ಮಾದಿಗ-ಲಂಬಾಣಿಗರ ವಿವಿಧ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ

9 months ago

ಚಿತ್ರದುರ್ಗ: ಜಿಲ್ಲಾ ಕೇಂದ್ರದಲ್ಲಿ ಮಾದಿಗ ಮತ್ತು ಲಂಬಾಣಿ  ಸಮುದಾಯದವರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ  ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಲಂಬಾಣಿ ಸಮುದಾಯದವರು ಚಳ್ಳಕೆರೆ ತಾಲ್ಲೂಕಿನಲ್ಲಿ ಕೆಲ ಲಂಬಾಣಿ ತಾಂಡಗಳಲ್ಲಿ ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಬರಲಾಗಿದ್ದು, ಸಾಗುವಳಿ ಚೀಟಿಗಾಗಿ  ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ನೇತೃತ್ವದಲ್ಲಿ  ಹೋರಾಟ ನಡೆಸಿದರು.

ಚಳ್ಳಕೆರೆ ತಾಲ್ಲೂಕು ವೀರದಿಮ್ಮನಹಳ್ಳಿ ತಾಂಡದಲ್ಲಿ ಕೆಲವರು ಗ್ರಾಮಠಾಣಾ ಜಮೀನನ್ನು ಹೊಂದಿರುವ ಕುರಿತು ಹೃೆಕೋರ್ಟ್ ಗೆ ತಪ್ಪು  ಮಾಹಿತಿ ನೀಡಿ ತಮ್ಮ ಸ್ವಂತ ಹೆಸರಿಗೆ ಮಾಡಿಸಿಕೊಂಡಿರುವುದನ್ಮು ವಿರೋಧಿಸಲಾಯಿತು.

ಕುರಡಿಹಳ್ಳಿ ಲಂಬಾಣಿ ಹಟ್ಟಿ (ನಂದಿಹಳ್ಳಿ) ಗ್ರಾಮದಲ್ಲಿ ಶಿವಸಾಧು ಮಹಾರಾಜರ ಪರಂಪರೆ ತಲಾತಲಾಂತರದಿಂದ ಉಳುಮೆ ಮಾಡಿಕೊಂಡು, ಅದೇ ಜಾಗದಲ್ಲಿ ವಾಸಕ್ಕೆ  ಮನೆ, ಆಶ್ರಮ, ಗೋಶಾಲೆ, ದೇವಸ್ಥಾನ ನಿರ್ಮಾಣ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಅರಣ್ಯ  ಇಲಾಖೆ ಅವರ ಕಿರಿಕಿರಿ ತಪ್ಪಿಲ್ಲದಿರುವುದನ್ನು ಕೂಡ ಖಂಡಿಸಲಾಯಿತು.

ಭರಮಸಾಗರ ಲಂಬಾಣಿಹಟ್ಟಿಯಲ್ಲಿ ನೂರಾರು ವರ್ಷಗಳಿಂದ ಜಮೀನು ಉಳುಮೆ ಮಾಡಿಕೊಂಡು ಬರಲಾಗಿದ್ದು, ಶಾಲಾ ಕಟ್ಟಡ, ಮೃೆದಾನದ ಹೆಸರಿನಲ್ಲಿ  ರೃೆತರಿಂದ ಕಸಿದುಕೊಂಡಿರುವ ತಾಲ್ಲೂಕು ಆಡಳಿತದ ಕ್ರಮವನ್ನು ತೀವ್ರವಾಗಿ ಖಂಡಿಸಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆಯ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್ ವಹಿಸಿದ್ದರು.

ಬಂಜಾರ ಜನಜಾಗೃತಿ ಅಭಿಯಾನ  ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ನಿಂಗಾನಾಯಕ್, ವೀರದಿಮ್ಮನಹಳ್ಳಿ ತಾಂಡಾದ ಮಹಂತೇಶ್ ನಾಯಕ್, ಅಶೋಕ ನಾಯ್ಕ, ಮಾಜಿ ತಾಲ್ಲೂಕು ಪಂಚಾಯಿತಿ  ಸದಸ್ಯರು ಮತ್ತು  ಗ್ರಾಮದ ನಾಯಕ್, ಢಾವೋ, ಕಾರಬಾರಿ ಕೂಡ ಹಾಜರಿದ್ದರು.

ಮಾದಿಗ ಮಹಾ ಸಭಾದ ಹೋರಾಟ: ಹೊಸದುರ್ಗ  ಮತ್ತು  ಚಳ್ಳಕೆರೆ ತಾಲ್ಲೂಕುಗಳಲ್ಲಿ ದೌರ್ಜನ್ಯಕ್ಕೆ ಒಳಗಾಗಿ ನಿರಾಶ್ರಿತರಾಗಿರುವ ಮಾದಿಗ ಸಮುದಾಯದವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಪ್ರತಿಭಟನೆ  ನೇತೃತ್ವವನ್ನು ವಹಿಸಿದ್ದ ದುರ್ಗಾಹನುಮಂತಪ್ಪ ಮಾತನಾಡಿ, ನಗರಸಭೆಯವರು ಅನಧಿಕೃತವಾಗಿ ಅಭಿವೃದ್ಧಿ  ಕಾಮಗಾರಿಗೆ ಅವಕಾಶ ಮಾಡಿಕೊಟ್ಟು ಅವ್ಯವಹಾರ ಮಾಡಲು ಬಿಟ್ಟಿದ್ದಾರೆ ಎಂದು ಆರೋಪಿಸಿದರು.

ಹಾಗೆಯೇ  ನಗರಸಭೆ ಮುಂಭಾಗದ ದೊಡ್ಡ  ಚರಂಡಿಯನ್ನು ಮುಚ್ಚಿ ಬಿಲ್ಡಿಂಗ್ ಕಟ್ಟಲು ಅವಕಾಶ ಮಾಡಿರುವ ನಗರಸಭೆ ಆಯುಕ್ತರ ವಿರುದ್ದ ಕ್ರಮಕ್ಕೆ  ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನರೇನಹಳ್ಳಿ ಅರುಣ್ ಕುಮಾರ್, ವಸಂತಕುಮಾರ, ದೇವರಾಜ್ ಮತ್ತು ಹೊಸದುರ್ಗ ತಾಲ್ಲೂಕು ಮಹಿಳೆಯರು ಭಾಗಿಯಾಗಿದ್ದರು.

Leave a Reply