ಡಾ.ಬಿ.ಆರ್.ಅಂಬೇಡ್ಕರ್ ಜೊತೆ ಕಟ್ಟೇಪುರಾಣದ ಬಿ.ಚಂದ್ರೇಗೌಡರು

3 years ago

#BChandraGowda #Kattepurana #BRAmbedkar #jagadishkoppa

ಇಂದು ಸಚಿವ ಡಾ.ಹೆಚ್.ಸಿ. ಮಹಾದೇವಪ್ಪ ಅವರ ಸಂವಿಧಾನದ ನೆರಳಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯಿತು. ಮಿತ್ರರಾದ ಬಂಜಗೆರೆ ಜಯಪ್ರಕಾಶ್, ಕೆ.ವೈ.ನಾರಾಯಣ ಸ್ವಾಮಿ ಹಾಗೂ ಹಂಸಲೇಖ ಬಂದಿದ್ದರು.

ಶಿವಮೊಗ್ಗದಿಂದ ಬಿ.ಚಂದ್ರೇಗೌಡ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಸಂವಿಧಾನ ಪೀಠಿಕೆಗೆ ಹಂಸಲೇಖ ಸಂಗೀತ ಸಂಯೋಜನೆ ಮಾಡಿ ಅದನ್ನು ಗಂಗೂಬಾಯಿ ಹಾನಗಲ್ ಸಂಗೀತ ವಿ.ವಿ. ವಿದ್ಯಾರ್ಥಿಗಳಿಂದ ಹಾಡಿಸಿದರು.

ಈ ಸಂದರ್ಭದಲ್ಲಿ ಮೈಸೂರಿನ ಬಿ.ಎಸ್.ಎನ್.ಎಲ್. ಸಂಸ್ಥೆಯ ಮಾಜಿ ಉದ್ಯೋಗಿ ವೇಣುಗೋಪಾಲ್ ಎಂಬುವರು ಅಂಬೇಡ್ಕರ್ ವೇಷದಲ್ಲಿ ಹಾಜರಿದ್ದು ನಮಗೆಲ್ಲಾ ಅಚ್ಚರಿ ಮೂಡಿಸಿದರು.

ಅವರನ್ನು ಮಾತನಾಡಿಸಿ ಅವರ ಚಿತ್ರ ತೆಗೆಯುವಾಗ ಚಂದ್ರೇಗೌಡ, ಇರು ಗುರುವೇ ನಾನು ಅವರ ಪಕ್ಕದಲ್ಲಿ ನಿಂತುಕೊಳ್ಳುತ್ತೇನೆ ಎಂದು ಹೇಳಿ ನಿಂತು ಫೋಟೊ ತೆಗೆಸಿಕೊಂಡರು.

ಅವರಿಗೆ ವಾಟ್ಸ್ ಅಪ್ ನಲ್ಲಿ ಪೋಟೊ ಕಳಿಸಿ ಇದನ್ನು ನಾನು ಹುಷರಾಗಿ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದೆ. ಏಕೆ ಎಂದು ಪ್ರಶ್ನಿಸಿದರು. ನಾಳೆ ನಿಮ್ಮ ಬಗ್ಗೆ ಕಟ್ಟೆಪುರಾಣ ಎಂಬ ಅಭಿನಂದನಾ ಗ್ರಂಥ ಬಂದರೆ, ಅದರಲ್ಲಿ ನಾನು ನಿಮ್ಮ ಬಗ್ಗೆ ಬಳಂಗ್ ಪುರಾಣ ಎಂಬ ಲೇಖನ ಬರೆಯುತ್ತೀನಿ ಎಂದೆ.

ಡಾ.ಅಂಬೇಡ್ಕರ್ ಅವರು 1949ರ ವೇಳೆಗೆ ಸಂವಿಧಾನ ರಚಿಸಿ ದೇಶದ ಎಲ್ಲಾ ಕಾನೂನು ತಜ್ಞರಿಗೆ ತೋರಿಸಿ ಅಭಿಪ್ರಾಯ ಪಡೆದಿದ್ದರೂ ಸಹ ಅವರಿಗೆ ತೃಪ್ತಿಯಾಗಿರಲಿಲ್ಲ. ಆ ಸಂದರ್ಭದಲ್ಲಿ ನಮ್ಮ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಿಂದ ಖ್ಯಾತ ಚಿಂತಕ ಹಾಗೂ ತಜ್ಞ ಬಿ.ಚಂದ್ರೇಗೌಡರು ದೆಹಲಿಗೆ ಹೋಗಿ ಅಂಬೇಡ್ಕರ್ ಅವರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಸಂವಿಧಾನ ಜಾರಿಗೆ ಬರಲು ಶ್ತಮಿಸಿದರು ಎಂಬ ಲೇಖನ ಬರೆಯುತ್ತೀನಿ  ಸರಿಯಲ್ಲವೆ? ಎಂದು ಗೌಡರನ್ನು ಕೇಳಿದೆ.

ಸಖತ್ತಾಗಿದೆ. ಹಾಗೆ ಬರಿ ಗುರುವೇ, ವಾಟ್ಸ್ ಅಪ್ ಯೂನಿವರ್ಸಿಟಿ ಪ್ರೊಫೆಸರ್ ಮತ್ತು ವಿದ್ಯಾರ್ಥಿಗಳು ಎಂಬ ನನ್ನ ಮಕ್ಳು ಮೂರು ತಿಂಗಳು ಮೇಲಕ್ಕೆ ಏಳದ ಹಾಗೆ ಮೂರ್ಚೆ ಬೀಳೋದು ಗ್ಯಾರಂಟಿ ಎಂದು ಅನುಮೋದನೆ ನೀಡಿದರು.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply