ರಾಜ್ಯ ಸರ್ಕಾರದ ಒಳ ಮೀಸಲಾತಿಯಿಂದ ಯಾರೂ ಸಂತುಷ್ಠರಿಲ್ಲ: ಬಸವರಾಜ ಬೊಮ್ಮಾಯಿ

11 months ago

ಬೆಂಗಳೂರು: ರಾಜ್ಯ ಸರ್ಕಾರ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ವರ್ಗೀಕರಣ ಮಾಡಲಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಿ ಆಂಧ್ರ, ಆದಿ ಕರ್ನಾಟಕ, ಆದಿ ದ್ರಾವಿಡ ಅಂತ ಇತ್ತು. ಅದನ್ನು ಇವರು ತಿರಸ್ಕರಿಸಿದರು. ಎಕೆ, ಎಡಿ, ಎಎ ಯಾವುದೇ ಗುಂಪಿಗೆ ಸೇರಲಿಲ್ಲ. ಅವರು ಪ್ರವರ್ಗ ಎ, ಪ್ರವರ್ಗ ಬಿ, ದಲ್ಲಿ ಸೇರಿ ಅಂತ ಹೇಳಿ ಅವರನ್ನು ಎಲ್ಲಿಯೂ ಸೇರದಂತೆ ಮಾಡಿದರು ಎಂದರು.

ಅಲೆಮಾರಿಗಳು ಅತ್ಯಂತ ಕನಿಷ್ಠ ಜೀವನ ಸ್ಥಿತಿಯಲ್ಲಿದ್ದಾರೆ. ಅವರಿಗೆ ಯಾವುದೇ ಮೀಸಲಾತಿ ಇಲ್ಲ. ರಾಜ್ಯ ಸರ್ಕಾರದ ಒಳ ಮೀಸಲಾತಿಯಿಂದ ಯಾರೂ ಸಂತುಷ್ಠರಿಲ್ಲ ಎಂದರು.

ಎಸ್ಸಿ ಬಲಗೈ ಸಮುದಾಯದವರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಲಂಬಾಣಿ ಬೋವಿ ಜೊತೆಗೆ 59 ಜಾತಿಗಳನ್ನು ಸೇರಿಸಿದ್ದಾರೆ. ಸರ್ಕಾರದ ಬಳಿ ಹೋದರೆ ನಾವು ರಾಜಕೀಯ ನಿರ್ಣಯ ಕೈಗೊಂಡಿದ್ದೇವೆ ನೀವು ಬೇಕಾದರೆ ಕೋರ್ಟ್ ಗೆ ಹೋಗಿ ಅಂತ ಹೇಳುತ್ತಿದ್ದಾರೆ. ಮತ್ತೆ ಬಗೆಹರಿಯದ ಕಗ್ಗಂಟಾಗಿ ಮಾಡುತ್ತಿದ್ದಾರೆ ಎಂದರು.

Leave a Reply