ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಭಾನುವಾರ ರಜಾ ದಿನವಾದ ಕಾರಣದಿಂದ ಅಂದು ಕಾಯಿಲೆ ಬಂದವರು ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಹೋದರೆ ವೈದ್ಯರುಗಳ ಕೊರತೆಯಿಂದ ಸೋಮುವಾರದ ತನಕ ಕಾಯಬೇಕಾಗಿದೆ. ತುರ್ತು ಚಿಕಿತ್ಸೆಗಳಿಗಾಗಿ ಕಾಯಿಲೆಗಳಿಗೆ ರಜಾ ದಿನ ಎಂದು ಹೇಳುವುದಾದರೂ ಹೇಗೆ? ಇಂದು ರಜವಿದೆ ಕಾಯಿಲೆಗಳು ಕಾಡಬೇಡ ಎಂದು ದೇಹವನ್ನು ಕೇಳಿಕೊಳ್ಳಲು ಸಾಧ್ಯವಿಲ್ಲ. ಕೇಳಿಕೊಂಡರು ದೇಹ ಅದರಂತೆ ನಡೆದುಕೊಳ್ಳುವುದಿಲ್ಲ.
- ಕನ್ನಡ ಪರ ನೀತಿ ನಿರೂಪಣೆ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸುವ ನಿಟ್ಟಿನಲ್ಲಿ ಸಿದ್ಧತೆ
- ಕನ್ನಡ, ಕನ್ನಡಿಗರ ಪರ ದುಂಡುಮೇಜಿನ ಸಭೆ
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
ಸರ್ಕಾರಿ ಆಸ್ಪತ್ರೆಗಳಲ್ಲಿ ಭಾನುವಾರದ ದಿನ ಹೊರರೋಗಿಗಳ ತಪಾಸಣೆ ಮತ್ತು ತುರ್ತು ಚಿಕಿತ್ಸೆಗಳಿಗೆ ಅವಕಾಶವಿರುವುದಿಲ್ಲ. ಇದರಿಂದ ದಿನಗೂಲಿ ನೌಕರರಿಗೆ ಮತ್ತು ಇತರೆ ಶ್ರಮದ ಜೀವನ ನಡೆಸುವ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ವಾರದ ಮಧ್ಯದಲ್ಲಿ ಅವರುಗಳು ತಮ್ಮ ಕೆಲಸಗಳಿಗೆ ರಜಾ ಹಾಕಿ ಇಲ್ಲವೇ ಕೆಲಸವನ್ನ ಮಾಡದೆ ಆಸ್ಪತ್ರೆಗಳಿಗೆ ಬಂದು ತಪಾಸಣೆ ಅಥವಾ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಅಂದು ದುಡಿದು ಅಂದು ಹೊಟ್ಟೆಯನ್ನ ತುಂಬಿಸಿಕೊಳ್ಳಬೇಕಾದಂತಹ ಶ್ರಮ ಜೀವಿಗಳಿಗೆ ಒಂದು ದಿನದ ರಜವು ಸಹ ಸಾಧ್ಯವಾಗುವುದಿಲ್ಲ. ಕಾರಣ ಕೂಲಿಯ ಚಿಂತೆಯಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಭಾನುವಾರದ ದಿನಗಳಲ್ಲಿ ಹೊರರೋಗಿಗಳ ತಪಾಸಣೆ ಮತ್ತು ಚಿಕಿತ್ಸೆಗೆ ಅನುವು ಮಾಡಿಕೊಟ್ಟರೆ ಲಕ್ಷಾಂತರ ದುಡಿಯುವ ಮಂದಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಮಾನ್ಯ ಆರೋಗ್ಯ ಸಚಿವರು ಚಿಂತಿಸಿ ಬೇಕಾದಂತಹ ಯೋಜನೆಯನ್ನು ರೂಪಿಸಿಕೊಟ್ಟರೆ ದುಡಿಯುವ. ಶ್ರಮದ. ಮಂದಿಗೆ ಅನುಕೂಲವಾಗುತ್ತದೆ. ಬಡವರ ಬಗ್ಗೆ ಕಾಳಜಿ ಉಳ್ಳಂತಹ. ಮಾನ್ಯ ಆರೋಗ್ಯ ಸಚಿವರು ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿ ಅಗತ್ಯವಾದಂತಹ ಕ್ರಮವನ್ನ ಕೈಗೊಂಡರೆ ಇದೊಂದು ಒಳ್ಳೆಯ ಯೋಜನೆ ಆಗುತ್ತದೆ.
– ಕೆ ಎಸ್ ನಾಗರಾಜ್, ಬೆಂಗಳೂರು



