ಚಿತ್ರದುರ್ಗ: ಮಂದಿರ, ಮಸೀದಿ, ಚರ್ಚ್ ಗಳು ಸಮಾನತೆಯ ಕೇಂದ್ರಗಳಾದ ಸಂವಿಧಾನದ ಆಶಯ ಈಡೇರಿಸಿದಾಗ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳಿಗೆ ಮಹತ್ವ ಬರುತ್ತದೆ ಎಂದು ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆಯ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್ ಹೇಳಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಧಮ್ಮ ಕೇಂದ್ರದಲ್ಲಿ ವಿಮುಕ್ತಿ ವಿದ್ಯಾ ಸಂಸ್ಥೆ,ಶಾಂತಿ & ಸೌಹಾರ್ದ ವೇದಿಕೆ ಮತ್ತು ಧಮ್ಮ ಸಾಂಸ್ಕೃತಿಕ ಕೇಂದ್ರದವತಿಯಿಂದ ಏರ್ಪಸಲಾಗಿದ ಸಂವಿಧಾನ ಮತ್ತು ಅಲ್ಪಸಂಖ್ಯಾತ ಮಹಿಳೆಯರ ಹಕ್ಕುಗಳು ಕುರಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ಸಂವಿಧಾನದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಮಾನವಾದ ಹಕ್ಕು ನೀಡಿದ್ದು.ಪ್ರತಿಯೊಬ್ಬರಿಗೂ ಸಮಾನವಾದ ಅವಕಾಶ ನೀಡುವ ಮೂಲಕ ಸಮಾನತೆಯನ್ನು ಕಲ್ಪಿಸಿಕೊಟ್ಟಿದ್ದಾರೆ.
ಸಂವಿಧಾನದ ಪೀಠಿಕೆಯಲ್ಲಿ ಪ್ರಜಾಪ್ರಭುತ್ವ,ಸಮಾನತೆ,
ಸಮಾಜವಾದ, ಸಾಮರಸ್ಯ ಕುರಿತು ಸ್ಪಷ್ಟವಾಗಿ ಹೇಳಲಾಗಿದೆ. ಸಂವಿಧಾನವು ಧಾರ್ಮಿಕ ಅಲ್ಪಸಂಖ್ಯಾತರಿಗೂ ಮತ್ತು ಮಹಿಳೆಯರಿಗೂ ಸಮಾನ ಅವಕಾಶ ನೀಡಿದ್ದು, ಡಾ.ಬಿ.ಆರ್ ಅಂಬೇಡ್ಕರ್ ರವರು ಸಂವಿಧಾನದಲ್ಲಿ ಬುದ್ಧ, ಬಸವಣ್ಣನಂತಹವರ ವಿಚಾರಧಾರೆಗಳನ್ನು ಅಳವಡಿಸುವ ಮೂಲಕ ಸಂವಿಧಾನದ ಮೌಲ್ಯಗಳನ್ನು ಹೆಚ್ಚಿಸಿದ್ದಾರೆ ಎಂದರು.
ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಪಾರ್ಸಿಗಳು ಜೃೆನರು ಹೀಗೆ ಎಲ್ಲಾ ಸಮುದಾಯದ ಮಹಿಳೆಯರು ಮತ್ತು ಮಕ್ಕಳಿಗೂ ಸಮಾನತೆಯನ್ನು ಕಲ್ಪಿಸಿಕೊಡುವ ಮೂಲಕ ಡಾ.ಅಂಬೇಡ್ಕರ್ ಸಂವಿಧಾನ ಆಶಯ ಮತ್ತು ಮೌಲ್ಯಗಳನ್ನು ಹೆಚ್ಚಳ ಮಾಡಿದ್ದಾರೆ. ಇಡೀ ಸಮಾಜ ಶಾಂತಿ, ಸೌಹಾರ್ದ ಮತ್ತು ಸಾಮರಸ್ಯದಿಂದ ಬದುಕುವ ವಾತಾವರಣವನ್ನು ಕಾನೂನು ಮುಖಾಂತರ ನೀಡಿದ್ದಾರೆ ಎಂದರು.
ದೇಶದಲ್ಲಿ ಕೆಲವು ಶಕ್ತಿಗಳು ಸಂವಿಧಾನವನ್ನು ಬದಲಾವಣೆ ಮಾಡುವ ವಿಚಾರ ಪದೇಪದೇ ಮುನ್ನಲೆಗೆ ತರುವ ಮೂಲಕ ಸಮಾಜದ ನೆಮ್ಮದಿಗೆ ಭಂಗ ಉಂಟು ಮಾಡುವ ಪ್ರಯತ್ನವನ್ನು ನಡೆಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಕೆಲವು ವರ್ಷಗಳಲ್ಲಿ ಕೋಮುಭಾವನೆ ಕೆರಳಿಸುವ ಕೆಲಸ ಮತ್ತು ದ್ವೇಷದ ಮಾತುಗಳನ್ನು ಆಡುವ ಮೂಲಕ ಸಮಾಜದ ನೆಮ್ಮದಿ ಹಾಳು ಮಾಡುವ ಪ್ರಯತ್ನ ನಡೆದಿದೆ ಎಂದರು.
ಮಾರುತಿನಗರ ಬಡಾವಣೆ ಎಸ್.ಆರ್ ಕಾಲೋನಿಯ ರೇಷ್ಮಾ ಖಾನಂ ಮಾತನಾಡಿ, ಮುಸ್ಲಿಂ ಸಮುದಾಯದಲ್ಲಿ ಸಲಾಮ್ ವಾಲೇಕುಂ ಅನ್ನುವ ಪದವನ್ನು ಬಳಸುವ ಮೂಲಕ ಪ್ರತಿಯೊಬ್ಬ ಮನುಷ್ಯನಿಗೂ ಪ್ರತಿಗೌರವ ನೀಡುವ ಸಂಪ್ರದಾಯವಿದ್ದು, ಅದನ್ನು ಖುರಾನ್ ಕೂಡ ಅನುಸರಿಸಲು ಹೇಳಿಕೊಟ್ಟಿದೆ ಎಂದರು
ಮುಸ್ಲಿಂರು ಪುರುಷ ಮಹಿಳೆಯರಿಬ್ಬರು ನಮಾಜು ಮಾಡುವ ಮೂಲಕ ಧಾರ್ಮಿಕ ಸಮಾನತೆಯನ್ನು ಅನುಸರಿಸಿಕೊಂಡು ಬರಲಾಗಿದೆ ಎಂದರು
ಅಲ್ ಎ ಮಸ್ಜಿದ್ ನ ಸಮಿತಿಯ ಡಾ.ರೆಹಮಾನ್ ಮಾತನಾಡಿ, ಮಸೀದಿಯಲ್ಲಿ ಎಲ್ಲರಿಗೂ ಅವಕಾಶ ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಮುಕ್ತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಅನ್ನಪೂರ್ಣ, ಅಲ್ ಎ.ಮಸೀದಿಯ ಸಿರಾಜ್ ವುದ್ದೀನ್, ಜುಬೇರ್ ಅನ್ಸಾರಿ, ವಿಮುಕ್ತಿ ವಿದ್ಯಾ ಸಂಸ್ಥೆಯ ನಿರ್ದೇಶಕ ಆರ್.ವಿಶ್ವ ಸಾಗರ್, ಧಮ್ಮ ಕೇಂದ್ರದ ಅರಣ್ಯ ಸಾಗರ್, ಸಂಯೋಜಕರಾದ ನಾಗರತ್ನಮ್ಮ, ಬೀಬಿಜಾನ್, ನಾಗಪ್ಪ ಮುಂತಾದವರು ಉಪಸ್ಥಿತರಿದ್ದರು.




