ಬಸವಣ್ಣನವರೊಡನೆ ಹೆಜ್ಜೆ ಹಾಕೋಣ ಬನ್ನಿರಿ

2 years ago

ಶರಣು ಶರಣಾರ್ಥಿಗಳು.

ಬಸವ ಉತ್ಸವ
“ಬಸವಣ್ಣನವರೊಡನೆ ಹೆಜ್ಜೆ ಹಾಕೋಣ ಬನ್ನಿರಿ
ಮೇ 10, ಶುಕ್ರವಾರ ಮುಂಜಾನೆ 6 ಗಂಟೆಗೆ ರಾಜಧಾನಿಯ ಹೊಸಹಳ್ಳಿ ಮೆಟ್ರೋ ಬಳಿ ಇರುವ ಶ್ರೀ ಜಗಜ್ಯೋತಿ ಬಸವೇಶ್ವರ ವಿದ್ಯಾರ್ಥಿ ನಿಲಯದ ಬಳಿ ದಯಮಾಡಿಸಲು ಕೋರುತ್ತೇನೆ.

6 ಗಂಟೆಗೆ ಬಸವಣ್ಣನವರಿಗೆ ಪುಷ್ಪಾರ್ಚನೆ ಸಲ್ಲಿಸಿ ಪೂಜ್ಯರ ಸದಾಶಯಗಳನ್ನು ಆಲಿಸಿ ಕಲಾತಂಡಗಳೊಂದಿಗೆ ಹೊರಟು ಟೋಲ್ ಗೆಟ್ ಸುತ್ತಿಕೊಂಡು ಮನುವನ ದಾಟಿ ಆದಿಚುಂಚನಗಿರಿ ಮಠದ ಬಳಿ ಎಡ ತಿರುವು ಪಡೆದು ವಿಜಯನಗರ ಮುಖ್ಯರಸೆಯಲ್ಲಿ ಸಂಚರಿಸಿ ಹೊಸಹಳ್ಳಿ ಪಾರ್ಕ್ ಬಳಿ ಮತ್ತೆ ಎಡ ತಿರುವು ಪಡೆದು ಹೊಸಹಳ್ಳಿ ಗ್ರಾಮದಲ್ಲಿ ಹೆಜ್ಜೆ ಹಾಕುತ್ತೇವೆ.

ಮಹೇಶ್ವರಮ್ಮ ದೇವಾಲಯದ ಬಳಿ ಇರುವ ವಚನ ಜ್ಯೋತಿ ಬಳಗದ ನಿವಾಸದಲ್ಲಿ ಬೆಳಗಿನ ಉಪಹಾರ ಸ್ವೀಕರಿಸಿ ಬಸವ ಜಯಘೋಷ ಮೊಳಗಿಸಿ ಅಲ್ಲಿಂದ ಕ್ಲಬ್ ರಸೆಯಲ್ಲಿ ನಡೆದು ಸೆಂಟ್ ಜಾನ್ ಶಾಲೆಯ ರಸೆಯಲ್ಲಿ ಹಾದು ಹಂಪಿ ನಗರದ ೫ನೆ ಮುಖ್ಯರಸೆಯಲ್ಲಿ (ಬೈಟು ಕಾಫಿ ರಸೆ) ಸಂಚರಿಸಿ ಮತ್ತೆ ಎಡ ತಿರುವು ಪಡೆದು ಹಂಪಿ ನಗರ ಮುಖ್ಯ ರಸೆಯಲ್ಲಿ ಹೆಚ್ಹೆ ಹಾಕುತ್ತ ಆಲದ ಮರ ಬಸ್ ನಿಲ್ದಾಣ ತಲುಪಿ ಒಂದಷ್ಟು ವಚನಗಳನ್ನು ಹಾಡಿ ಅಲ್ಲಿಂದ ಅತ್ತಿಗುಪ್ಪೆ ಮೆಟ್ರೋ ಹಾದು ಮಾರುತಿ ಮಂದಿರ ತಲುಪಿ ಮುಂದೆ ವಿಜಯನಗರ ಬಸ್ ನಿಲ್ದಾಣ. ನಂತರ ಅಲ್ಲಿಂದ ಸರ್ವಿಸ್ ರಸ್ಥೆಯಲ್ಲಿ ಸಂಚರಿಸಿ ಹೊಸಹಳ್ಳಿ ಮೆಟ್ರೋ ಬಳಿ ಬಸವ ಉತ್ಸವ ಸಮಾರೋಪಗೊಳ್ಳುತ್ತದೆ.

ಹಾದಿಯುದ್ದಕ್ಕೂ ಕಲಾತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸುತ್ತವೆ. ನಮ್ಮ ಗಾಯಕರು ವಚನಗಳನ್ನು ಹಾಡುತ್ತಾರೆ. ಅರಿವಿನ ಗುರು ಬಸವಣ್ಣನವರಿಗೆ, ಕನ್ನಡ ನಾಡ ದೇವರು ಬಸವಣ್ಣನವರಿಗೆ ಪೂಜೆಯನ್ನು ವಚನ ಪ್ರೇಮಿಗಳು, ಬಸವ ಭಕ್ತರು ಸಲ್ಲಿಸುತ್ತಾರೆ.

ಮತ್ತೊಮ್ಮೆ ಪ್ರಾರ್ಥನೆ.
ಬನ್ನಿರಿ, ಬಸವಣ್ಣನವರೊಂದಿಗೆ ಹೆಜ್ಜೆ ಹಾಕೋಣ.
ಬಸವ ತತ್ತ್ವಗಳನ್ನು ಪರಿಪಾಲಿಸೋಣ.

ತಮ್ಮವ,
ಪಿನಾಕಪಾಣಿ
ವಚನಜ್ಯೋತಿ ಬಳಗ

Leave a Reply