ಕನಿಷ್ಠ ಕೂಲಿ ಜಾರಿ ಮಾಡದ್ದರ ವಿರುದ್ಧ ಬೀಡಿ ಕಾರ್ಮಿಕರ ಮುಷ್ಕರ
ಮಂಗಳೂರು: 01.04.2024 ರಿಂದ ಸರಕಾರ ನಿಗದಿ ಪಡಿಸಿ ಆದೇಶ ಮಾಡಿದ ಕನಿಷ್ಠ ಕೂಲಿಯನ್ನು ಕೂಡಾ ಬೀಡಿ ಮಾಲಕರು ನೀಡದೆ ವಂಚಿಸುತ್ತಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿ ಆರೋಪಿಸಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಮಂಗಳೂರು ಸಹಾಯಕ ಕಾರ್ಮಿಕ ಇಲಾಖೆಯಲ್ಲಿ ನಡೆದ ಬೀಡಿ ಕಾರ್ಮಿಕರ ಧೃಹತ್ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತಾಡಿದ ಅವರು, ಕಾರ್ಮಿಕರಿಗೆ ಈಗ ಇದ್ದ ವೇತನವನ್ನು ಹಿಮ್ಮುಖಗೊಳಿಸಿ, ಸರಕಾರ ಮಾಲಕರ ಪರವಾಗಿ ಆದೇಶ ಮಾಡಿದ್ದರೂ ಬೀಡಿ ಮಾಲಕರು ಆ ಕೂಲಿಯನ್ನೂ ಕೂಡಾ ಜಾರಿ ಮಾಡದೆ ನಿರಂತರ ಬೀಡಿ ಕಾರ್ಮಿಕರನ್ನು ವಂಚಿಸುತ್ತಾ ಬರುತ್ತಿದ್ದಾರೆ ಎಂದರು. ಇದನ್ನು ಸಿಐಟಿಯು ಎಂದೂ ಸಹಿಸಲು ಸಾಧ್ಯವಿಲ್ಲ ಎಂದರು.
ಬಳಿಕ ಮಾತಾಡಿದ ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಬಿ.ಎಂ.ಭಟ್, ಸರಕಾರ ನಿಗದಿಗೊಳಿಸಿದ ಕಾನೂನು ಬದ್ಧ ವೇತನ, ತುಟ್ಟಿಭತ್ಯೆ, ಎಲ್ಲವನ್ನೂ ವಂಚಿಸುತ್ತಾ, ದೇಶದ ಕಾನೂನಿಗೆ ಗೌರವವನ್ನೇ ನೀಡದ ಬಿಡೀ ಮಾಲಕರು, ಬೀಡಿ ಕಟ್ಟಿಸಿ ಬಡ ಮಹಿಳೆಯರನ್ನು ವಂಚಿಸುವುದರ ವಿರುದ್ಧ ಕ್ರಮ ಕೈಗೊಳ್ಳಲಾಗದ ರಾಜಕೀಯದಡಿ ನಾವಿರುವಂತಾಗಿರುವುದು ನಮ್ಮ ದುರಂತ ಎಂದರು.
ನಮ್ಮ ಬದುಕಿಗೆ ಆಸರೆ ಆಗಿ ಎಂದು ಮತ ನೀಡಿ ಗೆಲ್ಲಿಸಿದ ನಮ್ಮ ಶಾಸಕ ಸಂಸದರು ನಾವು ದುಡಿದಿದ್ದಕ್ಕೆ ವೇತನ ನೀಡದೆ ವಂಚಿಸುವ ಬೀಡಿ ಮಾಲಕರ ರಕ್ಷಣೆಗೆ ನಿಂತಿದ್ದಾರೆ ಎಂದರೆ ಇಂತಹ ರಾಜಕೀಯವನ್ನು ಸೋಲಿಸುವುದು ನಮ್ಮೆಲ್ಲರ ಪ್ರಥಮ ಗುರಿಯಾಗಬೇಕು ಮತ್ತು ಆ ಮೂಲಕ ನಾವು ನಮ್ಮ ಬಾಕಿ ವೇತನವನ್ನು ಪಡೆಯಲು ಸಿದ್ದರಾಗಬೇಕು ಎಂದವರು ಕಾರ್ಮಿಕರಿಗೆ ಕರೆ ನೀಡಿದರು. ಇನ್ನು ಒಂದು ವಾರದ ಒಳಗೆ ಪ್ರತಿ 1000 ಬೀಡಿಗೆ ತಲಾ ರೂ 40 ರಂತೆ ಬಾಕಿ ಇರುವ ವೇತನವನ್ನು ಪಾವತಿಸದಿದ್ದರೆ 8.12.2025 ರಂದು ಜಿಲ್ಲಾ ಕೇಂದ್ರದಲ್ಲಿ ಬೀಡಿ ಕಾರ್ಮಿಕರನ್ನು ಸಾವಿರಾರು ಸಂಖ್ಯೆಯಲ್ಲಿ ಸೇರಿಸಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದವರು ಎಚ್ಚರಿಕೆ ನೀಡಿದರು.
ದ.ಕ. ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಸುಕುಮಾರ್ ಮಾತಾಡಿ, ಹಲವು ತ್ಯಾಗಬಲಿದಾನಗಳಿಂದ ಪಡೆದ ಕಾನೂನು ಸೌಲಭ್ಯಗಳನ್ನು ಈ ರೀತಿ ವಂಚಿಸಲು ಸಿಐಟಿಯು ಅವಕಾಶ ಕೊಡುವುದಿಲ್ಲ. ಕಳೆದ 7 ವರ್ಷಗಳಿಂದ ಕಟ್ಟಿದ್ದ ಪ್ರತಿ ಸಾವಿರ ಬೀಡಿ ವೇತನದಲ್ಲಿ ತಲಾ ರೂ 40 ರಂತೆ ಬಾಕಿ ಮಾಡಿದ್ದ ಬೀಡಿ ಮಾಲಕರ ಪೈಕಿ ಗಣೇಶ್ ಬೀಡಿ ಮಾಲಕರು ಚಿಲ್ಲರೆ ಹಣ ನೀಡಿ ಕಾರ್ಮಿಕರ ಸಹಿ ಪಡೆದು ವಂಚಿಸುತ್ತಿದ್ದಾರೆ. ಅದನ್ನು ತಡೆಯಲು ತಕ್ಷಣ ಮದ್ಯ ಪ್ರವೇಶ ಮಾಡಬೇಕೆಂದು ಅವರು ಸರಕಾರವನ್ನು ಒತ್ತಾಯಿಸಿದರು.
ಈ ಸಂದರ್ಭ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ , ಸಿಐಟಿಯು ಮುಖಂಡರಾದ ವಸಂತ ಆಚಾರಿ, ಜಯಂತಿ ಬಿ ಶೆಟ್ಟಿ, ಈಶ್ವರಿ ಪದ್ಮುಂಜ ಮೊದಲಾದವರು ಮಾತಾಡಿದರು.
ಹೋರಾಟದ ನೇತೃತ್ವದಲ್ಲಿ ಪದ್ಮಾವತಿ ಶೆಟ್ಟಿ, ವಸಂತಿ ಕುಪ್ಪೆಪದವು, ಜಯಂತ್ ನಾಯ್ಕ, ಲೋಲಾಕ್ಷಿ, ಭಾರತಿ ಬೋಳಾರ, ಜಯಶ್ರೀ ಬೆಳ್ತಂಗಡಿ, ಗಿರಿಜ ಮೂಡಬಿದ್ರೆ, ಲಕ್ಷ್ಮಿ, ಜಯಲಕ್ಷ್ಮಿ, ಸಿಐಟಿಯು ದ.ಕ. ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ನೋಣಯ ಗೌಡ, ಹೊನ್ನಯ ಅಮೀನ್, ಭವಾನಿ, ಉದಯ ಕುಮಾರ್, ಚಂದ್ರ ಪೂಜಾರಿ, ಉಡುಪಿ ಜಿಲ್ಲೆಯ ಮುಖಂಡರಾದ ಕವಿರಾಜ್, ಸುನೀತ, ಉಮೇಶ್ ಕುಂದರ್, ಬಲ್ಕಿಸ್, ಕೆ. ಯಾಧವ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಪ್ರಮೋದಿನಿ, ಹಾಗೂ ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಮೊದಲಾದವರು ಇದ್ದರು.
ಈ ಸಂದರ್ಭ ಕರ್ನಾಟಕ ಸರಕಾರದ ಅಪರ ಕಾರ್ಮಿಕ ಆಯುಕ್ತ ರವಿ ಕುಮಾರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೀಡಿ ಕಾರ್ಮಿಕರಿಗೆ ಅನ್ಯಾಯ ಆಗುವುದನ್ನು ಸರಕಾರ ಸಹಿಸುವುದಿಲ್ಲ , ತಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.
ಸರಕಾರದ ಸುತ್ತೋಲೆಯನ್ನು ಉಲ್ಲಂಘಿಸಿ ಸ್ವಲ್ಪ ಹಣ ನೀಡಿ ಕಾರ್ಮಿಕರ ಸಹಿ ಪಡೆಯುವುದನ್ನು ತಡೆಯುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಗಣೇಶ್ ಬೀಡಿ ಮಾಲಕರಿಗೆ ಪತ್ರ ಕಳುಹಿಸುವುದಾಗಿ ಕೂಡಾ ಭರವಸೆ ನೀಡಿದರು. ಇವರ ಜೊತೆಗೆ ಉಪ ಕಾರ್ಮಿಕ ಆಯುಕ್ತ ಗುರು ಪ್ರಸಾದ್, ಸಹಾಯಕ ಕಾರ್ಮಿಕ ಆಯುಕ್ತರಾದ ನಾಜೀಯ ಸುಲ್ತಾನ್ ಹಾಗೂ ಕಾರ್ಮಿಕ ಅಧಿಕಾರಿಗಳು ಇದ್ದರು.








