ಬೆಂಗಳೂರು: ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ಪದಾಧಿಕಾರಿಗಳಿಂದ ನಗರಸಭೆ ಅಧ್ಯಕ್ಷ ಕೆ ಶೇಷಾದ್ರಿ ಅವರಿಗೆ ಸಂಘದ ಸಲಹೆಗಾರ ಹೆಚ್ ಬಿ ಸಿದ್ಯಾನಾಯ್ಕ, ಕಾರ್ಯಾಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷ ಡಾ. ಎಂ ಆರ್ ಗೋವಿಂದ ಸ್ವಾಮಿ, ಧನಂಜಯ್ ನಾಯ್ಕ್ ಉಪಾಧ್ಯಕ್ಷ, ಕೃಷ್ಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯ್ಕ, ಶಂಕರ್ ನಾಯ್ಕ್, ಪ್ರಕಾಶ್ ನಾಯ್ಕ್ ಇವರುಗಳು ರಾಮನಗರ ನಗರ ಜಿಲ್ಲೆ ಬೇಡ ಬಂಜಾರರಿಗೆ ವಿವಿಧ ಸವಲತ್ತುಗಳನ್ನು ಕೋರಿ ಮನವಿ ಸಲ್ಲಿಸಿದರು.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಬೇಡಿಕೆಗಳು
೧. ರಾಮನಗರದ ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಪ್ರಧಾನಿಗಳು, ಕೆಂಗಲ್ ಹನುಮಂತಯ್ಯ, ಮುಖ್ಯಮಂತ್ರಿಗಳನ್ನು ಒಳಗೊಂಡಂತೆ ಥೀಮ್ ಪಾರ್ಕ್ ಮಾಡುವುದು.
೨. ನಗರದಲ್ಲಿ ಬಂಜಾರ ಭವನಕ್ಕೆ ನಿವೇಶನ ಮತ್ತು ಸಾಂಸ್ಕೃತಿಕ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ನಿವೇಶನ ನೀಡುವುದು.
೩. ಪ್ರತಿ ವರ್ಷ ನಗರದಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಣೆಗೆ ಧನ ಸಹಾಯ ಮತ್ತು ಅನುದಾನ ನಿಗದಿ ಮಾಡುವುದು.
೪. ಸಂಘದ ಕಛೇರಿಗೆ ನಿವೇಶನ ಮತ್ತು ತಾತ್ಕಾಲಿಕ ಬಾಡಿಗೆ ಕಟ್ಟಡ ಒದಗಿಸುವುದು
೫. ಬಡ ಬಂಜಾರರಿಗೆ ಉಚಿತ ನಿವೇಶನ ನೀಡುವುದು.
೬. ನಗರದ ಸುತ್ತಮುತ್ತ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದು.
೭. ಖಾಸಗಿ ಸಹಭಾಗಿತ್ವದಲ್ಲಿ ನಗರವನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವುದು.





