ ಲಕ್ಷಾಂತರ ಜನರ ಬದುಕಿನೊಂದಿಗೆ ತಮ್ಮ ಹಣದ ದಾಹವನ್ನ ತೀರಿಸಿಕೊಳ್ಳುತ್ತಿರುವ ನಕಲಿ ಔಷಧಿ ತಯಾರಕರು ಮತ್ತು ಮಾರಾಟಗಾರರನ್ನು ದೇಶದ್ರೋಹಿ ಕಾನೂನಿನ ಅಡಿಯಲ್ಲಿ ಬಂಧಿಸಿ ಶಿಕ್ಷಿಸಬೇಕು. ಇವರು ಮಾಡಿರುವ ಹೀನ ಕೃತ್ಯದಿಂದ ಲಕ್ಷಾಂತರ ರೋಗಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಜನರ ಜೀವಗಳ ಜೊತೆಯಲ್ಲಿ ತಮ್ಮ ಸ್ವಾರ್ಥಕ್ಕಾಗಿ ಮೋಸದ ವ್ಯಾಪಾರವನ್ನು ಮಾಡಿರುವ ಇವರ ಅಪರಾಧ ಅಂತಿಂತಹ ಅಪರಾಧವಲ್ಲ. ನಿಜಕ್ಕೂ ಇವರಿಗೆ ಕಠಿಣ ಶಿಕ್ಷೆಗಳಾಗಬೇಕು. ಹಲವಾರು ಆಸ್ಪತ್ರೆಗಳಲ್ಲಿ ಇರುವ ಮೆಡಿಕಲ್ ಸ್ಟೋರ್… Read more: ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ

ಬ್ರಹ್ಮರಥೋತ್ಸವದಲ್ಲಿ ಕಂಸಾಳೆ, ವೀರಗಾಸೆ, ಪಟ ಕುಣಿತ, ಡೊಳ್ಳು ಮತ್ತು ತಮಟೆ ವಾದ್ಯ ನೂರಕ್ಕೂ ಹೆಚ್ಚು ಕಲಾತಂಡಗಳು, ಸಾವಿರಾರು ಕಲಾವಿದರುಗಳು ಮೆರವಣಿಗೆ ಕಲಾ ಪ್ರದರ್ಶನ ನೀಡಿದರು.

ಕಾಡು ಮಲ್ಲೇಶ್ವರ ಗೆಳಯರ ಬಳಗ ಅಧ್ಯಕ್ಷರಾದ ಬಿ.ಕೆ.ಶಿವರಾಂರವರು ಮಾತನಾಡಿ ಕಳೆದ 16 ವರ್ಷಗಳಿಂದ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆದುಕೊಂಡು ಬರಲಾಗುತ್ತಿದೆ.

ಭಕ್ತರ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿದೆ. ಕಾಡುಲ್ಲಿಕಾರ್ಜುನ ದೇವರು ದರ್ಶನ ಪಡೆದ ಭಕ್ತರಿಗೆ ಇಲ್ಲಿಗೆ ಬಂದ ಮೇಲೆ ಮನಸ್ಸಿಗೆ ನೆಮ್ಮದಿ ಮತ್ತು ಕುಟುಂಬ ಶ್ರೇಯೋಭಿವೃದ್ದಿಯಾಗುತ್ತಿದೆ ಎಂದು ಲಕ್ಷಾಂತರ ಭಕ್ತರು ಹೇಳುತ್ತಾರೆ.

ಶ್ರೀ ಕಾಡುಮಲ್ಲಿಕಾರ್ಜುನ ಬ್ರಹ್ಮರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆದು ರಥವನ್ನು ಏಳೆಯುವ ಮೂಲಕ ಭಕ್ತಿಭಾವ ಮೆರೆದರು.

ಶಿವ, ಗಣೇಶ ಸುಬ್ರಮಣ್ಯ ದೇವರುಗಳಿಗೆ ಅದ್ದೂರಿಯಾಗಿ ಅಲಂಕರಿಸಿ ರಥೋತ್ಸವ ಮೂಲಕ ಶಿವರಾತ್ರಿಯ ಎರಡು ದಿನ ಸಮಾರಂಭ ಮುಕ್ತಾಯಗೊಳ್ಳಲಿದೆ. 

Leave a Reply