ಯಡಿಯೂರು ವಾರ್ಡ್ ನಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಕಂಚಿನ ಪುತ್ಥಳಿ ಲೋಕಾರ್ಪಣೆ ಮಾಡಿದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್
ಬೆಂಗಳೂರು: ಯಡಿಯೂರು ವಾರ್ಡ್, ಸೌತ್ ಎಂಡ್ ವೃತ್ತದಲ್ಲಿ ಯಡಿಯೂರು ನಾಗರಿಕರ ವೇದಿಕೆ ವತಿಯಿಂದ ಮೇರುನಟ ಡಾ.ರಾಜ್ ಕುಮಾರ್ ಮತ್ತು ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ರವರ ಕಂಚಿನ ಪುತ್ಥಳಿಯ ಪಕ್ಕದಲ್ಲಿ ಕರ್ನಾಟಕ ರತ್ನ , ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ರವರ ಕಂಚಿನ ಪುತ್ಥಳಿಯ ಅನಾವರಣ ಕಾರ್ಯಕ್ರಮ ನಡೆಯಿತು.
ಅಶ್ವಿನಿ ಪುನೀತ್ ರಾಜ್ ಕುಮಾರ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರವರು, ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ಎನ್.ಆರ್.ರಮೇಶ್, ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಹೆಚ್.ಬಸವರಾಜ್ ಪುತ್ಥಳಿಯನ್ನು ಅನಾವರಣ ಮಾಡಿದರು.
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
- ದಶಕ ಮೀರಿದ ಕಾನೂನು ಹಾದಿ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
ಆರ್.ಅಶೋಕ್ ಮಾತನಾಡಿ, ದೇಶದ ಪ್ರತಿಭಾವಂತ ನಟ ಎಂದು ಖ್ಯಾತಿ ಗಳಿಸಿರುವ ಪುನೀತ್ ರಾಜ್ ಕುಮಾರ್ ರವರ ಪುತ್ಥಳಿಯನ್ನು ಪಾರ್ವತಮ್ಮ ರಾಜ್ ಕುಮಾರ್ ರಸ್ತೆಯಲ್ಲಿ ಸ್ಥಾಪಿಸಲಾಗಿದೆ ಎಂದರು.
ಪುನೀತ್ ರಾಜ್ ಕುಮಾರ್ ಅಗಲಿ ಮೂರು ವರ್ಷವಾಯಿತು. ಆದರು ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಪುನೀತ್ ರಾಜ್ ಕುಮಾರ್ ರವರ ಅಂತ್ಯಸಂಸ್ಕಾರದಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದರು. ಕಲೆ ಮತ್ತು ಮಾನವೀಯತೆ ಮೂಲಕ ಜನರ ಪ್ರೀತಿ ಗಳಿಸಿದ ಮೆಚ್ಚಿನ ಹೃದಯವಂತ ನಾಯಕ ಪುನೀತ್ ರಾಜ್ ಕುಮಾರ್ ರವರು. ಸರಳತೆ, ವಿನಯದ ಮೂಲಕ ಜನರ ಹೃದಯಗೆದ್ದರು. ನಾನು ಸಹ ರಾಜ್ ಕುಮಾರ್ ರವರ ಅಭಿಮಾನಿ ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದರು.
ಎನ್.ಆರ್.ರಮೇಶ್ ಮಾತನಾಡಿ, ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ರವರು ಯುವ ಸಮೂಹಕ್ಕೆ ಸ್ಪೂರ್ತಿಯಾಗಿದ್ದಾರೆ. ಯಡಿಯೂರು ವಾರ್ಡ್ ನಲ್ಲಿ ಕಂಚಿನ ಪುತ್ಥಳಿ ಸ್ಥಳದಲ್ಲಿ ಕಂಠೀರವ ಸ್ಟೂಡಿಯೋದಲ್ಲಿ ಪುಣ್ಯಭೂಮಿಯಿಂದ ಮಣ್ಣನ್ನು ತಂದ ಪುನೀತ್ ರಾಜ್ ಕುಮಾರ್ ಪುತ್ಥಳಿ ಜಾಗ ನಿರ್ಮಿಸಲಾಗಿದೆ ಎಂದರು.
ಯಡಿಯೂರು ವಾರ್ಡ್ ಇಡಿ ಏಷಿಯದ ಅಭಿವೃದ್ದಿಯಾದ ನಂಬರ್ 1 ವಾರ್ಡ್ ಎಂದು ಕೀರ್ತಿಗಳಿಸಿದೆ. ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ರವರ ಕಂಚಿನ ಪುತ್ಥಳಿ ಒಂದೇ ಜಾಗದಲ್ಲಿ ನಿರ್ಮಾಣವಾಗಿರುವುದು ರಾಜ್ಯದಲ್ಲಿಯೆ ಪ್ರಥಮ ಜಾಗ ಯಡಿಯೂರು ವಾರ್ಡ್. ಪುನೀತ್ ರಾಜ್ ಕುಮಾರ್ ರವರ ಆದರ್ಶ ಗುಣಗಳು, ಸರಳತೆ ಪ್ರತಿಯೊಬ್ಬರು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.



