ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಹೋಮ
ಬೆಂಗಳೂರು: ನಗರದ ಪದ್ಮನಾಭನಗರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಗಾಯಿತ್ರಿ ಭವನದಲ್ಲಿ ಬ್ರಾಹ್ಮಣ ಸಮುದಾಯ ಏಳಿಗೆಗಾಗಿ ಮತ್ತು ಮಹಾಸಭಾದ ಶ್ರೇಯೋಭಿವೃದ್ಧಿಗಾಗಿ ಮೂರು ದಿನಗಳ ಕಾಲ ಮಹಾ ಸುದರ್ಶನ ಹೋಮ, ಅಘೋರಾಸ್ತ್ರ ಹೋಮ, ಜಾತವೇದಾಸೆ ಹೋಮ, ಭಾಗ್ಯ ಸೂಕ್ತ ಹೋಮ, ಐಕ್ಯಮತ್ಯ ಸೂಕ್ತ ಹೋಮ ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ನಡೆಸಲಾಯಿತು.
- ಬಿಜೆಪಿ ಸುಮ್ಮನೆ ಮಾಧ್ಯಮಗಳನ್ನು ತಪ್ಪುದಾರಿಗೆ ಎಳೆಯುತ್ತಿದೆ: ಡಿ.ಕೆ.ಶಿವಕುಮಾರ್
- ಬ್ರಾಹ್ಮಣರ ಏಳಿಗೆ, ಮಹಾಸಭಾದ ಶ್ರೇಯೋಭಿವೃದ್ಧಿಗಾಗಿ ವಿಶೇಷ ಪೂಜೆ
- ನ್ಯಾಯಾಲಯದ ಆದೇಶವಿದ್ದರೂ 8 ವರ್ಷಗಳಿಂದ ಉದ್ಯೋಗ ವಂಚನೆ
- AHO, ADH ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳನ್ನು ಮುಂದೂಡಿ: ಆರ್ ಅಶೋಕ್
- ಕೃಷ್ಣ ಬೈರೇಗೌಡ ಅವರಿಗೆ ಪ್ರಕಾಶ್ ಕೋನಾಪುರ ಬರೆದ ಪತ್ರ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್.ರಘುನಾಥ್ ನೇತೃತ್ವದಲ್ಲಿ ವಿಶೇಷಪೂಜೆ ಮತ್ತು ಹೋಮ ಕಾರ್ಯಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.ವರದಾಚಾರ್ ತಂತ್ರಿಗಳು, ಸುಧಾಮಾಚಾರ್, ನರಸಿಂಹಾಚಾರ್ ಮತ್ತು ಅರ್ಚಕರು ಪಾಲ್ಗೊಂಡಿದ್ದರು.
ಸಮಾಜದ ಸುಖ, ಶಾಂತಿ ನೆಮ್ಮದಿಗಾಗಿ ಲೋಕ ಸಮಸ್ತ ಸುಖಿನೋ ಭವಂತು ಎಂದು ಶ್ರಮಿಸುವವರು ಬ್ರಾಹ್ಮಣ ಸಮಾಜ. ಅವರ ಜೀವನದಲ್ಲಿ ಬರುವ ಸಂಕಷ್ಟಗಳು ದೂರವಾಗಲಿ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದೃಡವಾಗಿ ಬೆಳಯಲಿ ಎಂದು ಹೋಮ, ವಿಶೇಷ ಪೂಜೆಯನ್ನು ಮೂರು ದಿನಗಳ ಕಾಲ ನಡೆಸಲಾಗುತ್ತಿದೆ.
ಮಹಾ ಸುದರ್ಶನ ಹೋಮ ಮಹಾಸಭಾ ಜಾಗದಲ್ಲಿ ಯಾವುದೇ ತಂತ್ರಗಳು, ಕೆಟ್ಟ ದೃಷ್ಟಿ ಬೀಳದಿರಲು, ದುರ್ಗಾ ಶಕ್ತಿಯ ದೋಷ ಪರಿಹಾರಕ್ಕಾಗಿ ಮತ್ತು ಅಘೋರಾಸ್ತ್ರ ಪೇತ, ಭೂತ ಬಾಧೆಯಿಂದ ಮುಕ್ತಿ ಪಡೆಯಲು ಭಾಗ್ಯ ಸೂಕ್ತ ಹೋಮದಿಂದ ಲಕ್ಷ್ಮೀ ದೇವಿ ಕೃಪಕಟಾಕ್ಷ ಸಿಗಲಿ ಎಂದು ಐಕ್ಯಮತ್ಯ ಸೂಕ್ತ ಹೋಮದಿಂದ ಸಂಘದಲ್ಲಿ ಎಲ್ಲರು ಸಹೋದರಂತೆ, ಸಂಘಟಿತರಾಗಿ ಮಹಾಸಭಾದ ಬೆಳವಣಿಗೆ ಶ್ರಮಿಸಲು ಸಹಕಾರಿಯಾಗುತ್ತದೆ. ಗಾಯಿತ್ರಿ ಹೋಮದಿಂದ ಬಂದ ಸಂಕಷ್ಟಗಳು, ಮುಂದೆ ಬರುವ ಸಂಕಷ್ಟಗಳ ನಿವಾರಣೆಗಾಗಿ ಹೋಮ ಮಾಡಲಾಗುತ್ತಿದೆ.
ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮಿಕಾಂತ್, ವಿಪ್ರ ಮುಖಂಡರುಗಳಾದ ಎನ್.ಎಲ್.ಚಿದಾನಂದ, ಸತ್ಯಪ್ರಕಾಶ್, ಪ್ರಹ್ಲಾದ್ ಬಾಬು, ಎಲ್.ಪುರುಷೋತ್ತಮ್ ಜಿಲ್ಲಾ ಪ್ರತಿನಿಧಿಗಳಾದ ಕೆ.ಎನ್.ರವಿಕುಮಾರ್, ಎಸ್.ಎಸ್.ಪ್ರಸಾದ್, ಪಿ.ಆರ್.ಪ್ರಕಾಶ್, ನಾಗೇಶ್, ರಾಜಶೇಖರ್, ದಿಲೀಪ್, ಸತೀಶ್ ಉರಾಳ್, ಮತ್ತು ರಾಮ್ ಪ್ರಸಾದ್, ಜೆ.ಹೆಚ್.ಆನಿಲ್ ಕುಮಾರ್, ರಥಯಾತ್ರೆ ಸುರೇಶ್ ಮೊದಲಾದ ವಿಪ್ರರು ಭಾಗವಹಿಸಿದ್ದರು.





