ಕುಂದುಕೊರತೆ ನಿವಾರಣಾ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರುಗಳ ನೇಮಕ: ಅರ್ಜಿ ಆಹ್ವಾನ
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿ
ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ ಬೀದಿಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ) ಅಧಿನಿಯಮ 2014 ರಲ್ಲಿನ 20ನೇ ಪ್ರಕರಣದ 1ನೇ ಉಪ ಪ್ರಕರಣದ ಅಡಿಯಲ್ಲಿ ಹಾಗೂ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ) ಅಧಿನಿಯಮ 2019 ರ ಅಧ್ಯಾಯ 3ರ ಕಲಂ ಸಂಖ್ಯೆ 18ರನ್ವಯ ರಚಿಸಲಾದ ಕುಂದು ಕೊರತೆ ನಿವಾರಣಾ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಅರೆಕಾಲಿಕ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಸ್ಥಾನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳವರು ಅ.15 ರೊಳಗಾಗಿ ಅರ್ಜಿ ಸಲ್ಲಿಸಬಹುದು.
- ಪ್ರತಾಪ್ ಸಿಂಹ ‘ದೇಶಭ್ರಷ್ಟರ’ ಪೋಸ್ಟ್ಗೆ ನೆಟ್ಟಿಗರ ಕಟು ವಿಮರ್ಶೆ
- ಹೆರಿಗೆಯಾದ ಗಂಟೆಯೊಳಗೆ ಮಗುವಿಗೆ ಎದೆಹಾಲು ನೀಡಿ: ಶಿವಾನಂದ ವಿ.ಪಿ
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
ಅಧ್ಯಕ್ಷರ ಹುದ್ದೆಯ ಅರ್ಹತೆ: ನಿವೃತ್ತ ಸಿವಿಲ್ ನ್ಯಾಯಾಧೀಶರು (ಖeಣiಡಿeಜ ಅiviಟ ಎuಜge) ಆಗಿರಬೇಕು, ವಯೋಮಿತಿ 65 ವರ್ಷದೊಳಗಿರಬೇಕು.
ಸದಸ್ಯರುಗಳು ಸ್ಥಾನಗಳ ಅರ್ಹತೆ: ಒಂದು ಸದಸ್ಯ ಸ್ಥಾನಕ್ಕೆ ಸ್ಥಳೀಯ ಪ್ರದೇಶದ ಕಳಂಕರಹಿತ ಸೇವಾ ದಾಖಲೆಯುಳ್ಳ ರಾಜ್ಯ ಸರ್ಕಾರದ ನಿವೃತ್ತ ‘ಎ’ ದರ್ಜೆಯ ಅಧಿಕಾರಿಯಾಗಿರಬೇಕು. ಇನ್ನೊಂದು ಸದಸ್ಯ ಸ್ಥಾನಕ್ಕೆ ಸ್ಥಳೀಯ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರವನ್ನು ಒಳಗೊಂಡ ಅನೌಪಚಾರಿಕ ಆರ್ಥಿಕ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಪ್ರಖ್ಯಾತ ಸಾಮಾಜಿಕ ಕಾರ್ಯಕರ್ತರಾಗಿರಬೇಕು. ವಯೋಮಿತಿ 65 ವರ್ಷದೊಳಗಿರಬೇಕು.
ಸಂಭಾವನೆ: ಸಮಿತಿಯ ಅಧ್ಯಕ್ಷರಿಗೆ ಪ್ರತಿಬಾರಿಯ ಉಪವೇಶನಕ್ಕೆ 2500 ರೂ.ಗಳ ಗೌರವಧನವನ್ನು ಸರ್ಕಾರದಿಂದ ನಿಗದಿಪಡಿಸಲಾಗಿರುತ್ತದೆ. ಸಮಿತಿಯ ಸದಸ್ಯರುಗಳಿಗೆ ಪ್ರತಿಬಾರಿಯ ಉಪವೇಶನಕ್ಕೆ 1000 ರೂ. ಗಳ ಗೌರವಧನವನ್ನು ಸರ್ಕಾರದಿಂದ ನಿಗದಿಪಡಿಸಲಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಮಹಾನಗರಪಾಲಿಕೆಯ ವಲಯ ಕಚೇರಿ-2ರ (ಹಳೇ ಕಛೇರಿ ಕಟ್ಟಡ) ಡೇ-ನಲ್ಮ್ ಶಾಖೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಅಥವಾ ದೂ.08392-273479 ಗೆ ಸಂಪರ್ಕಿಸಬಹುದು.



