ಬೆಂಗಳೂರು: ಸಂಜೆ ಅಂಗಾಂಗ ದಾನ, ರಕ್ತದಾನಕ್ಕೆ ಹೆಸರಾದ ಹೊಸಬೆಳಕು ಟ್ರಸ್ಟಿನ ಖಜಾಂಚಿ ಜಗದೀಶ ಪಾಟೀಲ್ ಪತ್ನಿ ವಿಜಯಲಕ್ಷ್ಮೀ ಪಾಟೀಲ ಅನಾರೋಗ್ಯದಿಂದ ಬಳಲುತ್ತಿದ್ದು ಮನೆಯಲ್ಲಿ ಮೃತಪಟ್ಟಿದ್ದು, ಮೃತರ ಕಣ್ಣುಗಳನ್ನು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ.
ವಿಜಯಲಕ್ಷ್ಮೀ ಅವರ ತಾಯಿ ಶಾಂತಮ್ಮ ಕಂಬನಿ ಮಿಡಿಯುತ್ತಾ ನೇತ್ರದಾನಿ ಪುನೀತ್ ನಮಗೆ ಮಾದರಿ. ಅವರು ಇಂದು ನಾಲ್ಕು ಜನ ಅಂಧರಿಗೆ ಬೆಳಕು ನೀಡಿ ಅಮರರಾಗಿದ್ದಾರೆ. ನಮ್ಮ ಮಗಳ ನೇತ್ರದಾನ ನಮ್ಮ ಕುಟುಂಬದ ಹೆಮ್ಮೆ ಮತ್ತು ಸಂತಸ ತಂದಿದೆ ನಾವು ಕಳೆದುಕೊಂಡಿದ್ದು ಒಬ್ಬ ಮಗಳನ್ನು ಆದರೆ ನನ್ನ ಮಗಳ ಕಣ್ಣುಗಳು ನಾಲ್ಕುಜನರಲ್ಲಿ ಬದುಕಿರುತ್ತವೆ ಎಂದರು.
ಇಡೀ ದೇಶವೇ ಹೆಮ್ಮಾರಿ ಕೊರೋನಾದಿಂದ ಚೇತರಿಸ್ಕೊಳ್ಳುತ್ತಿದ್ದು ಸಾವಿರಾರು ಕಾರ್ನಿಯಾಗಳು ಅಗತ್ಯವಿದ್ದು ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕು ನೀಡಬೇಕೆಂದು ಜಗದೀಶ ಪಾಟೀಲರು ಮನವಿ ಮಾಡಿದರು.
ನೇತ್ರದಾನ ಕಾಯಕದಲ್ಲಿ ಜೊತೆಯಾದದ್ದು ಹೊಸಬೆಳಕು ಟ್ರಸ್ಟಿನ ಜಿಗಣಿರಾಮಕೃಷ್ಣ ನಾರಾಯಣ ನೇತ್ರಾಲಯದ ಡಾ.ದಿವ್ಯಾಂಶಿ,ನೇತ್ರನಿಧಿಯ ಆಶೋಕ್ ಕುಟುಂಬಸ್ತರು ಹಾಜರಿದ್ದರು.
ನೇತ್ರದಾನ – ಅಂಗಾಂಗ ದಾನ – ದೇಹದಾನದ ಸಮಯ ಬಂದಾಗ ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ ಹೊಸಬೆಳಕು ಟ್ರಸ್ಟ್(ರಿ) 9945028899 ಸಂಪರ್ಕಿಸಬಹುದಾಗಿದೆ.
ನೇತ್ರದಾನ – ಅಂಗಾಂಗ ದಾನ – ದೇಹದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ.




