ದಾವಣಗೆರೆ: ದಾವಣಗೆರೆ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷರು, ಸದಸ್ಯರುಗಳನ್ನು ಸರ್ಕಾರದ ಮಾನದಂಡದನ್ವಯ ನೇಮಕ ಮಾಡಲಾಗಿದ್ದು ಆಯ್ಕೆಯಾಗಿರುವ ಅಭ್ಯರ್ಥಿಗಳ ಕುರಿತು ಆಕ್ಷೇಪಣೆಗಳಿದ್ದಲ್ಲಿ ಮಾರ್ಚ್ 13ರೊಳಗೆ ಲಿಖಿತ ಅರ್ಜಿ ಸಲ್ಲಿಸಬೇಕು.
- ಕಸಾಪ ಪರಂಪರೆ ಮರು ಸ್ಥಾಪಿಸುವ ಪ್ರಯತ್ನ
- ಶಿಥಿಲಗೊಂಡ ಕಟ್ಟಡ, ಗೋಡೆಗಳ ಮಾಹಿತಿ ನೀಡಲು ಸಾರ್ವಜನಿಕರಿಗೆ ಮನವಿ: ಬಳ್ಳಾರಿ ಮಹಾನಗರ ಪಾಲಿಕೆ
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
ಮಕ್ಕಳ ಕಲ್ಯಾಣ ಸಮಿತಿಗೆ ಹೊಸದಾಗಿ ಅಧ್ಯಕ್ಷರು, ಸದಸ್ಯರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಯಾವುದೇ ರಾಜಕೀಯ, ಚಟುವಟಿಕೆಗಳಲ್ಲಿ ವ್ಯಕ್ತಿಗಳೊಂದಿಗೆ, ಪಕ್ಷಗಳೊಂದಿಗೆ ಸಂಪರ್ಕ ಹೊಂದಿರಬಾರದು.
ಆಯ್ಕೆಗೊಂಡಿರುವ ಅಭ್ಯರ್ಥಿಗಳ ವಿವರ: ಎ.ಸಿ.ರಾಘವೇಂದ್ರ ಬಿನ್ ಚಂದ್ರರೋಜಿರಾವ್ ಅಧ್ಯಕ್ಷರು, #778/10, ಹೊಂಡದ ರಸ್ತೆ, ಬೀರಲಿಂಗೇಶ್ವರ ದೇವಸ್ಥಾನದ ಹತ್ತಿರ, ದಾವಣಗೆರೆ-577001, ಮಂಜುಳಾ.ಎಂ ಕೋಂ ಮಹೇಶ್ವರ್, ಸದಸ್ಯರು, #677/ಸಿಬಿಪಿ, 5 ನೇಕ್ರಾಸ್, ಭಗತ್‌ಸಿಂಗ್ ನಗರ, ದಾವಣಗೆರೆ-577006, ಕರಿಯಮ್ಮ.ಡಿ ಡಿ/ಓ ಲೇ.ದುರುಗಪ್ಪ, ಸದಸ್ಯರು, ಕರಿಯಮ್ಮ ದೇವಸ್ಥಾನದ ಹತ್ತಿರ, ಕೊಂಡಜ್ಜಿ ರಸ್ತೆ, ಯರಗುಂಟೆ ಗ್ರಾಮ, ದಾವಣಗೆರೆ, ನಾಗರಾಜು ನಾಯಕ್.ಎಂ #99/99 ಕೆಂಗಪ್ಪ, ಸೊಸೈಡಿ ಹತ್ತಿರ, ದುರ್ಗಾ ಬಂಕ್ ಲೇ ಔಟ್ ದಾವಣಗೆರೆ-577008, ದುರ್ಗಪ್ಪ. ಆರ್ ಬಿನ್ ರಂಗಪ್ಪ ಸದಸ್ಯರು, ನಾಗರಕಟ್ಟೆ(ವಿ) ಕಾಡಜ್ಜಿ ಪೋಸ್ಟ್, ದಾವಣಗೆರೆ-577002.
ಈ ಅಭ್ಯರ್ಥಿಗಳು ಆಯ್ಕೆಯಾಗಿರುವ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಮಾರ್ಚ್ 13 ರೊಳಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಬಾಲಭವನ, ಟೈನ್ ಪಾರ್ಕ್, ಜೆ.ಹೆಚ್.ಪಟೇಲ್ ಬಡಾವಣೆ, ಶಾಮನೂರು ದಾವಣಗೆರೆ ಇಲ್ಲಿಗೆ ಮಾಹಿತಿ ನೀಡಬಹುದು.




