ಸ್ಮಾರಕ, ಸಮಾಧಿ ಎಂದು ಬಡಿದಾಡುವ ನಾಯಕರುಗಳ ನಡುವೆ ಅಂಗಾಂಗ ದಾನ, ದೇಹ ದಾನ ಮಾಡುವ ಸಾಮಾನ್ಯರು ಅಸಾಮಾನ್ಯರಲ್ಲವೇ?
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಳು ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಳು ನಿಧನರಾದ ಸಂದರ್ಭದಲ್ಲಿ ಅವರ ಸಾಧನೆ ಮತ್ತು ಹಿರಿಮೆಗೆ ತಕ್ಕಹಾಗೆ ಸ್ಮಾರಕ ಇಲ್ಲವೇ ಸಮಾಧಿಯನ್ನು ನಿರ್ಮಿಸಬೇಕೆಂದು ಅವರ ಕುಟುಂಬದವರು ಮತ್ತು ಅವರ ಅನುಯಾಯಿಗಳು ಬಯಸುತ್ತಲೇ ಇರುತ್ತಾರೆ. ಇದರ ನಡುವೆ ಜನಸಾಮಾನ್ಯರು ತಮ್ಮ ಕುಟುಂಬದ ಪ್ರೀತಿಯ ಬಂಧುಗಳನ್ನ ತಾವು ಹೆತ್ತ ಮಕ್ಕಳನ್ನು ಮೆದುಳು ನಿಷ್ಕ್ರಿಯಗೊಂಡು ಸಾವಿನ ಅಂಚಿಗೆ ತಲುಪಿದಂತವರ ದೇಹವನ್ನು ಇಲ್ಲವೇ ಅಂಗಾಂಗವನ್ನು ದಾನ ಮಾಡುವುದರ ಮೂಲಕ ಸಾಮಾನ್ಯರು ಅಸಮಾನ್ಯರಾಗುತ್ತಾರೆ. ಆದರೆ ನಾವು ಎಲ್ಲರೂ ದೊಡ್ಡವರು ಎಂದು ಕರೆಯುವ ಬಹಳಷ್ಟು ಮಂದಿಯ ಮನೆಯವರಾಗಲಿ ಅಥವಾ ಅವರ ಅನುಯಾಯಿಗಳಾಗಲಿ ಇವರುಗಳು ನಿಧನರಿದಾಗ ಇವರ ದೇಹವನ್ನು ದಾನ ಮಾಡಿದ ಉದಾಹರಣೆಗಳಿಲ್ಲ. ಇದ್ದರೂ ಇನ್ನು ಅಂಗಾಂಗ ದಾನ ಅಪರೂಪವೇ ಸರಿ. ನೇತ್ರದಾನ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ನಡೆದಿರುತ್ತದೆ.
ಜನಸಾಮಾನ್ಯರಲ್ಲಿರುವಂತಹ ಸಾಮಾಜಿಕ ಬದ್ಧತೆ ಮತ್ತು ನಿಸ್ವಾರ್ಥ ಮನೋಭಾವ ನಮ್ಮ ನಾಯಕರುಗಳ ಅಥವಾ ನಾವು ಪ್ರೀತಿಸುವ ವ್ಯಕ್ತಿಗಳ ಕುಟುಂಬದವರಲ್ಲಿಯೂ ಮೂಡಿ ಬರಬೇಕಲ್ಲವೇ? ಅದೇ ರೀತಿಯಲ್ಲಿ ನಾವು ಆರಾಧಿಸುವ ಎಲ್ಲ ರಂಗದ ಪ್ರಭಾವಿಗಳು ತಮ್ಮ ಸಾವಿನ ನಂತರ ದೇಹವನ್ನು ದಾನ ಮಾಡಿ ಎಂದು ಇಲ್ಲವೇ ಅಂಗಾಂಗವನ್ನು ದಾನ ಮಾಡಿ ಎಂದು ಹೇಳುವಂತಹ ಮನಸ್ಸನ್ನು ಮಾಡಬೇಕಲ್ಲವೇ?
ಸಮಾಧಿಗಳು ಅಥವಾ ಸ್ಮಾರಕಗಳು ಯಾರಿಗೂ ಬದುಕನ್ನು ಕಟ್ಟಿಕೊಡುವುದಿಲ್ಲ. ಇದರ ಬದಲಿಗೆ ಸತ್ತವರ ಹೆಸರಿನಲ್ಲಿ ಒಂದಷ್ಟು ಆಸ್ಪತ್ರೆಗಳನ್ನು ಶಾಲೆಗಳನ್ನು ನಿರ್ಮಿಸಿದರೆ ಬಡವರಿಗೆ ಅನುಕೂಲವಾಗುತ್ತದೆ. ಜೊತೆಗೆ ವೃದ್ಧಾಶ್ರಮಗಳನ್ನ ಸ್ಥಾಪಿಸಿದರೆ ಇದರಿಂದಲೂ ಅನುಕೂಲವಾಗುತ್ತದೆ.
ಅನೇಕರು ಬದುಕಿರುವಷ್ಟು ದಿನ ಸಮಾಜ ಸರ್ಕಾರಗಳಿಗೆ ಹೊರೆಯಾಗಿರುತ್ತಾರೆ. ಅನೇಕ ರೀತಿಯ ಸೌಲತ್ತು ಸೌಲಭ್ಯಗಳಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿರುತ್ತಾರೆ. ಜೊತೆಗೆ ಸತ್ತ ಮೇಲು ಸಮಾಧಿ ಸ್ಮಾರಕಗಳು ಎಂದು ಮತ್ತೆ ಸರ್ಕಾರದ ಹಣ ಪೋಲು ಮಾಡುವುದು, ಇಂತಹ ಸ್ಮಾರಕ ಸಮಾಧಿಗಳನ್ನು ಕಾಯಲು ಒಂದಷ್ಟು ಜನರನ್ನ ನೇಮಿಸುವುದು, ಇದಕ್ಕೊಂದು ಸಂಸ್ಥೆ ಇಲ್ಲವೇ ಸಂಘಟನೆ ಮತ್ತೆ ನಿರ್ವಹಣೆಗೆ ಅನುದಾನ ಇವೆಲ್ಲವೂ ಸಾಮಾನ್ಯವಾದ ಸುದ್ದಿಗಳಾಗಿದೆ.
ಇದರ ನಡುವೆ ಒಂದಷ್ಟು ಜನ ಸಾರ್ವಜನಿಕ ಬದುಕಿನಲ್ಲಿರುವ ಜನ ತಮ್ಮ ಮತ್ತು ತಮ್ಮ ಕುಟುಂಬದವರ ದೇಹವನ್ನು ದಾನ ಮಾಡಲು, ಅಂಗಾಂಗವನ್ನು ದಾನ ಮಾಡಲು ಮನಸ್ಸು ಮಾಡಿದಂತಹ ವ್ಯಕ್ತಿಗಳು ಮಾತ್ರವೇ ದೊಡ್ಡವರಾಗಿ ವ್ಯಕ್ತಿತ್ವವನ್ನು ಬಿಟ್ಟು ಹೋಗಿರುತ್ತಾರೆ.
– ಕೆ ಎಸ್ ನಾಗರಾಜ್, ಬೆಂಗಳೂರು




