ಪರಿಸರ ಸಂರಕ್ಷಿಸದಿದ್ದರೆ ಮನುಷ್ಯನ ವಿನಾಶ ನಿಶ್ಚಿತ: ಡಾ. ದೇವರಾಜ್
ಚಾಮರಾಜನಗರ: ಪ್ರಕೃತಿ ಚೆನ್ನಾಗಿದ್ದರೆ ಮಾತ್ರ ಮಾನವನ ಉಳಿವು. ಮಾನವನ ಹಸ್ತಕ್ಷೇಪದಿಂದ ನೈಸರ್ಗಿಕ ಸಂಪನ್ಮೂಲಗಳು ಬರಿದಾಗುತ್ತಿವೆ. ಬೇಸಿಗೆ ಕಾಲದಲ್ಲಿ ನೀರಿನ ಪ್ರಾಮುಖ್ಯತೆ, ಅಗತ್ಯ ಹಾಗೂ ಅಮೂಲ್ಯತೆ ಬಗ್ಗೆ ಅರಿವು ಮೂಡಿಸಬೇಕು. ಪರಿಸರ ಸಂರಕ್ಷಿಸದಿದ್ದರೆ ಮನುಕುಲದ ವಿನಾಶ ನಿಶ್ಚಿತ ಎಂದು ಭೋಗಾಪುರದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ದೇವರಾಜು ಹೇಳಿದರು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಭೋಗಾಪುರದಲ್ಲಿರುವ ದೀಪ ಅಕಾಡೆಮಿ ಅಂಧ ಮಕ್ಕಳ ಶಾಲೆಯಲ್ಲಿ ರಂಗವಾಹಿನಿ ಸಂಸ್ಥೆ ಏರ್ಪಡಿಸಿದ್ದ ಪರಿಸರ ಪ್ರೇಮಿ ಸಿಎಂ ವೆಂಕಟೇಶ್ ಅವರಿಗೆ ಎಂ. ಮಾದಯ್ಯ ಪರಿಸರ ರತ್ನ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದರು.
ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಪ್ರತಿದಿನ ಗಿಡಗಳನ್ನು ನೆಟ್ಟು, ಗಿಡಗಳಿಗೆ ನೀರುಣಿಸಿ ಪೋಷಿಸುವ ಕೆಲಸ ಮಾಡುತ್ತಿರುವ ಪರಿಸರ ಪ್ರೇಮಿ ಸಿ ಎಂ ವೆಂಕಟೇಶ್ ಅವರು ಜಿಲ್ಲೆಯಲ್ಲಿ ಮಾದರಿ ವ್ಯಕ್ತಿಯಾಗಿದ್ದಾರೆ. ಅದೇ ರೀತಿ ರಂಗವಾಹಿನಿ ಸಂಸ್ಥೆಯ ಸಿ.ಎಂ.ನರಸಿಂಹಮೂರ್ತಿಯವರು ತಮ್ಮ ತಂದೆಯವರ ಹೆಸರಿನಲ್ಲಿ 5,000 ರೂಪಾಯಿ ನಗದು, ಫಲ ತಾಂಬೂಲ ಪುರಸ್ಕಾರದೊಂದಿಗೆ ಎಂ.ಮಾದಯ್ಯ– ಪರಿಸರ ರತ್ನ ಪ್ರಶಸ್ತಿಯನ್ನು ಸಿಎಂ ವೆಂಕಟೇಶ್ ಅವರಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಿದರು.

ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ತಂದೆಯೇ ಹೀರೋ ಆಗಿರುತ್ತಾರೆ. ತಂದೆ ತಾಯಿಯ ಹೆಸರನ್ನು ಉಳಿಸುವ ಕೆಲಸವನ್ನು ಪ್ರತಿಯೊಬ್ಬ ಮಕ್ಕಳು ಮಾಡಬೇಕು ಎಂದು ಕರೆ ನೀಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಿ.ಎಂ.ವೆಂಕಟೇಶ್, ನನ್ನ ಪರಿಸರ ಸೇವೆಯನ್ನು ಗುರುತಿಸಿ ರಂಗವಾಹಿನಿ ಸಂಸ್ಥೆ ಮೂಲಕ ಸಿ.ಎಂ.ನರಸಿಂಹಮೂರ್ತಿಯವರ ಹುಟ್ಟು ಹಬ್ಬದ ಅಂಗವಾಗಿ ನೀಡಿರುವ ಅವರ ತಂದೆ ಹೆಸರಿನ ಪ್ರಶಸ್ತಿಯನ್ನು ಅತ್ಯಂತ ಗೌರವದಿಂದ ಸ್ವೀಕರಿಸಿದ್ದೇನೆ. ಮುಂದಿನ ದಿನಗಳಲ್ಲಿ ಈ ಪ್ರಶಸ್ತಿಯನ್ನು ಇತರೆ ಕ್ಷೇತ್ರದ ಸಾಧಕರಿಗೂ ನೀಡಲಿ ಎಂದು ಆಶಿಸಿದರು.
ಕರ್ನಾಟಕ ರಂಗ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಗೂ ಚಿತ್ರನಟ ಉಮ್ಮತ್ತೂರು ಬಸವರಾಜು ಮಾತನಾಡಿ, ದೀಪ ಅಕಾಡೆಮಿ ಅಂಧ ಮಕ್ಕಳ ಶಾಲೆಯಲ್ಲಿ ರಂಗವಾಹಿನಿ ಸಂಸ್ಥೆಯು ಇಂತಹ ಸತ್ಕಾರ್ಯದ ಮಾದರಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಅಭಿನಂದನೀಯ. ಇದು ಇತರರಿಗೂ ಮಾದರಿಯಾಗಲಿ ಎಂದರು.
ಸಮಾರಂಭದಲ್ಲಿ ಸಿದ್ದಾರ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಂಗಸ್ವಾಮಿ, ರಂಗವಾಹಿನಿ ಸಂಸ್ಥೆಯ ಎಂ. ಸಂಗೀತ, ಸಿ.ಎಂ.ಸೌಭಾಗ್ಯ, ದೀಪ ಅಕಾಡೆಮಿಯ ಅಂಧ ಮಕ್ಕಳ ಶಾಲೆ ಶಿಕ್ಷಕರಾದ ಕುಮಾರ್, ಸುದೀಪ್, ಬೇಬಿ, ಜಾನಪದ ಕಲಾವಿದ ರಾಮಸಮುದ್ರ ಗೌರಿಶಂಕರ್, ದೊಡ್ಡರಾಯ ಪೇಟೆ ಮಹೇಶ್ ಮತ್ತಿತರರು ಹಾಜರಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಸಿಹಿ ಭೋಜನ ವ್ಯವಸ್ಥೆ ಮಾಡಲಾಯಿತು.




