ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲಾ ಭಾಜಪ ಅಧ್ಯಕ್ಷ ಎನ್.ಆರ್.ರಮೇಶ್ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಅಭಿಮಾನಿಗಳು, ಸ್ನೇಹಿತರು ಅದ್ದೂರಿಯಾಗಿ ಆಚರಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯರುಗಳು, ರಾಜಕೀಯ ಮುಖಂಡರು ಮತ್ತು ಕನ್ನಡ ಸಂಘ, ಸಂಸ್ಥೆಯ ಪದಾಧಿಕಾರಿಗಳು ಆಗಮಿಸಿ ಎನ್.ಆರ್.ರಮೇಶ್ ರವರಿಗೆ ಶುಭ ಕೋರಿ, ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎನ್.ಆರ್.ರಮೇಶ್, ನನ್ನ ರಾಜಕೀಯ ಜೀವನ ಮತ್ತು ಸಮಾಜ ಸೇವೆಯಲ್ಲಿ ಯಶ್ವಸಿಯಾಗಲು ನನ್ನ ಪ್ರೀತಿ ಪಾತ್ರರಾದ ಜನರು ಮತ್ತು ಕಾರ್ಯಕರ್ತರು ನನ್ನ ಹೋರಾಟಕ್ಕೆ ಸದಾಕಾಲ ಪ್ರೋತ್ಸಹ ನೀಡುತ್ತಾ ಬಂದಿದ್ದಾರೆ ಎಂದರು.
ಒಂದು ಬಾರಿ ನನ್ನನು ಮತ್ತು ಇನ್ನೊಂದು ಬಾರಿ ಪೂರ್ಣಿಮ ರಮೇಶ್ ಅವರನ್ನು ಪಾಲಿಕೆ ಸದಸ್ಯರಾಗಿ ಸೇವೆ ಸಲ್ಲಿಸಲು ಆಶೀರ್ವಾದ ಮಾಡಿದ್ದಾರೆ. ಯಡಿಯೂರು ಕೆರೆ ಸರ್ವತೋಮುಖ ಅಭಿವೃದ್ಧಿ ಕಂಡು ಪರಿಸರ ಸ್ನೇಹಿ ಮತ್ತು ದೇಶ, ವಿದೇಶ ಪಕ್ಷಿಗಳ ಉತ್ತಮ ತಾಣವಾಗಿದೆ. ಹಸಿ ಕಸದಿಂದ ವಿದ್ಯುತ್ ಉತ್ಪಾದನೆ ಕೇಂದ್ರ ಸ್ಥಾಪನೆ ಮಾಡಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಅದಾಯ ಉಳಿತಾಯ ಮಾಡಿ ವಿದ್ಯುತ್ ಉಳಿತಾಯಕ್ಕೆ ನಾಂದಿ ಹಾಡಲಾಗಿದೆ ಎಂದರು.
ಕನ್ನಡ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಹಾಗೂ ನಾಡಿನ ನಾಡುನುಡಿ ಶ್ರಮಿಸಿದ ಎಲ್ಲ ಮಹನೀಯರುಗಳನ್ನು ಸ್ಮರಣೆ ಮಾಡಿಕೊಂಡು ಪ್ರತಿಮೆ ಮತ್ತು ಪ್ರಮುಖ ರಸ್ತೆಗಳಿಗೆ ನಾಮಕರಣ ಮಾಡಲಾಗಿದೆ. ಮೇರುನಟ ಡಾ.ರಾಜ್ ಕುಮಾರ್, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್, ಸ್ವಾಮಿ ವಿವೇಕಾನಂದ, ಮೈಸೂರು ಮಹಾರಾಜರು, ಕುವೆಂಪು ಹಲವಾರು ಮಹನೀಯರುಗಳ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಅತಿ ದೊಡ್ಡ ಗೋಡೆ ಗಡಿಯಾರ ಮತ್ತು ಉದ್ಯಾನವನ ಅಯುರ್ವೇದ ಸಸಿಗಳನ್ನು ನೆಟ್ಟು ಜನರ ಆರೋಗ್ಯಕ್ಕೆ ಸಹಕಾರಿಯಾಗುವಂತೆ ಮಾಡಲಾಗಿದೆ ಎಂದರು.
ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಿ ನಮ್ಮ ಯುವ ಕ್ರೀಡಾಪಟುಗಳಿಗೆ ರಾಷ್ಟ್ರ ಮತ್ತು ಅಂತರಾಷ್ಟ್ರಗಳಲ್ಲಿ ಪ್ರತಿಭೆ ಹೊರಹೊಮ್ಮುಲು ಸಾಧ್ಯವಾಗಿದೆ. ದುಂದು ವೆಚ್ಚ ತಡೆದು ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಕಡಿವಾಣ ಹಾಕಿ, ಕಡಿಮೆ ವೆಚ್ಚದಲ್ಲಿ ಮಾದರಿ, ಹೈಟೆಕ್ ರಸ್ತೆಗಳನ್ನು ನಿರ್ಮಾಸಿ, ತೆರಿಗೆದಾರರ ಹಣ ಉಳಿಸುವಲ್ಲಿ ಮಹತ್ವಪೂರ್ಣ ಹೆಜ್ಜೆ ಇಡಲಾಗಿದೆ. ಯಡಿಯೂರು ವಾರ್ಡ್ ಏಷಿಯದ ಅತ್ಯಂತ ಅಭಿವೃದ್ಧಿ ಹೊಂದಿದ ವಾರ್ಡ್ ಎಂಬ ಹೆಗ್ಗಳಿಕೆ ಮತ್ತು ಸುಂದರ ವಾರ್ಡ್ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದರು.
ನನ್ನ ಹೋರಾಟ, ಸಾಧನೆ ಮತ್ತು ಅಭಿವೃದ್ದಿ ಕೆಲಸಗಳಿಗೆ ಸಹಕಾರ, ಬೆಂಬಲ ನೀಡುತ್ತಾ ಬಂದಿರುವ ಜನತಾ ಜನಾರ್ಧನಾ ಮತ್ತು ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳುವ ದಿನ ಇದಾಗಿದೆ ಎಂದರು.




