ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಆಯ್ಕೆಯಾದ ಡಾ.ಹರೀಶ್ ಲಂಬಾಣಿ

3 years ago

DrHarishLambani lambani, PublicProsecutor, rudrupuneeth,

ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಆಯ್ಕೆಯಾಗಿ ಇಂದು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ರಿಪೋರ್ಟ್ ಆಗಿ ವೃತ್ತಿ ಆರಂಭಿಸುತ್ತಿರುವ ಡಾ.ಹರೀಶ್ ಲಂಬಾಣಿ ಯವರಿಗೆ ಅಭಿನಂದನೆಗಳನ್ನ ಸಲ್ಲಿಸೋಣ.

ಹರೀಶ್ ಲಂಬಾಣಿ ಮೂಲತಃ ರಾಣೇಬೆನ್ನೂರು ಹತ್ತಿರವಿರುವ ಕಜ್ಜರಿ ತಾಂಡಾದ ನಿವಾಸಿ. PUC ಮುಗಿದಮೇಲೆ ನೇರವಾಗಿ Air force ಗೆ ಆಯ್ಕೆಯಾಗಿ ಸೇವೆ ಸಲ್ಲಿಸಿ ತಮ್ಮ ಸೇವಾ ಅವಧಿಯಲ್ಲಿಯೇ LLB ಮುಗಿಸಿ ಆನಂತರ LLM ಮುಗಿಸಿ Air force ನಲ್ಲಿ ತಮ್ಮ ಸೇವಾ ಅವಧಿಯನ್ನು ಮುಗಿಸಿದ ನಂತರ ಬೆಂಗಳೂರಿನ ಪ್ರತಿಷ್ಠಿತ BMS College of law ಗೆ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ವರ್ಷ PHD ಸಂಶೋಧನೆಯನ್ನು ಮುಗಿಸಿ ಡಾಕ್ಟರೇಟ್ ಪದವೀಯನ್ನು ಪಡೆದರು.

ಡಾ.ಹರೀಶ್ ಲಂಬಾಣಿ ಯವರು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಕಾನೂನು ಮತ್ತು ಸಂವಿಧಾನದ ಬಗ್ಗೆ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಸಂವಿಧಾನ ಮತ್ತು ಕಾನೂನಿನ ವಿಷಯದ ಮೇಲೆ ನಡೆದ ಅನೇಕ ವಿಚಾರ ಸಂಕೀರಣಗಳಲ್ಲಿ ಭಾಗಿಯಾಗಿ ವಿಷಯ ಮಂಡಿಸಿದ್ದಾರೆ. ಡಾ.ಹರೀಶ್ ಲಂಬಾಣಿಯವರು ಉತ್ತಮ ವಾಗ್ಮಿಗಳು ಮತ್ತು ವಿಚಾರವಂತರು ಕೂಡ. ತಮ್ಮ ವೃತ್ತಿ ಬದುಕು ಮತ್ತು ಸಂಸಾರದ ಹೊಣೆಗಾರಿಕೆಯೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿದವರಾಗಿದ್ದಾರೆ. ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ವಿರೋಧಿಸುತ್ತಾ ಅನೇಕ ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಡಾ.ಬಾಬಾ ಸಾಹೇಬರು ನೀಡಿದ ಮೀಸಲಾತಿಯ ಕಾರಣಕ್ಕೆ ಇವತ್ತು ಪ್ರತೀ ಕ್ಷೇತ್ರಗಳಲ್ಲೂ ನಮಗೆ ಪ್ರಾತಿನಿಧ್ಯ ದೊರಕುತ್ತಿದೆ. ಆದರೆ ನ್ಯಾಯಾಂಗದಲ್ಲಿ ಮಾತ್ರ ನಮ್ಮ ಪ್ರಾತಿನಿಧ್ಯ ತೀರಾ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನುವಷ್ಟು. ಅದರಲ್ಲೂ ಖಾಸಗೀ ವಕೀಲರಿಗೆ ಹಣ ಭರಿಸಲು ಸಾಧ್ಯವಾಗದವರು Public prosecutor ಬಳಿ ಹೋಗುತ್ತಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಬಳಿ ಹೋಗುವವರಲ್ಲಿ 99% SC/ST ಗಳೇ ಆಗಿರುತ್ತಾರೆ. ಹಾಗಾಗಿ ಒಬ್ಬ ದಲಿತನಿಗೆ ಆದ ಅನ್ಯಾಯವನ್ನು ಗ್ರಹಿಸಲು ಮೇಲ್ಜಾತಿಯ PP ಗಳಿಗೆ ಸಾಧ್ಯವಿಲ್ಲ. ಆ ಜಾಗದಲ್ಲಿ ಸ್ವತಃ SC/ST ಪಬ್ಲಿಕ್ ಪ್ರಾಸಿಕ್ಯೂಟರ್ ಗಳು ಇದ್ದಾಗ ಮಾತ್ರ ನೊಂದವರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ. ಅದರಲ್ಲೂ ಡಾ.ಹರೀಶ್ ಲಂಬಾಣಿ ಯವರಂತಹ ಸಂವಿಧಾನದ ಮಹತ್ವ ಮತ್ತು ಕಾನೂನು ಬಲ್ಲಂತಹ ಪ್ರಾಮಾಣಿಕ ಅಂಬೇಡ್ಕರ್ ವಾದಿಗಳು ಆ ಜಾಗದಲ್ಲಿ ಇದ್ದಾಗ ಖಂಡಿತ ನೋಂದವರಿಗೆ ನ್ಯಾಯ ದೊರಕಿಸಿಕೊಡಬಹುದು.

ಕರ್ನಾಟಕ ನ್ಯಾಯಾಂಗ ಇಲಾಖೆ ನಡೆಸಿದ ಪರೀಕ್ಷೆ ಬರೆದು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಆಯ್ಕೆಯಾಗಿ ಇಂದು ಶಿವಮೊಗ್ಗದ ಜಿಲ್ಲಾ ನ್ಯಾಯಾಲಯದಲ್ಲಿ ನಿಯುಕ್ತಿಗೊಂಡಿರುವ ಸಹೋದರ ಡಾ.ಹರೀಶ್ ಲಂಬಾಣಿ ಯವರಿಗೆ ಭೀಮ ನಮನಗಳು.. ನಿಮ್ಮ ಪ್ರಾಮಾಣಿಕತೆ, ಶೋಷಿತರ/ಬಡವರ/ನೊಂದವರ ಪರವಾದ ಗಟ್ಟಿ ಧ್ವನಿ, ಮತ್ತು ಅಂಬೇಡ್ಕರ್ ವಾದ ಕೊನೆಯವರೆಗೂ ಹಾಗೆಯೇ ಇರಲಿ ಎಂದು ಆಶಿಸುವ ಮತ್ತು ನಿಮ್ಮನ್ನು ಮನದುಂಬಿ ಹಾರೈಸುವ ನಿಮ್ಮ ಗೆಳೆಯ.

– ರುದ್ರು ಪುನೀತ್

Leave a Reply