ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನದ ಚುನಾವಣೆ
ಬೆಂಗಳೂರು: ನಾಡಿನ ಪ್ರತಿಯೊಬ್ಬ ಬ್ರಾಹ್ಮಣ ಕುಟುಂಬಕ್ಕೆ ಒಡನಾಡಿಯಾಗಿ ಸ್ಪಂದಿಸುವ ಕಾರ್ಯಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನಮ್ಮ ಸಂಕಲ್ಪ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಲಕ್ಷ್ಮೀಕಾಂತ್ ಹೇಳಿದರು.
ಬೆಂಗಳೂರು ನಗರದ ಶ್ರೀ ಹರಿ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷದ ಸ್ಥಾನದ ಅಭ್ಯರ್ಥಿ ಲಕ್ಷ್ಮೀಕಾಂತ್ ಅವರ ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಲಕ್ಷ್ಮಿಕಾಂತ್, ಪಾವಗಡ ಪ್ರಕಾಶ್ ರಾವ್, ವಿಧಾನಪರಿಷತ್ ಸದಸ್ಯ ಯು.ಬಿ. ವೆಂಕಟೇಶ್, ನಟಿ ರೂಪಾ ಅಯ್ಯರ್, ಹೆಚ್.ಸಿ.ಕೃಷ್ಣ, ಮಾಲಿನಿ, ಪತ್ರಕರ್ತ ಜೆ.ಹೆಚ್.ಅನಿಲ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.
ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಲಕ್ಷ್ಮೀಕಾಂತ್ ಮಾತನಾಡಿ ಕಳೆದ 30 ವರ್ಷಗಳಿಂದ ಬ್ರಾಹ್ಮಣ ಸಮುದಾಯದ ಹಿರಿಯರ ಜೊತೆಯಲ್ಲಿ ಬ್ರಾಹ್ಮಣ ಮಹಾಸಭಾದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಶಿಕ್ಷಣ, ಸರ್ಕಾರಿ ಉದ್ಯೋಗದಲ್ಲಿ, ಆರೋಗ್ಯ ಮತ್ತು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬ್ರಾಹ್ಮಣ ಜನಾಂಗದವರು ಮುಂದೆಬರಬೇಕು. ಅನ್ಯಾಯವಾದಾಗ ನಿಮ್ಮ ಜೊತೆಯಲ್ಲಿ ಧ್ವನಿಯಾಗಿ ಸ್ಪಂದಿಸುವೆ ಎಂದು ಆಶ್ವಾಸನೆ ನೀಡಿದರು.
ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರನ್ನು ಆರ್ಥಿಕವಾಗಿ ಸಬಲರಾಗಿ ಮಾಡಬೇಕು, ಸಮಾಜದ ಮುಖ್ಯವಾಹಿನಿಗೆ ಅವರನ್ನು ಕರೆತರಬೇಕು ಎಂಬ ಉದ್ದೇಶ ನಮ್ಮದು. ಮುಂದಿನ ದಿನಗಳಲ್ಲಿ ನಗರ ಪ್ರದೇಶ ಜೊತೆಗೆ ಹಳ್ಳಿಗಾಡಿನ ಬ್ರಾಹ್ಮಣ ಸಮುದಾಯದ ಜನರ ಸಂಕಷ್ಟಗಳಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಒಡನಾಡಿಯಾಗಿ ಸ್ಪಂದಿಸುವ ಕೆಲಸ ಮಾಡುತ್ತದೆ ಎಂದು ಭರವಸೆ ನೀಡಿದರು.



