ಮಂಡ್ಯ: ಪ್ರತಿವರ್ಷ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನೆನೆದು ಮುಂದಿನ ತಲೆಮಾರಿಗೆ ದಾಟಿಸಬೇಕೆಂಬ ಹಂಬಲದಿಂದ ಕರ್ನಾಟಕ ಸಂಘ ಸಾರ್ವಜನಿಕರ ಹಾಗೂ ಅನೇಕ ಸಂಘ ಸಂಸ್ಥೆಗಳ ನೆರವಿನೊಂದಿಗೆ 2024ನೇ ಪ್ರಸಕ್ತ ವರ್ಷದಿಂದ ‘ಕೃಷ್ಣರಾಜ ಒಡೆಯರ್’ ಅವರ ಹೆಸರಿನಲ್ಲಿ ಒಂದು ಲಕ್ಷ ರೂಗಳ ಪ್ರಶಸ್ತಿಯನ್ನು ಸ್ಥಾಪಿಸಿ, ಓರ್ವ ಸಾಧಕರಿಗೆ ಪ್ರಧಾನ ಮಾಡುತ್ತಿರುವುದು ಸಂತಸ ತಂದಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಕರ್ನಾಟಕ ಸಂಘದ ವತಿಯಿಂದ ಮಂಡ್ಯದ ರೈತ ಸಭಾಂಗಣದಲ್ಲಿ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಅವರು, ಡಾ. ಹಂಸಲೇಖ ಸ್ಯಾಂಡಲ್ ವುಡ್ ಸಂಗೀತ ಮಾಂತ್ರಿಕ ದೇಸಿದೊರೆ, ನಾದಬ್ರಹ್ಮ ಹಂಸಲೇಖ ಅವರು ನೂರಾರು ಸಿನಿಮಾಗಳಿಗೆ ಸಾಹಿತ್ಯ ರಚನೆ ಹಾಗೂ ಸಂಗೀತ ನಿರ್ದೇಶನ ಮಾಡಿದ್ದಾರೆ ಎಂದರು.
ಸಾಹಿತ್ಯ ಹಾಗೂ ಸಂಗೀತ ನಿರ್ದೇಶನದ ಜೊತೆಗೆ ಕಥೆ ಚಿತ್ರಕಥೆ ಬರಹಗಾರರಾಗಿ, ಸಂಭಾಷಣೆಕಾರರಾಗಿಯು ಹಂಸಲೇಖ ಗುರುತಿಸಿಕೊಂಡಿದ್ದಾರೆ. ನೂರಾರು ಪ್ರತಿಭೆಗಳನ್ನು ಸಂಗೀತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ತಮ್ಮ ಬಾಳ ಸಂಗಾತಿಯೊಂದಿಗೆ ಸಂಗೀತ ಕಲಿಯಲು ಬರುವವರನ್ನು ಆತುಕೊಂಡು ಮತ್ತು ಆಧರಿಸಿ ಹಾಗೂ ಸಲಹಿ ಕಲಾವಿದರಿಗೆ ನೆರಳಾಗಿದ್ದಾರೆ. ಡಾ. ಹಂಸಲೇಖ ಸಮಾಜಮುಖಿ ವ್ಯಕ್ತಿತ್ವದವರು ಇಂತವರಿಗೆ ಪ್ರಶಸ್ತಿ ನೀಡುತ್ತಿರುವುದು ಹರ್ಷದ ಸಂಗತಿ ಎಂದರು.
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ ದೃಶ್ಯ ಸಂಗೀತ ಕಾವ್ಯ ರಚಿಸಿ ಲೋಕಾರ್ಪಣೆ ಮಾಡಿದ್ದಾರೆ. ಭಾರತದ ಸಂವಿಧಾನ ಕುರಿತು ಗೀತರಚನೆ ಮಾಡಿ ಸಂವಿಧಾನದ ಪೀಠಿಕೆಯು ಜನರ ಗೀತೆಯಾಗಿ ಎಲ್ಲರ ಹೃದಯದಲ್ಲಿ ಗುನುಗುವಂತೆ ಮಾಡಿ ಸಂವಿಧಾನದ ಘನತೆಯನ್ನು ನೂರ್ಮಮಡಿಗೊಳಿಸಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸಂಘದಲ್ಲಿ ಸ್ಥಾಪಿಸಲಾಗಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ಒಂದು ಲಕ್ಷ ರೂ ನಗದು ಹಾಗೂ ಪ್ರಶಸ್ತಿ ಫಲಕದೊಡನೆ ಪ್ರಥಮ ಬಾರಿಗೆ ಶ್ರೀಯುತರಿಗೆ ನೀಡಿ ಗೌರವಿಸಲಾಯಿತು. ಈ ರೀತಿಯ ಸಮಾಜಮುಖಿ ಕಾರ್ಯಕ್ರಮಗಳು ಇನ್ನು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ನಡೆಯಲಿ ಎಂದು ಆಶಿಸಿದರು.




