ಅಲೆಮಾರಿ ಸುಡಗಾಡ ಸಿದ್ಧರ ಟೆಂಟ್ ಗಳಿಗೂ  ಸೋಲಾರ್ ಲೃೆಟ್ ಭಾಗ್ಯ

11 months ago

ಡಿ-ಲೃೆಟ್ ಎನರ್ಜಿಯಿಂದ ಸೋಲಾರ್ ಲೃೆಟ್ ಕೊಡುಗೆ

ಚಿತ್ರದುರ್ಗ:ಡಿ-ಎನರ್ಜಿ ಅಭಿವೃದ್ಧಿ ಸಂಸ್ಥೆ, ತುಮಕೂರು, ವಿಮುಕ್ತಿ ವಿದ್ಯಾ ಸಂಸ್ಥೆ ಮತ್ತು  ಶಾಂತಿ & ಸೌಹಾರ್ದ ವೇದಿಕೆ – ಚಿತ್ರದುರ್ಗ ಇವರ ವತಿಯಿಂದ ಅಲೆಮಾರಿ ಸುಡಗಾಡು ಸಿದ್ಧರ ಟೆಂಟ್ ಗಳಲ್ಲಿ ಅಲೆಮಾರಿ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಸೋಲಾರ್ ಎನರ್ಜಿ ಕಂಪನಿಯ ಮತ್ತು  ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ  ಸೋಲಾರ್ ಟೃೆಟ್ ವಿತರಣಾ ಸಮಾರಂಭವನ್ನು ದಿನಾಂಕ  3-6-2025 ರಂದು ಮಂಗಳವಾರ  ಮಧ್ಯಾಹ್ನ  3 ಗಂಟೆಗೆ  ಅಲೆಮಾರಿ ಕಾಲೋನಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಅಲೆಮಾರಿಗಳ ಟೆಂಟ್ ಗಳ ಕಾಲೋನಿಯಲ್ಲಿ ಸೋಲಾರ್  ಲೃೆಟ್ ವಿತರಣಾ ಸಮಾರಂಭದಲ್ಲಿ  ಭಾಗವಹಿಸಿದ್ದ,ಜಿಲ್ಲಾ  ಕಾಂಗ್ರೆಸ್ ಹಾಗೂ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ  ಅಧ್ಯಕ್ಷ ಎಂ.ಕೆ.ತಾಜ್ ಪೀರ್ ಮಾತನಾಡಿ ಅಲೆಮಾರಿ ಸುಡಗಾಡ ಸಿದ್ಧರ ನೂತನ ಕಾಲೋನಿಗೆ ನಗರಾಭಿವೃದ್ಧಿ  ಪ್ರಾಧಿಕಾರದಿಂದ ಕುಡಿಯುವ ನೀರಿನ ಟ್ಯಾಂಕ್  ಇಟ್ಟುಕೊಡುವ ಕುರಿತು ಸದಸ್ಯರ  ಜೊತೆ ಚರ್ಚಿಸಲಾಗುವುದು. ಹಾಗೆಯೇ ಶಾಸಕರ ಗಮನಕ್ಕೂ ತಂದು ಹಕ್ಕುಪತ್ರಗಳನ್ನು ಕೊಡಿಸುವುದಾಗಿ ಭರವಸೆ ನೀಡಿದರು.

ತುಮಕೂರು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸಿ.ನರಸಿಂಹಮೂರ್ತಿ ಮಾತನಾಡಿ, ಅಲೆಮಾರಿ ಜನಾಂಗದ  ಮಕ್ಕಳ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಡಿ-ಎನರ್ಜಿ ಸೋಲಾರ್  ಕಂಪನಿ ಜೊತೆ ಮಾತನಾಡಿ ಸೋಲಾರ್ ಲೃೆಟ್  ಕೊಡಿಸಲಾಗಿದ್ದು.ಮುಂದಿನ ದಿನಮಾನದಲ್ಲಿ ಅಲೆಮಾರಿ ಜನಾಂಗದವರು ಮನೆ ಕಟ್ಟಲು ಪ್ರಯತ್ನಿಸಿದರೆ ನಮ್ಮ ಸಂಸ್ಥೆಯವತಿಯಿಂದ ನೆರವು ನೀಡುವುದಾಗಿ ಹೇಳಿದರು.

ಶ್ರೀ ಕೇತೇಶ್ವರ ಮಹಾಮಠದ ಶ್ರೀ ಇಮ್ಮಡಿ ಕೇತೇಶ್ವರ ಸ್ವಾಮೀಜಿ  ಮಾತನಾಡಿ ಅಲೆಮಾರಿ  ಜನಾಂಗದವರ ಸಂಕಷ್ಟವನ್ನು ಅರ್ಥಮಾಡಿಕೊಂಡು  ಅವರಿಗೆ ಮಠದ ಪಕ್ಕದಲ್ಲಿ  ಇರಲು ಅವಕಾಶ ಮಾಡಿಕೊಟ್ಟು  ಕುಡಿಯುವ ನೀರು,ದೀಪ ಸೇರಿದಂತೆ ಹಲವು ರೀತಿ ನೆರವು ನೀಡಲಾಗುತ್ತಿದೆ ಎಂದರು.

ವಿಮುಕ್ತಿ  ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಅನ್ನಪೂರ್ಣ  ಮಾತನಾಡಿ, ವಿಮುಕ್ತಿ  ಸಂಸ್ಥೆ  ಕಳೆದ ಮೂವತ್ತಾರು ವರ್ಷಗಳಿಂದ ಸಮಾಜಮುಖಿಯಾಗಿ ಕೆಲಸ  ಮಾಡುತ್ತಿದ್ದು.ಮಹಿಳೆಯೆ ಸಬಲೀಕರಣ,ಕಿಶೋರಿಯ  ಶಿಕ್ಷಣ  ಮತ್ತು ಆರೋಗ್ಯದ ವಿಚಾರದಲ್ಲಿ ಕೆಲಸ ಮಾಡಲಾಗುತ್ತದೆ  ಎಂದ ಅವರು ಅಭಿವೃದ್ಧಿಯ ಕೆಲಸವನ್ನು  ಇಟ್ಟುಕೊಂಡು  ಕೆಲಸ ಮಾಡಲಾಗುತ್ತಿದೆ ಎಂದರು.

ಕರ್ನಾಟಕ  ಶಾಂತಿ ಮತ್ತು  ಸೌಹಾರ್ದ  ವೇದಿಕೆಯ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ, ಅಲೆಮಾರಿ  ಸುಡಗಾಡ ಸಿದ್ಧ ಜನಾಂಗದ ಪುನರ್ವಸತಿಗಾಗಿ ಸರ್ಕಾರ  ಜಿಲ್ಲಾಡಳಿತ ದಿಂದ ಇಂಗಳದಾಳ ಪಂಚಾಯಿತಿ  ವ್ಯಾಪ್ತಿಯಲ್ಲಿ ಎರಡು ಎಕರೆ ಭೂಮಿ ನೀಡಿ ಕಾಲೋನಿ  ಅಭಿವೃದ್ಧಿ  ಮಾಡಲಾಗಿದ್ದು, ಇ-ಸೋತ್ತು ವಿಳಂಬವಾಗುತ್ತಿರುವುದ ವಿಷಾದಕರ ಎಂದರು.

ಕಳೆದ ಹಲವು ವರ್ಷಗಳಿಂದ ಅಲೆಮಾರಿ ಸುಡಗಾಡ ಸಿದ್ದರ ಪರವಾದ ಹೋರಾಟವು ಆರ್.ವಿಶ್ವ  ಸಾಗರ್ ಅವರ ಮಾರ್ಗದರ್ಶನ  ಮತ್ತು  ನೇತೃತ್ವದಲ್ಲಿ  ನಡೆದಿದ್ದು, ಅಲೆಮಾರಿಗಳಿಗೆ ಪುನರ್ವಸತಿ ಕಲ್ಪಿಸುವವರೆಗೆ ಹೋರಾಟ  ಮುಂದುವರೆಯುತ್ತದೆ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ವೃೆ.ರವಿಕುಮಾರ್ ಮಾತನಾಡಿ, ಅಲೆಮಾರಿ ಕುಟುಂಬಗಳ ಪುನರ್ವಸತಿ, ದೀಪ, ನೀರಿನ ವ್ಯವಸ್ಥೆ ಮಾಡಲು ಪಂಚಾಯಿತಿ ಕಡೆಯಿಂದ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.

ಡಿ-ಲೃೆಟ್ ಕಂಪನಿಯಿಂದ ನೀಡಲಾದ ಸೋಲಾರ್ ಲೃೆಟ್ ವಿತರಣಾ ಸಮಾರಂಭದಲ್ಲಿ ನಾಗರತ್ನಮ್ಮ  ನಿರೂಪಣೆ  ಮಾಡಿ ವಂದಿಸಿದರು. ವಿಮುಕ್ತಿ  ವಿದ್ಯಾ ಸಂಸ್ಥೆಯ ನಿರ್ದೇಶಕ ಆರ್.ವಿಶ್ವ  ಸಾಗರ್, ಅಂಗವಿಕಲರ ಇಲಾಖೆಯ ಮೃೆಲಾರಪ್ಪ, ಧಮ್ಮ ಕೇಂದ್ರದ ಅರಣ್ಯ ಸಾಗರ್, ಅಲೆಮಾರಿ ಸಂಘಟನೆಯ ಬಾಬು ಮತ್ತು  ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Leave a Reply