ಅಲೆಮಾರಿ ಜನರಿಗೆ ಕಾನೂನಿನ ನೆರವು: ನ್ಯಾ.ಗಿರೀಶ್ ಬಿ.ಕೆ.ಭರವಸೆ

3 years ago

ಚಿತ್ರದುರ್ಗ: ಚಿತ್ರದುರ್ಗ ಸಮೀಪದ ಧಮ್ಮ ಕೇಂದ್ರ ಸಮೀಪ ಟೆಂಟ್ ಗಳಲ್ಲಿ ವಾಸವಾಗಿರುವ ಅಲೆಮಾರಿ, ಅರೆ-ಅಲೆಮಾರಿ ಜನಾಂಗದವರಿಗೆ ಕಾನೂನು ನೆರವು ಕೊಡಿಸುವುದಾಗಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಗಿರೀಶ್ ಬಿ.ಕೆ. ಹೇಳಿದರು.

ಧಮ್ಮ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಮುಕ್ತಿ ವಿದ್ಯಾ ಸಂಸ್ಥೆ (ರಿ) ಚಿತ್ರದುರ್ಗ, ಶಾಂತಿ & ಸೌಹಾರ್ದ ವೇದಿಕೆ ಚಿತ್ರದುರ್ಗ ಮತ್ತು ಅಲೆಮಾರಿ, ಅರೆ-ಅಲೆಮಾರಿ ಮಹಾಸಭಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು – ನೆರವು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕಡೆಗಣಿಸ್ಪಟ್ಟ ಅಲೆಮಾರಿ ಸಮುದಾಯ ಸಾಮಾಜಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರುವ ಅಗತ್ಯವಿದೆ. ಅಲೆಮಾರಿ ಸುಡುಗಾಡ ಸಿದ್ಧರಿಗೆ ನಿವೇಶನ, ಮನೆ, ಜಾತಿ ಪ್ರಮಾಣ ಪತ್ರ, ಸೇರಿದಂತೆ ನಾಗರಿಕ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಯತ್ನ ನಡೆಸಲಾಗಿದ್ದು, ಕಾನೂನು ಪ್ರಾಧಿಕಾರದ ಮುಖಾಂತರ ಎಲ್ಲಾ ರೀತಿ ನೆರವು ನೀಡಲಾಗುತ್ತದೆ ಎಂದರು.

ಚಿತ್ರದುರ್ಗ ಧಮ್ಮ ಕೇಂದ್ರದ ಸಮೀಪ ವಾಸವಾಗಿರುವ ಅಲೆಮಾರಿ ಸುಡುಗಾಡು ಸಿದ್ಧರಿಗೆ ಈಗಾಗಲೇ ಎಲ್ಲ ಕೊಡಿಸುವ ಪ್ರಯತ್ನದಲ್ಲಿ ಇದ್ದೇವೆ ಎಂದರು.

ವಕೀಲರ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಸಿ.ದಯಾನಂದ ಮಾತನಾಡಿ, ನ್ಯಾಯಾಧೀಶ ಗಿರೀಶ್ ಬಿ.ಕೆ ಅವರು ತಳ ಸಮುದಾಯವನ್ನು ಹುಡುಕಿ ನ್ಯಾಯ ಕೊಡಿಸುವ ಪ್ರಯತ್ನ ನಿಜಕ್ಕೂ ಅತ್ಯುತ್ತಮವಾದದ್ದು ಎಂದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಮೂರ್ತಿ ಅವರು ಮಾತನಾಡಿ ಅಲೆಮಾರಿ, ಬುಡಕಟ್ಟು ಸಮುದಾಯಗಳು ಜಾನಪದ ಕಲೆಯನ್ನು ಮೃೆಗೂಡಿಸಿಕೊಂಡವರು. ಇಂತಹ ಸಮುದಾಯ ಕಷ್ಟದಲ್ಲಿ ಇರಬೇಕಾದರೆ ಸರ್ಕಾರ ಸ್ಪಂದಿಸುವುದು ಹೊಣೆಗಾರಿಕೆ ಎಂದರು.

ಭಾರತ ಸೇವಾದಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ ಅಲೆಮಾರಿ, ಬುಡಕಟ್ಟು ಸಮುದಾಯಗಳನ್ನು ಸರ್ಕಾರ ಜವಾಬ್ದಾರಿಯಿಂದ ನಡೆಸಿಕೊಳ್ಳಬೇಕಾಗಿದೆ. ನ್ಯಾಯಾಧೀಶರಾದ ಗಿರೀಶ್ ಬಿ.ಕೆ ಅವರ ಸಹಾಯದಿಂದ ಅದಷ್ಟು ನೆರವು ಸಿಕ್ಕಿದ್ದು ಇನ್ನೂ ಸಾಕಷ್ಟು ನೆರವು ದೊರೆಯಬೇಕಾಗಿದೆ ಅಂದರು.

HUK Hamara Bhi to hai @ 75 ಕಾರ್ಯಕ್ರಮದಲ್ಲಿ ವಿಮುಕ್ತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಅನ್ನಪೂರ್ಣ, ನಿರ್ದೇಶಕರಾದ ಆರ್.ವಿಶ್ವ ಸಾಗರ್ , ಸುಡುಗಾಡ ಸಿದ್ಧ ಜನಾಂಗದ ಬಾಬು, ಗ್ರಾಮ ಪಂಚಾಯತಿ ಅಧ್ಯಕ್ಷರಾ ಗೀತಾ, ನಾಗರತ್ನಮ್ಮ ಪಾಲಯ್ಯ, ನಾಯಕನಹಟ್ಟಿ ರಾಮಣ್ಣ, ತಿಪ್ಪೇಸ್ವಾಮಿ, ಗುರುರಾಜ್ ಮೊದಲಾದವರು ಹಾಜರಿದ್ದರು.

Leave a Reply