ಮೆಡಿಮಿಕ್ಸ್ ನ ಸೋಪೇರ – ಕಾಫಿ ಟೇಬಲ್ ಪುಸ್ತಕದ ಅನಾವರಣ

2 years ago

ವಿಶ್ವದ ಅತಿ ಹೆಚ್ಚು ಮಾರಾಟವಾಗುವ ಆಯುರ್ವೇದ ಸೋಪ್

ಬೆಂಗಳೂರು ಜುಲೈ, 19, 2024: ಆಯುರ್ವೇದ ಮತ್ತು ಸಂಗೀತದ ಚಿಕಿತ್ಸಕ ಶಕ್ತಿಯನ್ನು ಒಟ್ಟುಗೂಡಿಸುವ ಮೂಲಕ, ಮೆಡಿಮಿಕ್ಸ್ ಕುಟುಂಬವು ಸೋಪೇರಾವನ್ನು ಅನಾವರಣಗೊಳಿಸಿದೆ. ಇದು ಭಾರತದ ಪ್ರತಿಷ್ಠಿತ ಆಯುರ್ವೇದ ವೈಯಕ್ತಿಕ ಆರೈಕೆ ಬ್ರಾಂಡ್ – ಮೆಡಿಮಿಕ್ಸ್ ನ 55 ವರ್ಷಗಳ ಪ್ರಯಾಣವನ್ನು ಪರಿಚಯಿಸುವ ಕಾಫಿ ಟೇಬಲ್ ಪುಸ್ತಕವಾಗಿದ್ದು, ನಗರದಲ್ಲಿ ನಡೆದ  ಖಾಸಗಿ ಕಾರ್ಯಕ್ರಮವೊಂದರಲ್ಲಿ ಎವಿಎ ಚೋಳ್ಳಲ್ ಹೆಲ್ತ್ಕೇರ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ – ಡಾ.ಎ.ವಿ.ಅನೂಪ್ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ಪ್ರದೀಪ್ ಚೋಳಾಯಿಲ್ ಅವರು ಇದರ ಮೊದಲ ಪ್ರತಿಯನ್ನು ಇಸೈಜ್ಞಾನಿ ಮಾಸ್ಟ್ರೋ ಇಳಯರಾಜ ಅವರಿಗೆ ನೀಡಿದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎವಿಎ ಚೋಳಾಯಿಲ್, ಹೆಲ್ತ್ಕೇರ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಎ. ವಿ. ಅನೂಪ್ ಅವರು  ‘ಮೆಡಿಮಿಕ್ಸ್ ನ ಪ್ರಯಾಣವನ್ನು ಪ್ರಾರಂಭಿಸಿದ ಡಾ. ವಿ.ಪಿ. ಸಿಧನ್ ಅವರಲ್ಲಿದ್ದ ದೂರದೃಷ್ಟಿಯನ್ನು ಸುಂದರವಾಗಿ ಚಿತ್ರಿಸಿರುವ ಸೋಪೇರಾವನ್ನು ಬಿಡುಗಡೆ ಮಾಡಲು ಖುಶಿಯಾಗುತ್ತಿದೆ ಎಂದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಅನೂಪ್ , “ಮೆಡಿಮಿಕ್ಸ್ ಒಂದು ಸಣ್ಣ ಗೃಹತಯಾರಿಕೆಯಾಗಿ, ಸ್ವದೇಶಿ ಉತ್ಪನ್ನದ ರೂಪದಲ್ಲಿ ಪ್ರಾರಂಭವಾಗಿ ಈ ದಿನ ಒಂದು ಯಶಸ್ವಿ, ಜಾಗತಿಕ ಬ್ರಾಂಡ್ ಆಗಿ ರೂಪುಗೊಂಡಿದೆ. ಈ ಸುದೀರ್ಘ ಪಯಣದ ಬಗ್ಗೆ ಮತ್ತು ಡಾ. ವಿ.ಪಿ. ಸಿದ್ದನ್ ಮತ್ತು ಅವರ ಪತ್ನಿ ಶ್ರೀಮತಿ ಸೌಭಾಗ್ಯಂ ಅವರ ಬಗ್ಗೆ ಈ ಪುಸ್ತಕವು ವಿವರಿಸುತ್ತದೆ ಎಂದರು.

ನಮ್ಮ ವಿತರಕರು,  ಮಾರಾಟಗಾರರು ಮತ್ತು ಉದ್ಯೋಗಿಗಳ ನಿರಂತರ ಬೆಂಬಲವಿಲ್ಲದಿದ್ದರೆ, ಈ ಸಾಧನೆ ಖಂಡಿತ ಸಾಧ್ಯವಾಗುತ್ತಿರಲಿಲ್ಲ. ಈ ಪುಸ್ತಕದಲ್ಲಿ ಉದಯೋನ್ಮುಖ ಉದ್ಯಮಿಗಳಿಗೆ ನೆರವಾಗುವ ಹಲವಾರು ಉಪಯುಕ್ತ ವಿಷಯಗಳಿವೆ.  ನಮ್ಮ ಬೆಂಬಲಕ್ಕೆ ನಿಂತ ಎಲ್ಲರಿಗೂ ನಮ್ಮ ಕೃತಜ್ಞತೆಯನ್ನು  ಸಲ್ಲಿಸಲು ನಾವು ಬಯಸುತ್ತೇವೆ ಎಂದು ಹೇಳಿದರು.

ಕಾಫಿ ಟೇಬಲ್ ಪುಸ್ತಕ – ಸೋಪೆರಾ:  ಇದು  ಮೆಡಿಮಿಕ್ಸ್ – ನ ಪ್ರಾರಂಭ, ಅದರ ಬೆಳವಣಿಗೆ ಮತ್ತು ಹಲವಾರು ತಲೆಮಾರುಗಳ, ಲಕ್ಷಾಂತರ ಜನರ ಜೀವನದ ಮೇಲೆ ಅದು ಬೀರಿದ ಆಳವಾದ ಪ್ರಭಾವವನ್ನು ಮತ್ತು ಅದು ಪುರಾತನ ವಿಜ್ಞಾನವಾದ ಆಯುರ್ವೇದವನ್ನು  ಆಧುನಿಕತೆಯೊಂದಿಗೆ ಬೆಸೆದಿರುವುದನ್ನು ವಿವರಿಸುತ್ತದೆ.

ಪ್ರಾರಂಭಿಕ ವರ್ಷಗಳಲ್ಲಿ ಆಯುರ್ವೇದದ ಚಿಕಿತ್ಸಕ ಶಕ್ತಿಯ ಮೂಲಕ ರೈಲ್ವೆ ಉದ್ಯೋಗಿಗಳ ಚರ್ಮದ ದದ್ದುಗಳನ್ನು ಗುಣಪಡಿಸುವ ಸಲುವಾಗಿ ಮೆಡಿಮಿಕ್ಸ್ -ಅನ್ನು ರೂಪಿಸಲಾಯಿತು ಎಂದರು.

ಆಯುರ್ವೇದ ತತ್ವಗಳ ಬಗ್ಗೆ ಡಾ. ವಿ.ಪಿ. ಸಿಧನ್  ಅವರು ಆಳವಾದ ಸಮರ್ಪಣೆಯ ಭಾವನೆಯನ್ನು ಹೊಂದಿದ್ದರು. ಮೆಡಿಮಿಕ್ಸ್ ಅನ್ನು ಲೆಕ್ಕವಿಲ್ಲದಷ್ಟು ಮನೆಗಳಿಗೆ ತಲುಪಿಸುವಲ್ಲಿ ಶ್ರೀಮತಿ ಸೌಬಾಗ್ಯಂ ಅವರು ವಹಿಸಿದ ಶ್ರಮ ಕೂಡ ಉಲ್ಲೇಖನೀಯ ಎಂದರು.

ಎವಿಎ ಸಮೂಹದಲ್ಲಿ ನಾವು ಪರಿಸರ- ಪ್ರಜ್ಞೆಯ ಉತ್ಪಾದನೆಗೆ ಆದ್ಯತೆ ನೀಡುತ್ತೇವೆ. ಉತ್ಕೃಷ್ಟವಾದ ಕಚ್ಚಾ ಸಾಮಗ್ರಿಗಳು, ಉತ್ತಮ ಪ್ಯಾಕೇಜಿಂಗ್ ಮತ್ತು ಸುಧಾರಿತ ಯಂತ್ರೋಪಕರಣಗಳೊಂದಿಗೆ ಉತ್ಪಾದನಾ ಪ್ರಕ್ರಿಯೆಗಳನ್ನು ನಾವು ಅಭಿವೃದ್ಧಿಪಡಿಸಿದ್ದೇವೆ ಎಂದು ಹೇಳಿದರು.

ನಮ್ಮ ಆಂತರಿಕ ಅರ್ ಅಂಡ್ ಡಿ ವಿಭಾಗವು ಭಾರತ ಸರ್ಕಾರದ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯಿಂದ ಮಾನ್ಯತೆ ಪಡೆದಿದೆ. ಇದು ನಮ್ಮ ಎಲ್ಲಾ ಉತ್ಪನ್ನಗಳಲ್ಲಿ ಕಠಿಣವಾದ ಗುಣಮಟ್ಟದ ನಿಯಂತ್ರಣವನ್ನು ಖಚಿತಪಡಿಸುತ್ತದೆ  ಹಾಗೂ ಮಾರುಕಟ್ಟೆಯಲ್ಲಿ ನಮ್ಮ ಉತ್ಪನ್ನದ ಬಗ್ಗೆ ನಂಬಿಕೆ ವಿಶ್ವಾಸಾರ್ಹತೆಯನ್ನು ಉಂಟುಮಾಡುತ್ತದೆ ಎಂದರು.

Leave a Reply