ಶಿಥಿಲಗೊಂಡ ಕಟ್ಟಡ, ಗೋಡೆಗಳ ಮಾಹಿತಿ ನೀಡಲು ಸಾರ್ವಜನಿಕರಿಗೆ ಮನವಿ: ಬಳ್ಳಾರಿ ಮಹಾನಗರ ಪಾಲಿಕೆ

3 months ago

ಶಿಥಿಲಗೊಂಡ ಕಟ್ಟಡ, ಗೋಡೆಗಳ ಮಾಹಿತಿ ನೀಡಲು ಸಾರ್ವಜನಿಕರಿಗೆ ಮನವಿ: ಬಳ್ಳಾರಿ ಮಹಾನಗರ ಪಾಲಿಕೆ

ಬಳ್ಳಾರಿ: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 1ರಿಂದ 39ರವರೆಗೆ ಬರುವ ಸರ್ಕಾರಿ ಶಾಲಾ ಕಟ್ಟಡಗಳು, ಸರ್ಕಾರಿ ಕಾಂಪೌಂಡ್‌ಗಳು, ಇತರೆ ಸರ್ಕಾರಿ ಕಟ್ಟಡಗಳು, ಗೋಡೆಗಳು ಸೇರಿದಂತೆ ಯಾವುದೇ ಅಪಾಯಕಾರಿ ಅಥವಾ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ದೂರವಾಣಿ ಅಥವಾ ವಾಟ್ಸಾಪ್ ಮೂಲಕ ಮಹಾನಗರ ಪಾಲಿಕೆಗೆ ಮಾಹಿತಿ ನೀಡುವಂತೆ ಪಾಲಿಕೆಯ ಉಪ ಆಯುಕ್ತರು ಮನವಿ ಮಾಡಿದ್ದಾರೆ.

ಖಾಸಗಿ ಶಾಲೆಗಳು, ಖಾಸಗಿ ಕಟ್ಟಡಗಳು ಹಾಗೂ ಅವುಗಳ ಕಾಂಪೌಂಡ್ ಗೋಡೆಗಳು ಶಿಥಿಲಾವಸ್ಥೆಯಲ್ಲಿದ್ದರೆ ಅಥವಾ ಅಪಾಯಕಾರಿಯಾಗಿದ್ದರೆ, ಸಂಬಂಧಿತ ಕಟ್ಟಡಗಳ ಮಾಲೀಕರು ಕೂಡಲೇ ಮಹಾನಗರ ಪಾಲಿಕೆಯ ಗಮನಕ್ಕೆ ತರಬೇಕು. ಅಲ್ಲದೆ, ಯಾವುದೇ ಅವಘಡಗಳಿಗೆ ಆಸ್ಪದ ನೀಡದಂತೆ ಸ್ವಂತ ಖರ್ಚಿನಲ್ಲಿಯೇ ಅವುಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ.

ಇದೇ ವೇಳೆ, ಅನಧಿಕೃತವಾಗಿ ಕುಂಟೆ, ರಾಜಕಾಲುವೆ ಹಾಗೂ ಚರಂಡಿಗಳ ಮೇಲೆ ವಾಸಿಸುತ್ತಿರುವವರು ತಕ್ಷಣವೇ ಆ ಜಾಗಗಳನ್ನು ಖಾಲಿ ಮಾಡಬೇಕು. ಮುಂಬರುವ ಮಳೆಗಾಲದಲ್ಲಿ ಸಂಭವಿಸಬಹುದಾದ ಯಾವುದೇ ಅವಘಡಗಳಿಗೆ ಸಾರ್ವಜನಿಕರೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಲು ಸಹಾಯವಾಣಿ ಸಂಖ್ಯೆಗಳು:

ವಾರ್ಡ್ ಸಂಖ್ಯೆ 25, 26, 27, 28, 29, 30, 31, 32, 33, 37, 38 ಹಾಗೂ 39: ಮಂಜುನಾಥ್ ಟಿ.ಎ – 9742138927

ವಾರ್ಡ್ ಸಂಖ್ಯೆ 3, 7, 8, 9, 10, 11, 12, 13 ಹಾಗೂ 14: ಶ್ರೀನಾಥ್ ಹೂಗಾಡೆ – 9738349471

ವಾರ್ಡ್ ಸಂಖ್ಯೆ 2, 4, 5 ಹಾಗೂ 15ರಿಂದ 20: ಪ್ರದೀಪ್ – 8217314224

ವಾರ್ಡ್ ಸಂಖ್ಯೆ 1, 21, 22, 23, 24, 34 ಹಾಗೂ 36: ಜಿ.ಎಂ. ವಿರೇಶ್ – 8867204172

ಇದಲ್ಲದೆ, ಬಳ್ಳಾರಿ ಮಹಾನಗರ ಪಾಲಿಕೆಯ ಕಂಟ್ರೋಲ್ ರೂಂ/ಹೆಲ್ಪ್‌ಲೈನ್ ಸಂಖ್ಯೆ 7975629447 ಕ್ಕೆ ಸಹ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ.

ಮಳೆಗಾಲದಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ, ಶಿಥಿಲಗೊಂಡ ಕಟ್ಟಡಗಳು ಹಾಗೂ ಅಪಾಯಕಾರಿ ಪ್ರದೇಶಗಳ ಬಗ್ಗೆ ತಕ್ಷಣ ಮಾಹಿತಿ ನೀಡುವ ಮೂಲಕ ಪಾಲಿಕೆಯೊಂದಿಗೆ ಸಹಕರಿಸುವಂತೆ ಬಳ್ಳಾರಿ ಮಹಾನಗರ ಪಾಲಿಕೆಯ ಉಪ ಆಯುಕ್ತರು (ಅಭಿವೃದ್ಧಿ) ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Leave a Reply