ಅಡಿಗೆ ಅನಿಲದ ಬೆಲೆ, ಹಾಲಿನ ದರ, ಏರಿಕೆಯಾದ ತಕ್ಷಣ ಹೋಟೆಲ್ ಗಳಲ್ಲಿ ತಿಂಡಿ ಮತ್ತು ಕಾಫಿ ದರವನ್ನು ಹೆಚ್ಚಿಸುವ ಹೋಟೆಲ್ ನವರು ಇದೇ 22 ರಿಂದ ಜಿ ಎಸ್ ಟಿ ದರ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಪದಾರ್ಥಗಳ ಮೇಲೆ ಶೂನ್ಯವಾಗಿದೆ ಮತ್ತು ಇಳಿಕೆ ಆಗಿರುವುದರಿಂದ ಗ್ರಾಹಕರ ಅನುಕೂಲಕ್ಕಾಗಿ ತಮ್ಮ ಹೋಟೆಲ್ಲಿನ ತಿಂಡಿ ಮತ್ತು ಇತರೆ ಪದಾರ್ಥಗಳ ಬೆಲೆಯನ್ನು ಸಹ ಅಷ್ಟೇ ಪ್ರಮಾಣದಲ್ಲಿ ಇಳಿಕೆ ಮಾಡಬೇಕು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಅನೇಕ ಸಾಮಗ್ರಿಗಳ ಮೇಲೆ ಜಿಎಸ್‌ಟಿ ಪರಿಷ್ಕರಣೆ ಆಗಿರುವುದರಿಂದ ಆಹಾರ ಪದಾರ್ಥಗಳು ಮತ್ತು ಇತರೆ ಸಾಮಗ್ರಿಗಳ ಮೇಲು ಸಹ ಇರುವ ಬೆಲೆಯಲ್ಲಿ ಪರಿಷ್ಕರಣೆಯಾಗಬೇಕು.
ದರ ಹೆಚ್ಚಿದಾಗ ದರ ಹೆಚ್ಚಿಸುವವರು ದರಗಳು ಇಳಿದಾಗಲೂ ಅದೇ ರೀತಿಯಲ್ಲಿ ತಾವು ಸಹ ಇಳಿಕೆಯನ್ನು ಮಾಡಬೇಕು ಇಲ್ಲದಿದ್ದರೆ ಇವರುಗಳು ಗ್ರಾಹಕರಿಗೆ ಮಾಡುವ ಅನ್ಯಾಯವಾಗುತ್ತದೆ.
ಸಂಬಂಧಪಟ್ಟ ಅಧಿಕಾರಿಗಳು ಯಾವ ಪ್ರಮಾಣದಲ್ಲಿ ತೆರಿಗೆಯ ಭಾರ ಯಾವ ಯಾವ ಪದಾರ್ಥಗಳ ಮೇಲೆ ಇಳಿಕೆಯಾಗಿದೆಯೋ ಅಷ್ಟೇ ಪ್ರಮಾಣದಲ್ಲಿ ಮಾರಾಟದ ಬೆಲೆಯೂ ಸಹ ಕಡಿಮೆ ಮಾಡುವ ರೀತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡು ಜಿಎಸ್‌ಟಿ ದರದ ಪರಿಷ್ಕರಣೆಯ ಲಾಭ ಗ್ರಾಹಕರಿಗೆ ತಲುಪುವಂತೆ ಮಾಡಬೇಕು.
– ಕೆ ಎಸ್ ನಾಗರಾಜ್, ಬೆಂಗಳೂರು




