ಮೇ 9ರಂದು 1908ರಂದು ಕೋಲಾರದಲ್ಲಿ ಜನಿಸಿರುತ್ತಾರೆ. ಇವರ ತಂದೆ ನರಸಿಂಗ ರಾಯರು ತಾಯಿ ಅನ್ನಪೂರ್ಣಮ್ಮ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಇವರು ಕನ್ನಡದ ಕಾದಂಬರಿ ಲೋಕದಲ್ಲಿ ಸಾರ್ವಭೌಮರೆಂದೆ ಹೆಸರು ಪಡೆದಿದ್ದಾರೆ. ನೂರಕ್ಕೂ ಹೆಚ್ಚು ಕಾದಂಬರಿಗಳು, 15 ಹೆಚ್ಚು ನಾಟಕಗಳು, ಹತ್ತಾರು ಕಥಾ ಸಂಕಲನಗಳು, ಹಲವಾರು ಅಭಿನಂದನಾ ಗ್ರಂಥದ ಸಂಪಾದಕರಾಗಿ ಸಾಹಿತ್ಯ ಕ್ಷೇತ್ರಕ್ಕೆ ತಾವು ಒಬ್ಬರೇ ಬೆಳೆಯದೆ ಅನೇಕರನ್ನು ಪ್ರೋತ್ಸಾಹಿಸಿದ್ದಾರೆ.
ಇವರ ಪ್ರೋತ್ಸಾಹದಿಂದಲೇ ತರಾಸುರವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಲು ಸಾಧ್ಯವಾಗಿರುತ್ತದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನು ಕೃಷ್ಣರಾವ್ ತಮ್ಮ ಅಣ್ಣ ಎಂಬ ಭಾವನೆಯಿಂದ ಗೌರವದಿಂದ ಎಲ್ಲ ಸಂದರ್ಭದಲ್ಲಿ ನಡೆದುಕೊಂಡಿರುತ್ತಾರೆ.
ಇವರು ಬರೆದಂತಹ ಹಲವಾರು ಕಾದಂಬರಿಗಳು ಚಲನಚಿತ್ರಗಳಾಗಿರುತ್ತದೆ. ಇವರ ಕಾದಂಬರಿಗಳು ಮನೆ ಮನೆಯಲ್ಲೂ ಸಹ ಓದುಗರ ಮೆಚ್ಚುಗೆಯ ಕೃತಿಗಳಾಗಿವೆ. ಸಂಧ್ಯಾರಾಗ, ಉದಯರಾಗ, ಸಾಹಿತ್ಯ ರತ್ನ, ನಟಸಾರ್ವಭೌಮ ಮುಂತಾದವುಗಳು ಪ್ರಮುಖವಾದ ಕಾದಂಬರಿಗಳಾಗಿರುತ್ತವೆ. ಅದೇ ರೀತಿಯಲ್ಲಿ ಇವರು ಪ್ರಗತಿಶೀಲ ಸಾಹಿತ್ಯದ ಪ್ರವರ್ತಕರು.
ಇವರನ್ನು ಕನ್ನಡಿಗರು ವಿಶೇಷವಾಗಿ ಚಳವಳಿಯ ಕಾರಣಕ್ಕೆ ಸದಾ ನೆನಪು ಮಾಡಿಕೊಳ್ಳುತ್ತಾರೆ. ಕರ್ನಾಟಕದಲ್ಲಿ ಬೆಂಗಳೂರಿನ ಚಲನಚಿತ್ರ ಮಂದಿರಗಳಲ್ಲಿ ಕನ್ನಡ ಚಲನಚಿತ್ರಕ್ಕೆ ಅವಕಾಶವನ್ನು ಕಲ್ಪಿಸಿ ಕೊಡುವ ಸಲುವಾಗಿ ಹೋರಾಟವನ್ನು ಮಾಡಿದವರು ಇವರಾಗಿರುತ್ತಾರೆ. ಚಾಮರಾಜಪೇಟೆಯ ಶ್ರೀರಾಮನವಮಿಯ ಉತ್ಸವದ ಕಾರ್ಯಕ್ರಮದಲ್ಲಿ ಅನ್ಯ ಭಾಷೆಯ ಕಲಾವಿದರಿಗೆ ಅವಕಾಶಗಳು ದೊರೆಯುತ್ತಿತ್ತು. ಕನ್ನಡಿಗ ಕಲಾವಿದರನ್ನು ನಿರ್ಲಕ್ಷಿಸುತ್ತಿದ್ದರು.
ಇಂತಹ ಸಂದರ್ಭದಲ್ಲಿ ಹೋರಾಟಕ್ಕಾಗಿ ಹುಟ್ಟು ಹಾಕಿದ ಸಂಘಟನೆ ಕರ್ನಾಟಕದಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣವಾಯಿತು. ಇವರ ಕಾರಣದಿಂದಾಗಿ ಕರ್ನಾಟಕದಲ್ಲಿ ಸಂಗೀತ ಕ್ಷೇತ್ರದ ಕಲಾವಿದರಿಗೆ ಎಲ್ಲ ವೇದಿಕೆಗಳಲ್ಲಿ ಅವಕಾಶ ದೊರೆಯುವಂತಾಯಿತು.
ಇದಲ್ಲದೆ ಬಸವಣ್ಣನವರ ವಚನಗಳನ್ನು ಸಂಗೀತ ಸಂಯೋಜನೆ ಮಾಡಿಸಿ ವೇದಿಕೆಗಳ ಮೇಲೆ ಹಾಡಲು ಯೋಜನೆಯನ್ನು ರೂಪಿಸಿಕೊಟ್ಟರು. ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ಇಡಿ ರಾಜ್ಯದಾದ್ಯಂತ ಪ್ರವಾಸವನ್ನು ಮಾಡಿ ಏಕೀಕರಣದ ಮಹತ್ವವನ್ನ ತಿಳಿಸಿಕೊಟ್ಟವರು ಇವರಾಗಿರುತ್ತಾರೆ.
ಅತ್ಯುತ್ತಮ ಭಾಷಣಕಾರರು ಆಗಿದ್ದ ಇವರು ರಾಜ್ಯದ ಮೂಲೆ ಮೂಲೆಯನ್ನು ಸುತ್ತಿ ಏಕೀಕರಣದಿಂದ ಕನ್ನಡಿಗರು ಮತ್ತು ಕರ್ನಾಟಕಕ್ಕೆ ಆಗುವಂತಹ ಅನುಕೂಲತೆಗಳನ್ನ ಮನವರಿಕೆ ಮಾಡಿಕೊಟ್ಟು ಏಕೀಕರಣಕ್ಕೆ ಅಗತ್ಯವಾದ ವೇದಿಕೆಯನ್ನು ಸಿದ್ಧಪಡಿಸಿ ಕೊಟ್ಟಿರುತ್ತಾರೆ.
ಇವರೆಲ್ಲರ ಶ್ರಮದಿಂದಾಗಿ 1956 ನವಂಬರ್ ಒಂದರಂದು ನಮ್ಮ ರಾಜ್ಯ ಏಕೀಕರಣವಾಯಿತು. ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ಒಂದಾಗಿ ಕನ್ನಡಿಗರು ಸಂಭ್ರಮಿಸುವ ಕ್ಷಣಗಳು ಒದಗಿ ಬಂದವು.
ಇವರು ನಾಡು ನುಡಿಗೆ ಸಲ್ಲಿಸಿದಂತಹ ಸೇವೆಯನ್ನ ಗುರುತಿಸಿ ಇವರನ್ನು ಮಣಿಪಾಲದಲ್ಲಿ ನಡೆದ ಕನ್ನಡ ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಕರ್ನಾಟಕದ ಅನೇಕ ವಿಶ್ವವಿದ್ಯಾನಿಲಯಗಳು ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಸನ್ಮಾನಿಸಿವೆ. ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯು ಲಭಿಸಿರುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿರುತ್ತಾರೆ.
ಇವರ ಕನ್ನಡ ಸೇವೆ ಮತ್ತು ಹೋರಾಟದ ಬಗ್ಗೆ ಮಾಸ್ತಿಯವರಂತಹ ಹಿರಿಯ ಚೇತನಗಳಿಗೆ ಯಾವ ಪ್ರಮಾಣದಲ್ಲಿ ಗೌರವವಿತ್ತು ಎಂದರೆ ಇವರು ನಿಧನರಾದ ಸಂದರ್ಭದಲ್ಲಿ ಅಂತಿಮ ಯಾತ್ರೆಯ ಕ್ಷಣದಲ್ಲಿ ಇವರ ಶವಕ್ಕೆ ಮಾಸ್ತಿ ಅವರು ತಮ್ಮ ಕೈಯಲ್ಲಿದ್ದ ಕೊಡೆಯನ್ನ ಬಿಚ್ಚಿ ಮುಖಕ್ಕೆ ಬಿಸಿಲು ಬೀಳದಂತೆ ಅಡ್ಡ ಹಿಡಿದು ಹೋರಾಟಗಾರರಾದ ಇವರು ಬಿಸಿಲಿನಲ್ಲಿ ಒಣಗಬಾರದು ಎಂದು ಆಡಿದ ಮಾತುಗಳು ಕನ್ನಡಿಗರಿಗೆ ಇವರ ಮೇಲೆ ಮತ್ತಷ್ಟು ಗೌರವ ಮೂಡಲು ಕಾರಣವಾಗುತ್ತದೆ.
ಇವರು 1971ರ ಜುಲೈ 8ರಂದು ತಮ್ಮ ಬದುಕಿನ ಯಾತ್ರೆಯನ್ನ ಮುಗಿಸಿರುತ್ತಾರೆ .
ಇಂದಿಗೂ ಕನ್ನಡಿಗರಿಗೆ ಕನ್ನಡದ ಚಳುವಳಿಯ ವಿಚಾರಗಳು ಮಾತನಾಡುವ ಸಂದರ್ಭದಲ್ಲಿ ಇವರ ಹೆಸರನ್ನು ಪ್ರಸ್ತಾಪಿಸದೆ ಮಾತನಾಡಲು ಸಾಧ್ಯವೇ ಇಲ್ಲ. ಅದೇ ರೀತಿಯಲ್ಲಿ ಇವರೊಂದಿಗೆ ಮ ರಾಮಮೂರ್ತಿಯವರು, ನಾಡಿಗೆರೆ ಕೃಷ್ಣರಾಯರು, ಅನೇಕರು ಜೊತೆಯಲ್ಲಿದ್ದು ಹೋರಾಟಕ್ಕೆ ತಮ್ಮದೇ ಆದಂತಹ ಕೊಡುಗೆಗಳನ್ನು ನೀಡಿರುತ್ತಾರೆ.
ಇವರ ಮನೆ ಸದಾಕಾಲ ಎಲ್ಲರಿಗೂ ಆಶ್ರಯವನ್ನು ನೀಡಿ ಅನೇಕರ ಬದುಕಿಗೆ ನೆರವನ್ನ ನೀಡಿದಂತಹ ಪುಣ್ಯವಾದ ಸ್ಥಳವಾಗಿತ್ತು. ಇವರ ಧರ್ಮಪತ್ನಿ ಅವರು ಸಹ ಹಸಿದು ಬಂದವರಿಗೆ ಊಟವನ್ನು ನೀಡಿ ಮಾನವೀಯತೆಯನ್ನ ಮೆರೆದಿರುತ್ತಾರೆ. ನಾಟಕಕಾರರಾದ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ಬದುಕಿನಲ್ಲಿ ಪ್ರತಿ ಸಂದರ್ಭದಲ್ಲಿ ಇವರನ್ನು ನೆನೆಯುತ್ತಿದ್ದರು. ಇವರು ನೀಡಿದಂತಹ ಧೈರ್ಯದ ಮಾತುಗಳು ಮತ್ತು ಪ್ರೋತ್ಸಾಹದ ಕಾರಣದಿಂದಾಗಿ ದಿಕ್ಕು ತೋಚದೆ ಇದ್ದಂತಹ ಕ್ಷಣದಲ್ಲಿ ಯಾವ ರೀತಿಯಲ್ಲಿ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟವರು ಈ ಪುಣ್ಯಾತ್ಮನೆಂದು ಅನೇಕ ಬರಿ ಸ್ಮರಿಸಿಕೊಂಡಿರುತ್ತಾರೆ.
ಇಂತಹ ಕನ್ನಡಿಗರ ಹೆಮ್ಮೆಯ ವ್ಯಕ್ತಿತ್ವ ಮತ್ತು ವ್ಯಕ್ತಿಯನ್ನು ನೆನಪು ಮಾಡಿಕೊಂಡು ಅವರ ಮಾರ್ಗದಲ್ಲಿ ಸಾಗುವ ಮೂಲಕ ಕನ್ನಡಿಗರು ಮತ್ತಷ್ಟು ಸ್ವಾಭಿಮಾನಿಗಳಾಗಿ ಬದುಕೋಣ.
- ಕೆ ಎಸ್ ನಾಗರಾಜ್, ಬೆಂಗಳೂರು




