ಬಿಎಂಟಿಸಿ ಪ್ರಯಾಣಿಕರಿಗೆ ಮತ್ತು ನಮ್ಮ ಬೆಂಗಳೂರಿಗೆ ಶುಭ ದಿನ: ಕೃಷ್ಣ ಬೈರೇಗೌಡ

46 minutes ago

ಮುಂದಿನ ಒಂದೆರಡು ವರ್ಷಗಳಲ್ಲಿ 4,500 ವಿದ್ಯುತ್ (ಇವಿ) ಬಸ್‌ಗಳನ್ನು ಸೇರ್ಪಡೆಗೊಳಿಸುವ ಬಿಎಂಟಿಸಿ ಪ್ರಸ್ತಾವನೆಗೆ ಇಂದು ಸರ್ಕಾರ ಅನುಮೋದನೆ ನೀಡಿದೆ — ಈ ಕ್ರಮ ಬೆಂಗಳೂರಿನಲ್ಲಿ ಬಸ್ ಸೇವೆಗಳನ್ನು ವಿಸ್ತರಿಸಲು ತೆಗೆದುಕೊಂಡ ಅತ್ಯಂತ ದೊಡ್ಡ ನಿರ್ಧಾರವಾಗಿದೆ.

ಸುಮಾರು 7,000 ಬಸ್‌ಗಳನ್ನು ಹೊಂದಿರುವ ಬೆಂಗಳೂರು, ಈಗಾಗಲೇ ದೇಶದಲ್ಲೇ ಅತಿ ದೊಡ್ಡ ನಗರ ಬಸ್ ಸಮೂಹವನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾವು ಬಸ್ ಸೇವೆಯಲ್ಲಿ ನಂಬರ್ 1 ಆಗಿ ಮುಂದುವರಿಯುವುದು ಮಾತ್ರವಲ್ಲದೆ, ಸಾರ್ವಜನಿಕ ಸಾರಿಗೆಯ ಗುಣಮಟ್ಟ ಸೇವೆ ಮತ್ತು ತಲುಪಬೇಕಾದ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯ ಬಸ್ ಗಳ ಲಭ್ಯತೆಯನ್ನು ಸುಧಾರಿಸುವಲ್ಲಿಯೂ ಈಗ ಪ್ರಮುಖ ಮುನ್ನಡೆ ಸಾಧಿಸಲಿದ್ದೇವೆ.

ದೃಢವಾದ ಭವಿಷ್ಯದ ಪ್ರಗತಿಯ ಹೆಜ್ಜೆ

ಸಮೂಹ ಸಾರಿಗೆ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು

ಸಂಚಾರ ದಟ್ಟಣೆಯನ್ನು (ಟ್ರಾಫಿಕ್ ಕಂಟ್ರೋಲ್) ಕಡಿಮೆ ಮಾಡುವುದು.

ಬೆಂಗಳೂರಿನಾದ್ಯಂತ ಉತ್ತಮ ಸಂಪರ್ಕವನ್ನು ಕಲ್ಪಿಸುವುದು.

ಬೆಂಗಳೂರಿನ ಸಾಮಾನ್ಯ ಜನರಿಗೆ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಸುಲಭ ಮತ್ತು ಅನುಕೂಲಕರವಾಗಿಸುವುದು

ಹೆಚ್ಚು ಬಸ್‌ಗಳು. ಹೆಚ್ಚಿನ ಸಂಪರ್ಕ. ಸ್ವಚ್ಛ ಸಾರಿಗೆ. ಉತ್ತಮ ಬೆಂಗಳೂರು.

ಬಿಎಂಟಿಸಿಗೆ ಮತ್ತು ಪ್ರತಿದಿನದ ಸಂಚಾರಕ್ಕಾಗಿ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಲಕ್ಷಾಂತರ ಬೆಂಗಳೂರು ಪ್ರಯಾಣಿಕರಿಗೆ ಇದು ಬೃಹತ್ ಬೋನಸ್ ಆಗಿದೆ.

– ಕೃಷ್ಣ ಬೈರೇಗೌಡ, ಬೆಂಗಳೂರು ಅಭಿವೃದ್ಧಿ ಸಚಿವ

Leave a Reply