ಬೆಂಗಳೂರು: ಹಸಿ ತ್ಯಾಜ್ಯದಿಂದ ವಿದ್ಯುತ್ ತಯಾರಿಸುತ್ತಿರುವ ಮತ್ತು ಪ್ರತಿನಿತ್ಯ 40,000 ಲೀಟರ್ ಗಳಷ್ಟು ಪ್ರಮಾಣದ ಸಾವಯವ ಗೊಬ್ಬರವನ್ನು ಉತ್ಪಾದಿಸುತ್ತಿರುವ ದೇಶದ ಏಕೈಕ ವಾರ್ಡ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಯಡಿಯೂರು ವಾರ್ಡಿನ “ಯಡಿಯೂರು ಜೈವಿಕ ಅನಿಲ ಘಟಕ” ಮತ್ತು “ಯಡಿಯೂರು ಸಾವಯವ ಗೊಬ್ಬರ ಘಟಕ”ಗಳ ಪರಿಶೀಲನೆ ಕಾರ್ಯಕ್ಕೆ GBA ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮತ್ತು ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತ ಕೆ.ವಿ.ರಾಜೇಂದ್ರ ನಡೆಸಿದರು.
- ಹಸಿ ತ್ಯಾಜ್ಯದಿಂದ ವಿದ್ಯುತ್ ತಯಾರಿಸುತ್ತಿರುವ ಏಕೈಕ ವಾರ್ಡ್ ಯಡಿಯೂರು
- ಕಪ್ಪುಪಟ್ಟಿ ಧರಿಸಿ ಬಿಜೆಪಿ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ
- ಪ್ರಿಯಾಂಕ್ ಖರ್ಗೆ ಅವರ ಗೃಹ ಇಲಾಖೆ ಯಾರನ್ನು ರಕ್ಷಿಸುತ್ತಿದೆ?: ಆರ್ ಅಶೋಕ್
- ಜಾಣ ಕುರುಡು, ಜಾಣ ಮೌನದ ಬಿಜೆಪಿ ಪಕ್ಷ ತಂದೆ ಮಕ್ಕಳ ಪಕ್ಷ: ನೆ.ಲ.ನರೇಂದ್ರಬಾಬು
- ಮೋದಿ ಅವಧಿಯಲ್ಲಿ ರಾಜಕೀಯ ಪಕ್ಷಗಳ ವಿರುದ್ಧ ಇಡಿ ತನಿಖೆ
05 ಟನ್ ಹಸಿ ತ್ಯಾಜ್ಯದಿಂದ ಪ್ರತಿನಿತ್ಯ 3,000 kv ವಿದ್ಯುತ್ ಚ್ಛಕ್ತಿಯನ್ನು ಉತ್ಪಾದಿಸುತ್ತಿರುವ “ಯಡಿಯೂರು ಜೈವಿಕ ಅನಿಲ ಘಟಕ”ದಿಂದ ಯಡಿಯೂರು ವಾರ್ಡಿನ 16 ಉದ್ಯಾನವನಗಳು ಮತ್ತು 3.5 ಕಿಲೋಮೀಟರ್ ಉದ್ದದ ಪಾದಾಚಾರಿ ಮಾರ್ಗಗಳಲ್ಲಿರುವ ವಿದ್ಯುತ್ ದೀಪಗಳನ್ನು ಬೆಳಗಿಸಲಾಗುತ್ತಿದೆ.
“ಯಡಿಯೂರು ಸಾವಯವ ಗೊಬ್ಬರ ಘಟಕ”ದಲ್ಲಿ ಪ್ರತಿನಿತ್ಯ ಉತ್ಪಾದಿಸಲಾಗುತ್ತಿರುವ 40,000 ಲೀಟರ್ ಗಳಷ್ಟು ಪ್ರಮಾಣದ ಸಾವಯವ ಗೊಬ್ಬರವನ್ನು ಹಳೆಯ ಬಿಬಿಎಂಪಿ ದಕ್ಷಿಣ ವಲಯದ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ 256 ಉದ್ಯಾನವನಗಳಿಗೆ ಪೂರೈಸಲಾಗುತ್ತಿದೆ. ಇದರ ಮೂಲಕ ಕೇವಲ ಒಂದು ವಾರ್ಡ್ ನಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯದಿಂದ ಪ್ರತೀ ತಿಂಗಳಿಗೆ ಒಂದು ಕೋಟಿ ಹತ್ತು ಲಕ್ಷ ರೂಪಾಯಿಗಳಷ್ಟು ಆದಾಯವನ್ನು ಗಳಿಸುತ್ತಿದ್ದು, ವಾರ್ಷಿಕವಾಗಿ 14 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ಬಿಬಿಎಂಪಿ ಆದಾಯದ ರೂಪದಲ್ಲಿ ಗಳಿಸುತ್ತಿದೆ.
ಭೇಟಿ ವೇಳೆ ಮಾತನಾಡಿದ ಮಹೇಶ್ವರ್ ರಾವ್, ಇದೆ ಮಾದರಿಯಲ್ಲಿ ಬೆಂಗಳೂರಿನ ಇನ್ನುಳಿದ ವಾರ್ಡ್ ಗಳಲ್ಲಿ ಜೈವಿಕ ಅನಿಲ ಘಟಕಗಳನ್ನು ಮತ್ತು ಸಾವಯವ ಗೊಬ್ಬರ ಘಟಕಗಳನ್ನು ಪ್ರಾರಂಭಿಸಿದರೆ ಪಾಲಿಕೆಗೆ ಆಸ್ತಿ ತೆರಿಗೆಯ ನಂತರ ಎರಡನೇ ಅತಿ ದೊಡ್ಡ ಆದಾಯದ ಮೂಲವನ್ನಾಗಿ ಪರಿವರ್ತಿಸಬಹುದು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಮುಖ್ಯ ಇಂಜಿನಿಯರ್ ಜಯಶಂಕರ್, ಘನ ತ್ಯಾಜ್ಯ ವಿಲೇವಾರಿ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಶಿವ ಮಾಳ್ಗವಿ ಸೇರಿದಂತೆ ಹತ್ತಕ್ಕೂ ಹೆಚ್ಚು ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.
ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್. ಆರ್. ರಮೇಶ್ “ಯಡಿಯೂರು ಜೈವಿಕ ಅನಿಲ ಘಟಕ” ಮತ್ತು “ಯಡಿಯೂರು ಸಾವಯವ ಗೊಬ್ಬರ ಘಟಕ” ಗಳ ಬಗ್ಗೆ ವಿವರಿಸಿದರು.




