ಎರಡನೇ ಬಾರಿ ಮತ್ತು ಮೂರನೇ ಬಾರಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ಬರೆದವರಿಗೆ ಸೀಟುಗಳು ಕಾಲೇಜುಗಳಲ್ಲಿ ದೊರೆಯುವುದು ಅಷ್ಟು ಸುಲಭವಲ್ಲ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ರಾಜ್ಯ ಸರ್ಕಾರ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯ ವಿದ್ಯಾರ್ಥಿ ಸಮುದಾಯಕ್ಕೆ ಅನುಕೂಲವಾಗುವ ಹಿನ್ನೆಲೆಯಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಫೇಲಾದವರಿಗೆ ಎರಡನೇ ಬಾರಿ ಮತ್ತು ಮೂರನೇ ಬಾರಿ ಪರೀಕ್ಷೆಯನ್ನು ಬರೆಯಲು ಅವಕಾಶವನ್ನ ಕಲ್ಪಿಸಿಕೊಟ್ಟು ಒಂದು ವರ್ಷದ ಕಾಯುವ ತೊಂದರೆಯನ್ನು ತಪ್ಪಿಸಿದ್ದಾರೆ ಇದು ಉತ್ತಮವಾದಂತಹ ವಿಚಾರ.
10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶಗಳು ಬರುವ ಮುನ್ನವೇ ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಥಮ ಪಿಯುಸಿ ಮತ್ತು ಪದವಿ ತರಗತಿಗಳಿಗೆ ಹಾಗೂ ತಾಂತ್ರಿಕ ವಿಭಾಗದ ತರಗತಿಗಳಿಗೆ ಮುಂಗಡವಾಗಿ ಪ್ರವೇಶವನ್ನು ನೀಡಿರುತ್ತಾರೆ. ಫಲಿತಾಂಶ ಬಂದ ನಂತರ ಮತ್ತೆ ಪ್ರತಿಭೆಗಳ ಆಧಾರದ ಮೇಲೆ ಪ್ರಭಾವಗಳ ಪ್ರಭಾವದ ಮೇಲೆ ಪ್ರವೇಶವನ್ನು ಪಡೆದುಕೊಳ್ಳುತ್ತಾರೆ. ಎಲ್ಲ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಫಲಿತಾಂಶ ಬಂದ ಕೆಲವೇ ದಿನಗಳಲ್ಲಿ ಸೀಟುಗಳೆಲ್ಲವೂ ಭರ್ತಿಯಾಗಿರುತ್ತದೆ.
ಎರಡನೇ ಅವಧಿಗೆ ಮತ್ತು ಮೂರನೇ ಅವಧಿಗೆ ಮತ್ತೆ ಮರು ಪರೀಕ್ಷೆಯನ್ನು ಬರೆದು ಈ ವರ್ಷದ ಶೈಕ್ಷಣಿಕ ವರ್ಷದಲ್ಲಿಯೇ ಪ್ರವೇಶವನ್ನು ಬಯಸುವ ಸಹಸ್ರಾರು ಮಕ್ಕಳಿಗೆ ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಪ್ರವೇಶ ದೊರೆಯುವುದಿಲ್ಲ. ಇವರುಗಳು ಮತ್ತೆ ನಿರಾಶೆಯಾಗುತ್ತಾರೆ ಇಲ್ಲವೇ. ಸಿಕ್ಕಸಿಕ್ಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶವನ್ನು ಪಡೆದುಕೊಳ್ಳಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಸಚಿವರು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಎಲ್ಲ ಶಾಲಾ-ಕಾಲೇಜುಗಳಲ್ಲಿ ಎರಡನೇ ಮತ್ತು ಮೂರನೇ ಪರೀಕ್ಷೆಯ ಫಲಿತಾಂಶ ಬಂದು ಇಲ್ಲಿ ಉತ್ತೀರ್ಣರಾದಂತಹ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ದೊರಕುವಂತೆ ಮಾಡುವ ಸಲುವಾಗಿ ಕನಿಷ್ಠ ಒಂದಷ್ಟು ಪ್ರಮಾಣದ ಸೀಟುಗಳನ್ನು ಕಾಯ್ದಿರಿಸುವಂತೆ ಆದೇಶವನ್ನು ಹೊರಡಿಸಬೇಕು. ಈ ರೀತಿಯಲ್ಲಿ ಕಾಯಿ ಜನಿಸಿದಂತಹ ಸೀಟುಗಳನ್ನು ಎರಡನೇ ಬಾರಿ ಮತ್ತು ಮೂರನೇ ಬಾರಿ ಪರೀಕ್ಷೆಯನ್ನ ಬರೆದು ಪಾಸಾದವರಿಗೆ ಮಾತ್ರವೇ ನೀಡಬೇಕು ಒಂದುವೇಳೆ ಯಾರು ಬರದಿದ್ದರೆ ಆಗ ಆ ಸೀಟುಗಳನ್ನು ತುಂಬಿಸಿಕೊಳ್ಳುವ ಅಧಿಕಾರವನ್ನು ಶಿಕ್ಷಣ ಸಂಸ್ಥೆಯವರಿಗೆ ನೀಡಬೇಕು.
ಈ ರೀತಿಯ ಕ್ರಮಗಳು ಆಗದಿದ್ದರೆ ಎರಡನೇ ಬಾರಿ ಮತ್ತು ಮೂರನೇ ಬಾರಿ ಪರೀಕ್ಷೆಯನ್ನ ಬರೆದು ಸಹ ತಾವು ಬಯಸುವ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ದೊರೆಯದೆ ನಿರಾಶರಾಗುವಂತಹ ಮಕ್ಕಳ ಸಂಖ್ಯೆ ಸಾಕಷ್ಟು ಉಳಿದುಕೊಳ್ಳುತ್ತದೆ ಇದೇ ನಿಟ್ಟಿನಲ್ಲಿ ಸಿಇಟಿ ವ್ಯವಸ್ಥೆಯಲ್ಲೂ ಸಹ ಚಿಂತನೆ ನಡೆಯಬೇಕಾಗಿದೆ ಎರಡನೇ ಮತ್ತು ಮೂರನೇ ಬಾರಿ ಪರೀಕ್ಷೆ ಬರೆದು ಫಲಿತಾಂಶ ಬರುವ ವೇಳೆಗೆ ಇಲ್ಲಿಯೂ ಸಹ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ಪ್ರಕಾರದ ಪ್ರವೇಶವಕಾಶಗಳು ಮುಗಿದಿರುತ್ತದೆ ಈ ಹಿನ್ನೆಲೆಯಲ್ಲಿ ಇದರ ಬಗ್ಗೆಯೂ ಚಿಂತನೆಯನ್ನು ನಡೆಸಬೇಕಾಗಿದೆ.
ಸರ್ಕಾರಗಳು ಮಾಡುವ ಬದಲಾವಣೆಗಳಿಗೆ ಪೂರಕವಾಗಿ ಇಲಾಖೆಯಲ್ಲೂ ಸಹ ಒಂದಷ್ಟು ಮುಂದಾಲೋಚನೆಯ ಕ್ರಮಗಳು ಕಾಲಕಾಲಕ್ಕೆ ಆಗಬೇಕಾದದ್ದು ಅನಿವಾರ್ಯವಾಗಿದೆ.
– ಕೆ ಎಸ್ ನಾಗರಾಜ್, ಬೆಂಗಳೂರು




