ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟನೆ ಮಾಡಿದ ಚಲನಚಿತ್ರ ನಟಿ

ಬೆಂಗಳೂರು: ಮಹಾಲಕ್ಷ್ಮಿಲೇಔಟ್ ವಿಧಾನಸಭಾ ವ್ಯಾಪ್ತಿಯಲ್ಲಿ ಶಂಕರಮಠ ವಾರ್ಡ್ ನಲ್ಲಿ ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಬ್ಯಾಡ್ಮಿಂಟನ್ ಪಂದ್ಯಾವಳಿ ಸ್ಪಂದನ ಕಪ್-2024 ಆಯೋಜನೆ ಮಾಡಲಾಗಿತ್ತು.

ಇದೇ ವೇಳೆ ಮಾತನಾಡಿದ ಭಾವನಾ ರಾಮಣ್ಣ, ಮಹಿಳೆಯರು ಇಂದು ಚಲನಚಿತ್ರ, ವಿಜ್ಞಾನ ತಂತ್ರಜ್ಞಾನ, ಚಲನಚಿತ್ರ, ಕ್ರೀಡಾರಂಗ ರಾಜಕೀಯ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಸೈನಾ ನೇಹವಾಲ್, ಪಿ.ವಿ.ಸಿಂಧು, ಜ್ವಾಲಾ ಗುಟ್ಟಾ ಸೇರಿದಂತೆ ನೇಕ ಮಹಿಳೆಯರು ದೇಶಕ್ಕಾಗಿ ಆಡಿದ್ದಾರೆ. ಕ್ರೀಡೆಯಲ್ಲಿ ಮಹಿಳೆಯರ ಪಾತ್ರ ಡೊಡ್ಡದು, ಒಲಂಪಿಕ್, ಏಷಿಯನ್ ಗೇಮ್ಸ್ ಅಂತರಾಷ್ಟ್ರಿಯ ಮಟ್ಟದಲ್ಲಿ ನಮ್ಮ ದೇಶದ ಮಹಿಳೆಯರು ಪದಕ ಗೆದ್ದಿ ರಾಷ್ಟ್ರ ಕೀರ್ತಿ ತಂದಿದ್ದಾರೆ ಎಂದರು.

ಎಮ್.ಶಿವರಾಜು ಮಾತನಾಡಿ, ಮನುಷ್ಯ ಆರೋಗ್ಯವಂತರಾಗಿ ಬದುಕು ಸಾಗಿಸಲು, ರೋಗ ಮುಕ್ತ ಸಮಾಜ ನಿರ್ಮಾಣ ಮಕ್ಕಳಿಂದ ಹಿರಿಯರುಗೂ ಕ್ರೀಡಾ ಚಟುವಟಿಕೆ ಮುಖ್ಯ. ನಮ್ಮ ಕ್ಷೇತ್ರದಲ್ಲಿ ಉತ್ತಮ ಕ್ರೀಡಾಪಟುಗಳು ಇದ್ದಾರೆ, ಅವರಿಗೆ ಸಹಕಾರ, ಪ್ರೋತ್ಸಹ ನೀಡಲು ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.

ಬಾಲಕ ವಿಭಾಗ ಬಾಲಕಿಯರು ಮತ್ತು ಪುರುಷರ, ಮಹಿಳೆ ಬ್ಯಾಡ್ಮಿಂಟನ್ ನೂರಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಮೋಹನ್ ಕುಮಾರ್, ಅಂತರಾಷ್ಟ್ರೀಯ ಯೋಗಪಟು ಕಮಲಕಣ್ಣನ್, ಸುದೀಂದ್ರಚಾರ್, ವಿಶಾಲಾಕ್ಷ್ಮಿ ಶಿವರಾಜು, ಕೆಂಪೇಗೌಡ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ರವಿಕಾಂತ್ ಮೊದಲಾದವರು ಉಪಸ್ಥಿತರಿದ್ದರು.



