ಮಂಗಳೂರು: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ರಾಜ್ಯ ವ್ಯಾಪಿ ಹೋರಾಟದ ಭಾಗವಾಗಿ ಕಟ್ಟಡ ಕಾರ್ಮಿಕರ ಅಖಿಲ ಭಾರತ ಮತ್ತು ರಾಜ್ಯಮಟ್ಟದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಕಟ್ಟಡ ಕಾರ್ಮಿಕರಿಗೆ ಎರಡು ತಿಂಗಳಿನಿಂದ ಬಿಡುಗಡೆಯಾಗದ ಮಾಸಿಕ ಪಿಂಚಣಿ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು, 2022 ರಿಂದ ಬಾಕಿ ಉಳಿಸಿಕೊಂಡಿರುವ ಶೈಕ್ಷಣಿಕ ಧನ ಸಹಾಯವನ್ನು ಹೈಕೋರ್ಟ್ ಆದೇಶದಂತೆ ಕೂಡಲೇ ನೀಡಬೇಕು, ನೊಂದಣಿ ನವೀಕರಣ ಸಮಸ್ಯೆಗಳನ್ನು ಇತ್ಯಾರ್ಥ ಪಡಿಸಲು ಕಲ್ಯಾಣ ಮಂಡಳಿ ಹಾಗೂ ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.
ದೇಶದಲ್ಲಿ ಅತ್ಯಂತ ವೇಗವಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಯೋಜನೆಗಳು ನಡೆಯುತ್ತಿದ್ದರೂ ಅಲ್ಲಿ ಕೆಲಸ ಮಾಡುವ ಲಕ್ಷಾಂತರ ಜನ ಕಾರ್ಮಿಕರು ಅತ್ಯಂತ ಅಪಾಯ ಸನ್ನಿವೇಶದಲ್ಲಿ ಸುರಕ್ಷತೆ ಇಲ್ಲದಂತಹ ವಾತಾವರಣದಲ್ಲಿ ಬದುಕು ಸಾಗಿಸುತ್ತಿದ್ದಾರೆ ವಲಸೆ ಕಾರ್ಮಿಕರ ಬದುಕು ಅಸಹನೀಯವಾಗಿದೆ. ಲಕ್ಷಾಂತರ ಮಹಿಳೆಯರು ನಿರ್ಮಾಣ ವಲಯದಲ್ಲಿದ್ದು ದುಡಿಮೆ ಮಾಡುತ್ತಿದ್ದರೂ ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಸಮಾನ ಕೆಲಸಕ್ಕೆ ಸಮಾನ ಕೂಲಿ ನೀಡಬೇಕೆಂದಿದ್ದರೂ ಮಹಿಳೆಯರನ್ನು ವಂಚಿಸಲಾಗುತ್ತಿದೆ ಲೈಂಗಿಕ ಶೋಷಣೆಯು ಸದ್ದಿಲ್ಲದೆ ನಡೆಯುತ್ತಲೇ ಇದೆ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಹಿಂದಿನ ಬಿಜೆಪಿ ಸರ್ಕಾರ ಹಾಗೂ ಇಂದಿನ ಸಮ್ಮಿಶ್ರ ಸರಕಾರ 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ಮಾಡಿದೆ . ಇದರಿಂದ 1996ರಲ್ಲಿ ಜಾರಿಗೊಳಿಸಲಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ ಹಾಗೂ ಸಸ್ ಕಾಯ್ದೆಗಳೆರಡೂ ಸಂಹಿತೆಯೊಳಗಡೆ ಸೇರಿ ಕಾರ್ಮಿಕರನ್ನು ಸೌಲಭ್ಯಗಳಿಂದ ಮತ್ತು ಕಾನೂನುಗಳಿಂದ ವಂಚಿತರನ್ನಾಗಿಸುತ್ತಿದೆ ಎಂದರು.
ಕಟ್ಟಡ ನಿರ್ಮಾಣ ವಲಯ ಕಾರ್ಮಿಕರ ಬದುಕು ಹಾಗೂ ಅವರು ಹಾಲಿ ಇರುವ ಎರಡು ಕಾನೂನಿನ ಅಡಿಯಲ್ಲಿ ರಚಿಸಲಾದ ಕಲ್ಯಾಣ ಮಂಡಳಿಗಳು ಹಾಗೂ ಅವುಗಳ ದೊರಕುತ್ತಿದ್ದ ಕಲ್ಯಾಣ ಸೌಲಭ್ಯಗಳನ್ನು ಸಂರಕ್ಷಿಸಿಕೊಳ್ಳಲು ನಿರ್ಮಾಣ ವಲಯದ ಕಾರ್ಮಿಕರು ದೇಶದಾದ್ಯಂತ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ ಒಂದರಿಂದ 15ರ ವರೆಗೆ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕರು ವಾಸಿಸುವ ಪ್ರದೇಶಗಳಲ್ಲಿ ಪ್ರಚಾರಾಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಬೇಡಿಕೆಗಳಿಗೆ ಸರ್ಕಾರ ಈ ಕೂಡಲೇ ಗಮನಹರಿಸಬೇಕು, ಇಲ್ಲವಾದಲ್ಲಿ ರಾಜ್ಯದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.
ಕಟ್ಟಡ ಕಾರ್ಮಿಕರ ಜಿಲ್ಲಾ ಮುಖಂಡರಾದ ರವಿಚಂದ್ರ ಕೊಂಚಾಡಿ,ಯು ಜಯಂತ್ ನಾಯಕ್, ಚಂದ್ರಹಾಸ ಪಿಲಾರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ದಿನೇಶ್ ಜಪ್ಪಿನಮೊಗರು, ಪಾಂಡುರಂಗ ಕೊಂಚಾಡಿ ,ಜನಾರ್ಧನ ಕುತ್ತಾರು, ವಸಂತಿ ಕುಪ್ಪೆ ಪದವು, ಯಶೋಧ ಮಳಲಿ, ಜಯಶೀಲ ವಾಮಂಜೂರು ವಹಿಸಿದ್ದರು ಪ್ರತಿಭಟನೆಯಲ್ಲಿ ರಾಮಚಂದ್ರಪಜೀರು, ರೋಹಿದಾಸ್ ಭಟ್ನಗರ , ಇಬ್ರಾಹಿಂ ಮದಕ, ಪ್ರವೀಣ್ ವಾಮಜೂರು, ಅಶೋಕ್ ಶ್ರೀಯಾನ್, ಅಶೋಕ್ ಸಾಲಿಯಾನ್ ಉಮೇಶ್ ಶಕ್ತಿನಗರ, ಶಶಿಧರ ಶಕ್ತಿನಗರ, ಮೋಹನ್ ಜಲ್ಲಿಗುಡ್ಡೆ , ರಿಚರ್ಡ್ ಕ್ರಾಸ್ತ, ಸುಧಾಕರ್ ಆಳ್ವಾ ತೊಕ್ಕೊಟ್ಟು ಮುಂತಾದವರು ಹಾಜರಿದ್ದರು.




