ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಪ್ರದರ್ಶನ ಕಲಾವಿಭಾಗ ಹಾಗೂ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಬೇಜಾರು ಅಕಾಡೆಮಿ ಅಧ್ಯಕ್ಷ ಡಾ. ಎಂ.ಆರ್. ಗೋವಿಂದ ಸ್ವಾಮಿ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಪ್ರದರ್ಶನ ಕಲಾ ವಿಭಾಗದಲ್ಲಿ ವಿದ್ಯಾರ್ಥಿಯಾಗಿದ್ದು, ಇಂದು ಬಂಜಾರ ಅಕಾಡೆಮಿಯ ಅಧ್ಯಕ್ಷರಾಗಿ ನಿಲ್ಲುವುದಕ್ಕೆ ಕಾರಣ ನನ್ನ ಪ್ರತಿಭೆ ಹಾಗೂ ಬಂಜಾರ ಸಮುದಾಯ ಸಂಸ್ಕೃತಿ, ಅದರಲ್ಲಿನ ಆಸಕ್ತಿ ವಿದ್ಯಾರ್ಥಿ ದೆಸೆಯಿಂದಲೇ ಮೂಡಿದ್ದು ಕಾರಣ ಎಂದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಜೊತೆಗೆ ಈಗಿನ ಸರ್ಕಾರ ನನ್ನ ಪ್ರತಿಭೆಯನ್ನು ಗುರುತಿಸಿರುವುದಕ್ಕೆ ಆಭಾರಿಯಾಗಿದ್ದೇನೆ. ಬಂಜಾರ ಸಮುದಾಯವನ್ನು ಅದರ ಸಂಸ್ಕೃತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಂದೆ ತರುವುದು, ಅಕ್ಷರ ಜ್ಞಾನಪಸರಿಸುವುದು, ಪ್ರಸ್ತುತ ಹಕ್ಕುಗಳನ್ನು ಅರಿವಾಗಿಸುವುದು ನನ್ನ ಮುಂದಿನ ಕಾರ್ಯ ಎಂದರು.
ಈಗಾಗಲೇ ಅಕಾಡೆಮಿಯಿಂದ ಪ್ರಥಮವಾಗಿ 12 ಕಾರ್ಯಕ್ರಮಗಳನ್ನು ಮಾಡಿ ಇತರರಿಗೆ ಸ್ಪೂರ್ತಿ ಆಗಿರುವುದನ್ನು ನೆನಪು ಮಾಡಿಕೊಂಡರು.
ವಿಚಾರ ಸಂಕೀರ್ಣವನ್ನು ಡಾ. ಹಿ ಜಿ ಬೋರಲಿಂಗಯ್ಯ ಅಧ್ಯಕ್ಷರು ಜಾನಪದ ಪರಿಷತ್ತು ಡಾಕ್ಟರ್ ಲಲಿತಾ ಶ್ರೀನಿವಾಸನ್, ನೂಪುರ ಸಂಸ್ಥೆಯ ನಿರ್ದೇಶಕರು, ಡಾಕ್ಟರ್ ಚಿತ್ತಯ್ಯ ಪೂಜಾರ್, ಪ್ರಾಧ್ಯಾಪಕರು ಕನ್ನಡ ಅಧ್ಯಯನ ಸಂಸ್ಥೆ, ಡಾ. ಸಿ ಬಸವಲಿಂಗಯ್ಯ ರಂಗನಿರ್ದೇಶಕರು ಡಾ. ಕೆ ರಾಮಕೃಷ್ಣಯ್ಯ ಮುಖ್ಯಸ್ಥರು ಪ್ರದರ್ಶನ ಕಲಾವಿಭಾಗ ಇವರೆಲ್ಲರಿಂದ ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ವಿಚಾರ ಸಂಕಿರಣದ ಪ್ರಮುಖ ವಿಷಯ ಮಂಡಕರಾಗಿ ಮಕರ ಬಂಜಾರ ಸಮುದಾಯದ ಕಲೆ ಸಂಸ್ಕೃತಿ ಹಾಗೂ ನಾಟಕದ ವಿಷಯವಾಗಿ ತಮ್ಮದೇ ಆದ ವಿಚಾರವನ್ನು ಸಮಕಾಲಿನ ಸಂದರ್ಭಕ್ಕೆ ಪೂರಕವಾಗಿ ಐತಿಹಾಸಿಕ ಸಾಮಾಜಿಕ ಹಾಗೂ ರಾಜಕೀಯ ಹಿನ್ನೆಲೆಯಲ್ಲಿ ವಿವಿಧ ಆಯಾಮಗಳಲ್ಲಿ ಬಹಳ ಗಂಭೀರವಾದಂತಹ ಪ್ರಶ್ನೆಗಳನ್ನು ಎತ್ತಿ ಹಿಡಿದು ವಸ್ತು ನಿಷ್ಠೆಯಿಂದ ವಿಷಯ ಮಂಡನೆಯನ್ನು ಬಸವಲಿಂಗಯ್ಯ ಮಂಡಿಸಿದರು.
ತದನಂತರ ಡಾ ಚಿತ್ತಯ್ಯ ಪೂಜಾರ್, ಸಮುದಾಯದ ಸಾಂಸ್ಕೃತಿಕ ಅನನ್ಯತೆಯನ್ನು ಕುರಿತು ಆ ಸಂಸ್ಕೃತಿಯಲ್ಲಿನ ಕಲೆಗಳನ್ನು ಮೌಖಿಕ ಸಾಹಿತ್ಯವನ್ನು ಹಾಗೂ ಭಾಷಾ ವೈವಿಧ್ಯತೆಯನ್ನು ಉಳಿಸಿ ಬೆಳೆಸುವ ಅಗತ್ಯತೆಯನ್ನು ಪ್ರತಿಪಾದಿಸಿದರು.
ವಿಚಾರ ಸಂಕಿರಣದ ಪ್ರಮುಖ ವಿಷಯವಾದ ಡಾ ಕೆ ವೆಂಕಟಲಕ್ಷ್ಮಿ ಅವರ ಜೀವನ ಮತ್ತು ಸಾಧನೆಗಳನ್ನು ಮೈಸೂರು ನಿತ್ಯ ಶೈಲಿಯ ಪ್ರಾಯೋಗಿಕತೆಯನ್ನು ಕುರಿತು ಮೈಸೂರು ಮಹಾರಾಜರು ಆಸ್ಥಾನದಲ್ಲಿ ನೀಡಿದಂತಹ, ಬಂಜಾರ ಸಮುದಾಯದ ಪ್ರತಿಭೆಯನ್ನು ಮೈಸೂರು ಶೈಲಿಯ ನೃತ್ಯದ ಪ್ರವರ್ಧಕರಾಗಿ ಸ್ಥಾಪಿಸಿದ್ದನ್ನು ನೆನಪು ಮಾಡಿಕೊಂಡು ಮಾತನಾಡಿದರು. ಜಟ್ಟಿತಾಯಮ್ಮನವರ ಗುರುಗಳ ಕೈಯಲ್ಲಿ ಬೆಳಗಿದ ಪ್ರತಿಭೆ ಅವರ ಶಿಷ್ಯೆ ನಾನಾಗಿದ್ದು ನನ್ನ ಹೆಮ್ಮೆ ಎಂದು ಅವರೊಡನೆ ಕಳೆದ ನೃತ್ಯದವರ ನಾಟಕ ದಿನಗಳನ್ನು ನೆನಪಿಸಿಕೊಂಡು ಅದರ ವೈಶಿಷ್ಟ್ಯತೆಗಳನ್ನು ಒಳಹೋರಗನ್ನು ವೆಂಕಟಲಕ್ಷ್ಮನವರ ಸ್ವಭಾವ ವ್ಯಕ್ತಿತ್ವ ಅವರ ನೃತ್ಯ ಶೈಲಿಯ ಆಕರ್ಷಣೆ ರಸಭಾವಗಳ ಪ್ರತಿಪಾದನೆ ಕಣ್ಣಿನ ಚಿಲುಕು ಚಲನೆಗಳು ಮುಂತಾದವುಗಳ ಬಗ್ಗೆ ವಿವರವಾಗಿ ವಿಷಯವನ್ನು ಮಂಡಿಸಿದರು.
ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವಹಿಸಿದ ಡಾ ಹಿ ಜಿ ಬೋರಲಿಂಗಯ್ಯ, ಎಲ್ಲರ ವಿಷಯ ಮಂಡನೆಯನ್ನು ಶ್ಲಾಘಿಸಿ ಅತ್ಯುತ್ತಮ ವಿಚಾರ ಸಂಕಿರಣ ಎಂದು, ಹೆಣ್ಣು ಮಕ್ಕಳಿಂದ ಬಂಜಾರ ಸಮುದಾಯದಲ್ಲಿನ ಸಂಸ್ಕೃತಿ , ವೈಯಕ್ತಿಕ ಸ್ವಾತಂತ್ರ್ಯ ಮತ್ತು ಅವರ ಬದುಕಿನ ಚಿತ್ರಣವನ್ನು ತಮ್ಮದೇ ಆದ ಶೈಲಿಯಲ್ಲಿ ಎಲ್ಲರಿಗೂ ಮನದಟ್ಟು ಮಾಡಿದರು.
ಪ್ರದರ್ಶನ ಕನಾರಿ ಭಾಗದ ಮುಖ್ಯಸ್ಥರಾದ ಡಾ. ಕೆ ರಾಮಕೃಷ್ಣಯ್ಯ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಡಾ. ಶಿವಣ್ಣ ಸಹಾಯಕ ಪ್ರಾಧ್ಯಾಪಕರು ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಹಿರಿಯ ಪ್ರಾಧ್ಯಾಪಕಿ ಡಾ. ಹಂಸಿನಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಶಿವಮೊಗ್ಗದ ಶಶಿಕಲಾಭಾಯಿ ಮತ್ತು ತಂಡದವರಿಂದ ಬಂಜಾರ ನೃತ್ಯದ ಪ್ರಾತ್ಯಕ್ಷಿಕೆ ನೆರೆದಿರುವ ಪ್ರೇಕ್ಷಕರ ವಿದ್ಯಾರ್ಥಿಗಳ ಹಾಗೂ ಪ್ರಾಧ್ಯಾಪಕರ ಮನಸೂರೆಗೊಂಡಿತು.




