ಧಾರವಾಡ: 2025-26ನೇ ಸಾಲಿಗೆ ಧಾರವಾಡ ಕ್ರೀಡಾ ಶಾಲೆಗೆ ಅಥ್ಲೆಟಿಕ್ಸ್, ಹಾಕಿ ಮತ್ತು ಕುಸ್ತಿ ಕ್ರೀಡೆಗಳಲ್ಲಿ ಕಿರಿಯ ಅಭ್ಯರ್ಥಿಗಳನ್ನು ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡುವ ಸಲುವಾಗಿ ಪ್ರತಿಭಾವಂತ ಕ್ರೀಡಾಪಟುಗಳ ದೈಹಿಕ ಪರೀಕ್ಷೆಯನ್ನು ಜನವರಿ 22, 2025 ರಂದು ಬೆಳಿಗ್ಗೆ 10 ಗಂಟೆಗೆ ಧಾರವಾಡ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಕಿರಿಯ ವಿಭಾಗದಲ್ಲಿ ವಿದ್ಯಾರ್ಥಿಗಳು ಜನವರಿ 1, 2025 ಕ್ಕೆ 11 ವರ್ಷದೊಳಗಿರಬೇಕು. ಅಥ್ಲೆಟಿಕ್ಸ್, ಹಾಕಿ ಕ್ರೀಡೆಯಲ್ಲಿ ಆಯ್ಕೆಗೆ ಬರುವ ಕ್ರೀಡಾ ಪಟುಗಳು ಕನಿಷ್ಠ 143 ಸೆ.ಮೀ ಎತ್ತರ ಇರಬೇಕು. ಕುಸ್ತಿ ಕ್ರೀಡೆಯಲ್ಲಿ ಬಾಲಕರು ಕನಿಷ್ಠ 35 ಕೆ.ಜಿ, ಬಾಲಕಿಯರು ಕನಿಷ್ಠ 30 ಕೆ.ಜಿ ತೂಕ ಹೊಂದಿರಬೇಕು. ವಿವಿಧ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಲಾಗುವುದು. ಆಸಕ್ತ ಕ್ರೀಡಾಪಟುಗಳು ಪೋಷಕರೊಂದಿಗೆ ಭಾಗವಹಿಸಬಹುದು.




