ರಾಮನಗರ: ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ 11 ಮಹಾನಗರ ಪಾಲಿಕೆಗಳಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ, ದಾವಣಗೆರೆ, ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮಹಾನಗರಪಾಲಿಕೆ, ಶಿವಮೊಗ್ಗ, ಬೆಳಗಾವಿ ಮಹಾನಗರ ಪಾಲಿಕೆ, ಮಂಗಳೂರು, ತುಮಕೂರು, ವಿಜಯಪುರ, ಬಳ್ಳಾರಿ ಮಹಾನಗರಪಾಲಿಕೆಗಳ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಭೆಯನ್ನು ರಾಮನಗರ ಜಿಲ್ಲೆ ರೈತನ ಹಟ್ಟಿ ರೆಸಾರ್ಟ್ ನಲ್ಲಿ ಆಯೋಜಿಸಲಾಗಿತ್ತು.
ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಸಂಘ ರಾಜ್ಯಾಧ್ಯಕ್ಷರಾಗಿ ಅಮೃತ್ ರಾಜ್ ಅವರು ಅವಿರೋಧವಾಗಿ ನೇಮಕವಾದರು. ಮಾಜಿ ಅಧ್ಯಕ್ಷ ಗುರುಮೂರ್ತಿ, ಮಹಾನಗರ ಪಾಲಿಕೆ ಅಧ್ಯಕ್ಷರಾದ ಬಸವರಾಜಯ್ಯ, ವೆಂಕಟರಮಣ, ಗೋವಿಂದರಾಜು, ಪ್ರಹ್ಲಾದ್ ಕುಲಕರ್ಣಿ, ಪ್ರಸಾದ್ ಪೆರೂರು ವಿಶ್ವನಾಥ, ಮಾರಪ್ಪ, ಬಾಲಪ್ಪ ರಾಜ್ಯಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿರುವ ಸಂಗತಿಯನ್ನು ಘೋಷಿಸಿದರು.




