ನಾವು ಕಥೆಯನ್ನೋ ಅಥವಾ ಕಾದಂಬರಿಯನ್ನೋ ಯಾಕೆ ಓದಬೇಕು? ಎಂದು ಕೇಳಿಕೊಂಡರೆ ತಕ್ಷಣ ಬರುವ ಉತ್ತರ – ʻಅದು ನಮ್ಮ ಜೀವನದ ಅನುಭವವನ್ನು ಬೇರೆ ರೀತಿಯಾಗಿ ನೋಡುವುದಕ್ಕೆ ಅನುವು ಮಾಡಿಕೊಡುತ್ತದೆʼ ಎಂಬುದು ಅಲ್ಲವೇ?
- ಬರ ಘೋಷಣೆಗಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಲಿ: ಡಾ. ಜಿ. ಪರಮೇಶ್ವರ್
- ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!
- ಈ ದೇಶ ಕಟ್ಟಿದ್ದೇ ದಲಿತರು, ನೀಲಿ ಶಾಲು ಬಗ್ಗೆ ಮಾತಾಡೋಕೆ ನೀನ್ಯಾವನೋ?
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
ಆದರೆ ಮೌನೇಶ್ ಈ ಕಾದಂಬರಿಯಲ್ಲಿ ನಮ್ಮ ಜೀವನದ ಅನುಭವದಿಂದ ಕಟ್ಟಿಕೊಂಡ ಪ್ರಪಂಚಕ್ಕಿಂತ ಮಿಗಿಲಾದ, ಹೊಸದಾದ ಹಾಗೂ ರೋಚಕವಾದ ಒಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ. ಪ್ರಸ್ತುತ ಕಾಲದ ಬದಲಾದ ಓದುಗರ ಓದಿನ ಲಯ (tempo) ಹಾಗೂ ರೂಪಕ ಸೂಕ್ಷ್ಮತೆಯನ್ನು (visual sensibility) ಬಹಳ ಸಶಕ್ತವಾಗಿ ಹಿಡಿದಿರುವ ಮೌನೇಶ್ ಈ ಕಾದಂಬರಿಯನ್ನು ನಾವು ಓದುವುದಕ್ಕಿಂತ ಸ್ವತಃ ನೋಡುವಂತೆ ಪ್ರೇರೇಪಿಸುತ್ತಾರೆ!
ನಾವು ಊಹಿಸಲಿಕ್ಕೆ ಸಾಧ್ಯವೇ ಆಗದ ಸ್ಥಿತಿ-ಗತಿಗಳಲ್ಲಿ ಈ ಕಾದಂಬರಿಯ ಮುಖ್ಯ ಪಾತ್ರಗಳು ಏನೆಲ್ಲಾ ರೂಪವನ್ನು ತಾಳುತ್ತವೆ, ಕಾಲ ಹಾಗೂ ಅವಕಾಶದ ಹೊಡೆತಕ್ಕೆ ಸಿಲುಕಿ ಏನೇನೆಲ್ಲಾ ಅನುಭವಿಸುತ್ತವೆ ಎಂಬುದನ್ನು ನಾವು ಓದುತ್ತ ಹೋಗುವಾಗ ನಮಗೆ ಒಂದು ಬಗೆಯ ವಿಸ್ಮಯದ ಭಾವ ಆವರಿಸಿಕೊಂಡುಬಿಡುತ್ತದೆ.

ಈ ಕಾದಂಬರಿ ಏಕಕಾಲಕ್ಕೆ ನಮ್ಮ ಈ ನಿಜಜೀವನದ logic ಅನ್ನು ಮತ್ತು ಅದು ಸೃಷ್ಟಿಸಿರುವ Fictional Narrative ಲೋಕದ logic ಅನ್ನು ಒಟ್ಟೊಟ್ಟಿಗೆ ನೋಡುವ ಒಂದು ಹೊಸ ಅವಕಾಶವನ್ನು ಮಾಡಿಕೊಡುತ್ತದೆ ಮತ್ತು ಆ ಮೂಲಕ ಒಂದು ಹೊಸದಾದ ಹಾಗೂ ಬಹಳ ಘನವಾದ Magic ಲೋಕವನ್ನೇ ಅದು ನಮ್ಮ ಕಣ್ಣೆದುರಿಗೆ ತಂದು ನಿಲ್ಲಿಸಿಬಿಡುತ್ತದೆ!
-ಡಾ. ಉಪೇಂದ್ರ ಕೆ ಆರ್




