ಪಂಚಮಸಾಲಿ ಹೋರಾಟಗಾರರ ಮೇಲೆ ಬೆಳಗಾವಿಯಲ್ಲಿ ಪೊಲೀಸರು ಅಮಾನುಷವಾಗಿ ಲಾಠಿ ಚಾರ್ಜ್ ಮಾಡಿರುವುದು ಅತ್ಯಂತ ಖಂಡನೀಯವಾಗಿದ್ದು, @INCKarnataka ಸರ್ಕಾರ ತನ್ನ ಹಿಟ್ಲರ್ ಧೋರಣೆ ಮೂಲಕ ಪಂಚಮಸಾಲಿಗಳ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಸಿಎಂ @siddaramaiah ನವರೇ, ತಮ್ಮ ಹಿಟ್ಲರ್ ಆಡಳಿತದಲ್ಲಿ ರಾಜ್ಯದ ಜನತೆ ತಮ್ಮ ಹಕ್ಕುಗಳಿಗಾಗಿ ಶಾಂತಿಯುತ ಪ್ರತಿಭಟನೆ ಮಾಡಲೂ ಅವಕಾಶವಿಲ್ಲವೇ? ಬಾಯಲ್ಲಿ ಬಸವಣ್ಣನ ವಚನ ಹೇಳಿ ಕೈಯಲ್ಲಿ ಲಾಠಿ ಪ್ರಹಾರ ಮಾಡುವ ತಮ್ಮದು ಯಾವ ಸೀಮೆ ಸಿದ್ಧಾಂತ ಸ್ವಾಮಿ?
ಪ್ರತಿಭಟನಾಕಾರರಿಗೆ ರಕ್ತ ಬರುವಂತೆ ಪೊಲೀಸರು ಲಾಠಿಯಿಂದ ಹೊಡೆದಿದ್ದಾರಲ್ಲ, ಪೊಲೀಸರು ಯಾರ ಅಣತಿಯಂತೆ ಈ ದುಸ್ಸಾಹಸ ಮಾಡಿದ್ದಾರೆ?
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಜನರ ಹಕ್ಕು. ಜನರ ಸಮಸ್ಯೆ ಆಲಿಸಿ ಅವರಿಗೆ ಸಮಾಧಾನ ಹೇಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿರುವುದು ಸರ್ಕಾರದ ಕರ್ತವ್ಯ. ಈ ರೀತಿ ಮುತ್ಸದ್ಧಿತನ ತೋರುವುದು ಬಿಟ್ಟು, ಏಕಾಏಕಿ ಲಾಠಿ ಚಾರ್ಚ್ ಮಾಡುವ ಮೂಲಕ ಒಂದು ಸಮುದಾಯವನ್ನು ಪ್ರಚೋದನೆ ಮಾಡಿ ರೊಚ್ಚಿಗೇಳಿಸುವುದು ಯಾವ ಸೀಮೆ ಆಡಳಿತ? ಯಾವ ಸೀಮೆ ನಾಯಕತ್ವ?
ಪ್ರತಿಭಟನಾಕಾರರನ್ನ ಕರೆಸಿ ಮಾತನಾಡಿ. ಅವರ ಮೀಸಲಾತಿ ಬೇಡಿಕೆ ಬಗ್ಗೆ ತಮ್ಮ ನೀಲಿವೇನು ಎನ್ನುವುದನ್ನ ಸ್ಪಷ್ಟ ಪಡಿಸಿ. ಪರಿಸ್ಥಿತಿ ಕೈಮೀರಿಹೋಗುವ ಮುನ್ನ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ.
– ಆರ್ ಅಶೋಕ್, ವಿಧಾನಸಭೆ ವಿಪಕ್ಷ ನಾಯಕ




