ಬೆಂಗಳೂರು: ಬಂಜಾರ ಕಸೂತಿ ಕಲೆ ಸ್ವಾಭಿಮಾನ, ಶ್ರಮ ಮತ್ತು ಸ್ವಾವಲಂಬನೆಯ ಆರ್ಥಿಕತೆಯಾಗಲಿ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್ ಗೋವಿಂದಸ್ವಾಮಿ ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸರ್ಕಾರಿ ಕಲಾ ಕಾಲೇಜು, ಬೆಂಗಳೂರು ಇವರ ಸಹಯೋಗದಲ್ಲಿ 200ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಬಂಜಾರ ವಿದ್ಯಾರ್ಥಿಗಳು ಮತ್ತು ಇತರೆ ವಿದ್ಯಾರ್ಥಿಗಳಿಗೆ 20 ದಿನಗಳ ಬಂಜಾರ ಕಸೂತಿ ಕಲಿಕಾ ಕಾರ್ಯಗಾರವನ್ನು ಬಂಜಾರ ಸಂಸ್ಕೃತಿ ಮತ್ತು ಉದ್ಘಾಟಿಸಿ ಮಾತನಾಡಿದರು.
ಬಂಜಾರರಲ್ಲಿಕಸೂತಿ ಹಾಗೂ ಸೂಜಿದಾರದ ಬಗ್ಗೆ ಒಗಟುಗಳು ಕಸೂತಿಯ ಮಹತ್ವಕ್ಕೆಕನ್ನಡಿಯಾಗಿವೆ.
1. ಝಟ್ ಫಟ್ ಫರೇಂಗಣಿರಎಕ್ಕೆಜ್ ಆಂಕಿ
(ಝಟ್ ಫಟ್ ಹೆಣ್ಣಿಗೆಒಂದೇಕಣ್ಣು)-ಸೂಜಿ
2. ನಾನಾಕೀಸ ನಾಯಕಣತಾಂಗಡಿರ ಮಾಲಕಣ(ಗಿಡ್ಡ ಪೋರಿಯ ಮದುಮಗಳ ಪೆಟ್ಟಿಗೆ)-ಒಡವೆ
3. ಅವಡಿಕಛೋರಿರ ಏಕ ಹಾತ್ಚೋಟಿ(ಇಟ್ಟೆ ಹುಡುಗಿಗೆ ಮೊಳ ಉದ್ದಜುಟ್ಟ) -ಸೂಜಿದಾರವಾಗಿದೆ.

ದೇಶದ ಸಂಸ್ಕೃತಿಯನ್ನು ವಿದೇಶಗಳಿಗೆ ತೋರಿಸಲುತಾಜ್ ಮಹಲ್ ಬಿಟ್ಟರೆ ಬಂಜಾರ ವಸ್ತ್ರ ಸಂಹಿತೆಯಾಗಿ ಕಸೂತಿಯುಳ್ಳ ಬಟ್ಟೆತೊಟ್ಟ ಬಂಜಾರ ಮಹಿಳೆಯರನ್ನು ರಿಸುತ್ತಾರೆ. ಅಷ್ಟು ದೊಡ್ಡ ಕೌಶಲ್ಯ ಎಲ್ಲರ ಕಣ್ಣಿಗೆ ಆಕರ್ಷಿಸುವ ಶ್ರೇಷ್ಠ ಸಂಸ್ಕೃತಿ ಬಂಜಾರದ್ದಾಗಿದೆ ಎಂದರು.
ಹಲವು ಶತಮಾನಗಳಿಂದ ಈ ಶ್ರೇಷ್ಠ ಬುಡಕಟ್ಟು ಸಂಸ್ಕೃತಿಯನ್ನು ಜಗತ್ತಿಗೆ ಸಮುದಾಯದ ಗೌರವವಾಗಿ, ಶ್ರಮದ ಫಲವಾಗಿ, ವಿಶ್ವದ ಸಾಂಸ್ಕೃತಿಕ ವಲಯದಲ್ಲಿ ಗುರುತಿಸುವ ಶ್ರಮ ಸಂಸ್ಕೃತಿ ಕಲೆಯಾಗಿ ಬೆಳೆಸಿರುವ ಶ್ರೇಯಸ್ಸು ಬಂಜಾರರದ್ದು. ಇಂತಹ ವಿಶ್ವಶ್ರೇಷ್ಠ ಕಸೂತಿ ಕಲೆಯನ್ನು ಬೇವರಿನ, ಶ್ರಮಿಕರ ಕಲೆ ಬಗ್ಗೆ ಇನ್ನಷ್ಟುಅಧ್ಯಯನವಾಗಬೇಕು. ಇದನ್ನು ಯುವಜನತೆಗೆ ದಾಟಿಸಬೇಕು ಎಂಬ ಉದ್ದೇಶದಿಂದ ಬಂಜಾರ ಅಕಾಡೆಮಿ ಇಂದು ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ ನಡೆಸುತ್ತಿದೆ ಎಂದರು.
ಇಂದಿನ ಸ್ಥಿತಿಯಲ್ಲಿ ಎಲ್ಲರಿಗೂ ಸರಕಾರಿ ಉದ್ಯೋಗ ಸಾಧ್ಯವಿಲ್ಲ. ಗಾಂಧಿಜೀಯವರು ಹೇಳಿದಂತೆ, ಇಂದಿನ ತಾಂತ್ರಿಕಯುಗದಲ್ಲಿ ಕೈ ಕಸೂರಿ ಕಲೆ ಬಡವರಿಗೆ ಜೀವನೋಪಾಯದ ಆರ್ಥಿಕ ಸಬಲತೆಯ ಸರಕಾಗಿ ಕೂಡ ಮನ್ನಣೆ ಇದೆ. ಆದರೆ ಶ್ರಮದ ಅರಿವು ಇರಬೇಕು ಎಂದರು.
ನಾಟಕ, ಸಿನಿಮಾ ಪ್ರದರ್ಶನ ಕಲೆಗಳಲ್ಲಿ ಕಸೂತಿ ಬಳಕೆ ಇದೆ. ಹಲವು ಸಾರ್ವಜನಿಕ ಸಂಸ್ಥೆಗಳು ಬಂಜಾರಕ ಸೂತಿಯನ್ನು ಪೇಟೆಂಟ್ ಮಾಡಿಕೊಂಡು ಬಂಜಾರ ಕಲಾವಿದರನ್ನೂ ಕೂಲಿ ಕಾರ್ಮಿಕರಾಗಿಸಲಾಗಿದೆ. ಶ್ರಮಿಕರಿಗೆ ಶ್ರಮದ ಫಲಸಿಗುವ ನಿಟ್ಟಿನಲ್ಲಿಅಕಾಡೆಮಿ ಶ್ರಮಿಸಲಿದೆ ಎಂದರು.
ಬಂಜಾರ (ಲಂಬಾಣಿ)ರಲ್ಲಿ ಹತ್ತು ಹಲವು ವಿಷಯಗಳಲ್ಲಿ ವಿಚಾರ ಸಂಕಿರಣ, ಕಾರ್ಯಾಗಾರ, ಸಂವಾದಗಳನ್ನು ನಡೆಸಲಾಗುತ್ತಿದೆ. ಹಬ್ಬ-ಹರಿದಿನಗಳಲ್ಲಿ, ಪೂಜಾವಿಧಿಗಳಲ್ಲಿ, ಆಚಾರ-ವಿಚಾರ, ನ್ಯಾಯ ಪಂಚಾಯತಿ, ಕಥೆ, ಗೀತೆ, ನೃತ್ಯ, ಹಾಡು, ಲಾವಣಿ, ಗಾಯನ, ಒಗಟು-ನುಡಿಗಟ್ಟು, ಜನನಶಾಸ್ತ್ರ, ತೀಜ್, ದಸರಾ, ಸಿತ್ಲಾ (ಬೇಟೆ) ಹೋಳಿ, ಪವಾಡ, ರಂಗೋಲಿ, ಹಚ್ಚೆ, ಕೋಲಾಟ, ಕಸೂತಿ ಕಲೆ ಹೀಗೆ ನಾನಾ ವಿಧದಲ್ಲಿ ಬಂಜಾರರ ಸಂಸ್ಕೃತಿ ಅನಾವರಣವಾಗುತ್ತದೆ. ಇವುಗಳನ್ನು ಶೈಕ್ಷಣಿಕವಾಗಿ ದಾಖಲಿಸುವ, ಪ್ರದರ್ಶಿಸುವ ಜವಾಬ್ದಾರಿ ಅಕಾಡೆಮಿ ಮೇಲಿದೆ ಎಂದರು.
ಇಂತಹ ಅಕಾಡೆಮಿಗೆ ಪ್ರೋತ್ಸಾಹ ನೀಡುತ್ತಿರುವ ಸಿದ್ದರಾಮಯ್ಯ ಅವರ ಸರ್ಕಾರ ಸಮುದಾಯ ಪರವಾಗಿ ಕೆಲಸ ಮಾಡುತ್ತಿರುವುದಕ್ಕೆ ಅಭಾರಿಯಾಗಿದ್ದೇನೆ. ಒಟ್ಟಾರೆ ಬಂಜಾರ ಕಸೂತಿಯನ್ನುಅಕಾಡೆಮಿಯು ಸ್ವಾವಲಂಬನೆ ಹಾಗೂ ಸ್ವಾಭಿಮಾನದ ಆರ್ಥಿಕತೆಯಾಗಿ ಬೆಳೆಸಲಿದೆ ಎಂದರು.
ಕಸೂತಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಾನಪದ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಟಿ.ಎಂ ಭಾಸ್ಕರ, ಬಂಜಾರ ವಸ್ತ್ರವು ವೈವಿಧ್ಯಮಯವಾದ ಶ್ರಮ ಸಂಸ್ಕೃತಿಯ ಕೌಶಲವಾಗಿದೆ. ಒಂದು ಸಂವೇದನೆಯಾಗಿದೆ. ಇಲ್ಲಿನ ವಿಭಿನ್ನ ಹೊಲಿಗೆ, ಬಣ್ಣ, ಕವಡೆ, ಕಾಸುಳ್ಳ ಕಸೂತಿ ಮತ್ತು ಆಭರಣಗಳು ಈ ಸ್ಪರ್ಧಾತ್ಮಯುಗದಲ್ಲಿ ಫ್ಯಾಷನ್ ಟೆಕ್ನಾಲಜಿಯಲ್ಲೂ ಮುಂದೆ ಇದೆ ಎಂದರು.
ಈ ಬಂಜಾರಕಸೂತಿ ವಸ್ತ್ರವು ಸಾರ್ವಜನಿಕಉಡುಗೆಯಾಗಿ ಬೆಳೆಯಲು ಜಾಗತಿಕ ಮಟ್ಟದಲ್ಲಿ ಬೆಳೆಯಲು ಸಮುದಾಯಕ್ಕೆಗೌರವ ಸ್ಥಾನ ತಂದುಕೊಡಲು ಬಂಜಾರ ಅಕಾಡೆಮಿಯ ಅಧ್ಯಕ್ಷರರಾದ ಹಲವು ವಿಷಯಗಳಲ್ಲಿ ತಜ್ಞರಾಗಿರುವ ಡಾ.ಗೋವಿಂದಸ್ವಾಮಿ ನೇತೃತ್ವದಲ್ಲಿಅಕಾಡೆಮಿ ಕೆಲಸ ಮಾಡುತ್ತಿರುವುದನ್ನು ಶ್ಲಾಘಿಸುತ್ತೇನೆ ಎಂದರು.
ಅಕಾಡೆಮಿ ಮೊನ್ನೆ ಬಂಜಾರರ ಸಂಸ್ಕೃತಿ ಬದುಕು ಕುರಿತು ವಿಚಾರ ಸಂಕಿರಣ ನಮ್ಮ ವಿಶ್ವ ವಿದ್ಯಾಲಯದಲ್ಲಿ ನಡೆಸಿತು. ನಮ್ಮ ಜನಪದ ವಿಶ್ವವಿದ್ಯಾಲಯ ಅಕಾಡೆಮಿ ಅಧ್ಯಕ್ಷರ ಜೊತೆ ಮಾತನಾಡಿ ಬಂಜಾರ ಡಿಪ್ಲೋಮ, ಬಂಜಾರರ ಕೃತಿಗಳನ್ನು ಹೊರತರಲು ಯೋಜನೆ ರೂಪಿಸಲಾಗಿದೆ. ಒಟ್ಟಾರೆ ಬಂಜಾರ ಕಸೂತಿ ಬಡ ಬಂಜಾರರಲ್ಲಿ ಹಾಗೂ ಇತರರಲ್ಲಿ ಸ್ವಾವಲಂಬನೆ ತರಲಿದೆ ಮತ್ತು ಈ ಉತ್ತಮ ಕಸೂತಿ ವಸ್ತ್ರ ಕಡಿಮೆ ಬೆಲೆಗೆ ಎಲ್ಲರಿಗೂ ಸಿಗುವಂತಾಗಲಿ ಎಂದರು.
ರಂಗಕರ್ಮಿ ಎನ್.ಮಂಗಳ ಮಾತನಾಡಿ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬಂಜಾರರ ಸಂಸ್ಕೃತಿಯ ಪ್ರತೀಕವಾದ ಕಸೂತಿ ಬಗ್ಗೆ ಯುವಕರಿಗಾಗಿ ಕಾರ್ಯಗಾರಕ್ಕೆ ನಾಂದಿ ಹಾಕಿರುವುದು ಉತ್ತಮ ಬೆಳವಣಿಗೆ. ವಿಶ್ವದ ಕ್ಯಾನ್ವಾಸ್ನಲ್ಲಿ ಬಂಜಾರ ಕಸೂತಿ ಒಂದು ಕಲೆಯಾಗಿ ಮಂಚೂಣಿಯಲ್ಲಿದೆ. ಎಷ್ಟೇ ಗುಂಪು ಇರಲಿ, ಇಬ್ಬರು ಬಂಜಾರ ವಸ್ತ್ರ ತೊಟ್ಟ ಮಹಿಳೆ ಬಂದರೆ ಎಲ್ಲರಿಗೂ ಆಕರ್ಷಣೆಯಾಗಿ ಕಾಣುತ್ತಾರೆ ಎಂದರು.
ಎಲ್ಲಾ ವಲಯದವರು ಬಂಜಾರ ವಸ್ತ್ರದ ಮಹಿಳೆ ನಮ್ಮ ಜೊತೆ ಇರಲಿ ಎಂದು ಬಯಸುವುದು ಸಹಜ. ಆದರೆ ಇವರು ಪ್ರದರ್ಶನದ ಹಾಗೂ ಮಾರಾಟದ ಸರಕಲ್ಲ, ಇದರ ಹಿಂದೆ ಶ್ರಮ, ನೋವು, ನಲಿವು, ಸಂಸ್ಕೃತಿ ಎಲ್ಲಾಇದೆ. ಇದನ್ನು ತಿಳಿಯಬೇಕು. ವಿಶ್ವದಲ್ಲಿ ಜಿಪ್ಸಿ ಬಂಜಾರ, ರೋಮಾನಿಯಾ, ಕ್ಯಾರವಾನ್ದೇಶದ ಎಲ್ಲ ರಾಜ್ಯಗಳಲ್ಲೂ ಇದ್ದಾರೆ ಎಂದು ಗುರುತಿಸಿಕೊಳ್ಳುತ್ತಾರೆ. ವಸ್ತ್ರದ ಕೋಡ್ಒಂದೇಯಾಗಿದೆ. ಬಂಜಾರ ವಸ್ತ್ರ ಪ್ರದರ್ಶನ ಕಲೆಗಳಲ್ಲಿ ಅತೀ ಮುಖ್ಯಕಾರಣ, ಬಣ್ಣದ ಸಂಕೇತವಾಗಿ ನಾಡಿನ, ದೇಶದ ಸಂಕೇತವಾಗಿ ಬಂಜಾರರುಕಾಣುತ್ತಾರೆ ಎಂದರು.
ನಾಗರೀಕ ಪ್ರಪಂಚ ಇವರನ್ನು ಗೂಗಲ್ನಲ್ಲಿ, ಅಮೇಜಾನ್ ನಲ್ಲಿಇತರ ಕಡೆ ಸಂಶೋಧನೆ ಮಾಡದೆ, ಇವರ ಶ್ರಮ, ನೋವು ಅರಿಯದೆ ಸುಳ್ಳು ದಾಖಲಿಸಿ ಪ್ರಚಾರ ಪಡೆಯುವುದುಂಟು. ಬಂಜಾರರ ಬದುಕು, ಸಂಸ್ಕೃತಿ ಬರೀ ಮಾರಾಟದ ಸರಕಾಗಬಾರದು. ಇವರನ್ನುಎಲ್ಲರೂ ಅರ್ಥ ಮಾಡಿಕೊಳ್ಳಲಿ. ಇವರ ನೋವು ಅರಿಯಲಿ. ಇವರ ಕಸೂತಿ ಕಲೆ ಮುಖ್ಯವಾಹಿನಿಗೆ ಬರಲಿ. ಒಳ್ಳೆಯ ಮನಸ್ಸಿನಿಂದ ಆರ್ಥಿಕತೆಯ ಹೊರತಾಗಿ ಒಂದು ಸಮುದಾಯ ಶ್ರಮ ಸಂಸ್ಕೃತಿಯ ಪ್ರತೀಕವಾಗಿ ಕಸೂತಿ ಕಲೆಯನ್ನುಕಲಿಯಬೇಕು. ಶ್ರಮ, ಸಮಯ ಬೇಡುವ ಈ ಕಲೆಗೆ ಬೆಲೆ ಸಿಗಬೇಕು ಎಂದರು.
ಉದ್ಘಾಟನಾ ಸಮಾರಂಭದಲ್ಲಿಕಾಲೇಜಿನ ಪ್ರಾಂಶುಪಾಲ ಡಾ.ಪಿ.ಟಿ ಶ್ರೀನಿವಾಸ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಪ್ರಶಾಂತ್ ಹೆಬ್ಬಸೂರು, ಶ್ರೀಮತಿ ಬಾಯಿ, ಕನ್ನಡ ಸಂಘದ ಸಂಚಾಲಕ ಡಾ.ರುದ್ರೇಶ್ ಅದರಂಗಿ, ಬಂಜಾರ ಅಕಾಡೆಮಿಯ ಸದಸ್ಯರು, ಜಾನಪದ ವಿಶ್ವ ವಿದ್ಯಾಲಯದ ಸಂಶೋಧನಾ ವಿಭಾಗದ ಮಲ್ಲಿಕಾರ್ಜುನ ಮಾನ್ಪಡೆ ಮುಂತಾದವರು ಹಾಜರಿದ್ದರು.




