ಬೆಂಗಳೂರು: ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ನಗರದಲ್ಲಿ ಅಡಗಿ ತಯಾರಿ ನಡೆಸುತ್ತಿದ್ದ ಅಲ್ ಖೈದಾ ಭಯೋತ್ಪಾದಕ ಘಟಕದ ನಾಯಕಿಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅಲ್ ಖೈದಾ ಭಯೋತ್ಪಾದಕ ಘಟಕದ ನಾಯಕಿ ಶಮಾ ಪರ್ವೀನ್ ಬಂಧಿತ ಆರೋಪಿ. ಅವಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದೆ.
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
- ಎಲ್ಇಡಿ ಬೀದಿ ದೀಪ ಯೋಜನೆ ಅನುಷ್ಠಾನಗೊಂಡರೆ ಶೇ.61.01 ರಷ್ಟು ವಿದ್ಯುತ್ ಉಳಿತಾಯ: ಕೃಷ್ಣ ಬೈರೇಗೌಡ
- ಋಗ್ವೇದದ ಮಹತ್ವ ಮತ್ತು ಅಪೌರುಷೇಯ ತತ್ವದ ವಿಶ್ಲೇಷಣೆ
ಬಂಧಿತ ಶಮಾ ಪರ್ವೀನ್ ಎಕ್ಯೂಐಎಸ್ ಸಂಬಂಧಿತ ಭಯೋತ್ಪಾದಕ ಘಟಕವನ್ನು ನಡೆಸುತ್ತಿದ್ದ ಮಾಹಿತಿ ಲಭ್ಯವಾಗಿದೆ. ಕೆಲ ದಿನಗಳ ಹಿಂದೆ ಇತರ ನಾಲ್ವರನ್ನು ಗುಜರಾತ್, ನೋಯ್ಡಾ ಮತ್ತು ದೆಹಲಿಯಲ್ಲಿ ಬಂಧಿಸಲಾಗಿತ್ತು. ಪರ್ವೀನ್ ಇಡೀ ಮಾಡ್ಯೂಲ್ ಅನ್ನು ನಡೆಸುತ್ತಿದ್ದರು ಮತ್ತು ಕರ್ನಾಟಕದಿಂದ ಕಾರ್ಯಾಚರಣೆ ಸಂಘಟಿಸುವ ಮುಖ್ಯ ನಿರ್ವಾಹಕರಾಗಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
ಕಳೆದ ಜುಲೈ 23ರಂದು 20ರಿಂದ 25 ವರ್ಷ ವಯಸ್ಸಿನ ನಾಲ್ವರು ಭಯೋತ್ಪಾದಕ ಶಂಕಿತರನ್ನು ಗುಜರಾತ್, ದೆಹಲಿ ಮತ್ತು ನೋಯ್ಡಾದಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೆಂಗಳೂರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಅಡಗಿದ್ದ ಪರ್ವೀನ್ ಕುರಿತು ಮಾಹಿತಿ ನೀಡಿದ್ದರು.
ಬಂಧಿತ ಮೊಹಮ್ಮದ್ ಫರ್ದೀನ್, ಸೈಫುಲ್ಲಾ ಕುರೇಶಿ, ಜೀಶನ್ ಅಲಿ ಮತ್ತು ಮೊಹಮ್ಮದ್ ಫೈಕ್ ಎಂದು ಗುರುತಿಸಲಾಗಿರುವ ಶಂಕಿತರು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು ಮತ್ತು ಭಾರತದಾದ್ಯಂತ ಉನ್ನತ ಮಟ್ಟದ ಗುರಿಗಳನ್ನು ನಿಯೋಜಿಸಲಾಗಿತ್ತು. ಈ ಮಾಹಿತಿ ಆಧರಿಸಿ ಅಲ್ ಖೈದಾ ಭಯೋತ್ಪಾದಕ ಘಟಕದ ನಾಯಕಿ ಶಮಾ ಪರ್ವೀನ್ ಳನ್ನು ಬಂಧಿಸಲಾಗಿದೆ ಎಂದು ಎಟಿಎಸ್ ಮೂಲಗಳು ತಿಳಿಸಿವೆ.




