ವಿಶ್ವ ಪರಿಸರ ದಿನಾಚರಣೆ, ಜಾಗೃತಿ ಜಾಥಾ ಮತ್ತು ಸಸಿ ನೆಡುವ ಕಾರ್ಯಕ್ರಮ

4 years ago

ಬೆಂಗಳೂರು: ಮನುಷ್ಯ ಮತ್ತು ಪ್ರಾಣಿಗಳಿಗೆ ಬದುಕಲು ಇರುವುದೊಂದೇ ಭೂಮಿ, ಹಸಿರುಮಯವಾದ ಭೂಮಿಯನ್ನು ಜನಸಂಖ್ಯೆ ಹೆಚ್ಚಳ, ಮಾನವನ ಅತಿಯಾದ ಆಸೆಯಿಂದ ಹಸಿರು ಭೂಮಿಯನ್ನ ಕಾಂಕ್ರೀಟ್ ನಾಡಾಗಿ ಪರಿವರ್ತಿಸಿದ, ಅಭಿವೃದ್ದಿ ಹೆಸರಿನಲ್ಲಿ ಮರಗಿಡಗಳನ್ನು ಕಡಿಯಲಾಯಿತು. ಬೆಳೆಯುವ ಬೆಳೆಗಳಿಗೆ ರಾಸಯನಿಕ ಸಿಂಪಡಣೆ, ಕೆರೆಗಳನ್ನು ಬರಿದು ಮಾಡಲಾಯಿತು  ಇದರಿಂದ ಪರಿಸರ ಹಾಳಯಿತು. ಪರಿಸರ ಉಳಿದರೆ ಮಾತ್ರ ಮನುಷ್ಯ ಬದುಕಲು ಸಾಧ್ಯ ಎಂದು ಆಡಳಿತ ಪಕ್ಷದ ಮಾಜಿ ನಾಯಕ ಎಮ್.ಶಿವರಾಜು ಹೇಳಿದರು.

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಶಕ್ತಗಣಪತಿ ನಗರ, ಶಂಕರಮಠ, ಮಹಾಲಕ್ಷ್ಮೀಪುರಂ ವಾರ್ಡ್ ನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಜಾಥಾ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಗೆ ಸಸಿ ವಿತರಣೆಯ ಮೂಲಕ ಆರಂಭಿಸಿ ಮಾತಾಡಿದ ಅವರು,

ಪರಿಸರ ಉಳಿಸಬೇಕಾದರೆ ಮರಗಿಡ ಬೆಳಸಿ, ಉಳಿಸಬೇಕು ಮತ್ತು ಮಳೆ ನೀರು ಸಂಗ್ರಹ, ಸಾವಯವ ಕೃಷಿ ಪದ್ದತಿ ಆಳವಡಿಸಿಕೊಳ್ಳಬೇಕು. ಶಿಕ್ಷಣದಲ್ಲಿ ಮಕ್ಕಳಿಗೆ ಪರಿಸರ ಬಗ್ಗೆ ಅರಿವು ಮೂಡಿಸುವ ಪಠ್ಯಗಳನ್ನು ಹೇಳಿಕೊಡಬೇಕು. ಪ್ರತಿಯೊಬ್ಬ ನಾಗರಿಕರು ಪರಿಸರ ರಕ್ಷಣೆಗೆ ಮುಂದಾದಗ ಮಾತ್ರ ಭೂಮಿ ಉಳಿಯಲು ಸಾಧ್ಯ ಎಂದರು.

ಎಸ್.ಕೇಶವಮೂರ್ತಿ ಮಾತನಾಡಿ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವ, ಮಾರ್ಗದರ್ಶನದಲ್ಲಿ ಮಹಾಲಕ್ಷ್ಮೀಪುರಂ ವಾರ್ಡ್ ನಲ್ಲಿ ಸಾರ್ವಜನಿಕರಿಗೆ ಪರಿಸರ, ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಜನರ ಆರೋಗ್ಯ, ಸುರಕ್ಷತೆ ಬಗ್ಗೆ ಕಾಳಜಿ ವಹಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಪರಿಸರ ಉಳಿಸಬೇಕಾದರೆ ಪ್ರತಿಯೊಬ್ಬ ನಾಗರಿಕರ ಸಹಕಾರ ಅಗತ್ಯ ಎಂದರು.

ಬಿ.ಬಿ.ಎಂ.ಪಿ. ಸದಸ್ಯ ಎಸ್.ಕೇಶವಮೂರ್ತಿ ಸಸಿ ನೆಟ್ಟು ನಂತರ ಸಸಿ ವಿತರಣೆ ಮಾಡಿ ಪರಿಸರ ದಿನಾಚರಣೆ ಅಚರಿಸಿದರು. ಶಾಲೆಯ ಮಕ್ಕಳು ಮತ್ತು ಪರಿಸರ ಪ್ರೇಮಿಗಳು, ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.

Leave a Reply