ಬೆಂಗಳೂರು: ಎನ್ ಟಿ ಟಿ ಡೇಟಾ ಸಂಸ್ಥೆ, ಅಕ್ಷಯ ಪಾತ್ರ ಫೌಂಡೇಷನ್ ಸಹಯೋಗದೊಂದಿಗೆ 4.73 ಕೋಟಿ ರು.ಅಂದಾಜು ವೆಚ್ಚದಲ್ಲಿ ಇಲ್ಲಿನ ಲಕ್ಷ್ಮೀಪುರದಲ್ಲಿ ನಿರ್ಮಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಎನ್ ಟಿಟಿ ಡೇಟಾ ಸಂಸ್ಥೆಯ ಡಿಜಿಟಲ್ ಅಧಿಕಾರಿ ದಿಲೀಪ್ ಕುಮಾರ್, ಅಕ್ಷಯ ಪಾತ್ರ ಫೌಂಡೇಷನ್ ನ ಸಿಇಒ ಶ್ರೀಧರ್ ವೆಂಕಟ್, ಶಾಸಕ ಎಸ್. ಮುನಿರಾಜು, ಮಾಜಿ ಕ್ರಿಕೆಟಿಗ ವಿಜಯ್ ಭಾರಧ್ವಜ್ ಲೋಕಾರ್ಪಣೆ ಮಾಡಿದರು.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಕಾರ್ಯಕ್ರಮ ಉದ್ದೇಶಿಸಿ ಎನ್ ಟಿ ಟಿ ಡೇಟಾ ಇಂಕ್ ಸಂಸ್ಥೆಯ ಮುಖ್ಯ ಡಿಜಿಟಲ್ ಅಧಿಕಾರಿ ದಿಲೀಪ್ ಕುಮಾರ್ ಮಾತನಾಡಿ, ‘ಶಿಕ್ಷಣವು ಅವಕಾಶಗಳ ಬಾಗಿಲು ತೆರೆಯುವ ಕೀಲಿಕೈ ಇದ್ದಂತೆ, ಅಕ್ಷಯ ಪಾತ್ರ ಫೌಂಡೇಷನ್ ಮತ್ತು ಎನ್ ಟಿ ಟಿ ಡೇಟಾ ಸಂಸ್ಥೆಗಳ ನಡುವಿನ ಈ ಸಹಯೋಗವು ಪ್ರತಿಯೊಂದು ಮಗುವಿಗೂ ಪರಿಸ್ಥಿತಿ ಗಳನ್ನು ಮೀರಿದ ಕನಸುಗಳನ್ನು ನನಸು ಮಾಡುವತ್ತ ಸಾಗುವ ಅವಕಾಶವಾಗಿದೆ. ಈ ಮೂಲಕ ಯುವಜನತೆಯ ಸಾಮರ್ಥ್ಯವನ್ನು ಬೆಳೆಸುವ ಮತ್ತು ಪೋಷಿಸುವ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ ಎಂದರು.
ಅಕ್ಷಯ ಪಾತ್ರ ಫೌಂಡೇಷನ್ ನ ಸಿಇಒ ಶ್ರೀಧರ್ ವೆಂಕಟ್ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳ ಕಲಿಕೆಯ ಸ್ಥಳವನ್ನು ಶ್ರೀಮಂತಗೊಳಿಸುವ ಮೂಲಕ ದೀರ್ಘ ಕಾಲದ ಸಾಮಾಜಿಕ ಪರಿಣಾಮ ಉಂಟು ಮಾಡುವುದು ನಮ್ಮ ಉದ್ದೇಶವಾಗಿದ್ದು, ಈ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ಇದಕ್ಕೆ ಸಹಕರಿಸಿ, ನಮ್ಮೊಂದಿಗೆ ಕೈಜೋಡಿಸಿರುವ ಎನ್ ಟಿ ಟಿ ಡೇಟಾ ಸಂಸ್ಥೆಯ ಕಾರ್ಯಕ್ಕೆ ಕೃತಜ್ಞರಾಗಿರುತ್ತೇವೆ ಎಂದರು.
ಶಾಸಕ ಎಸ್.ಮುನಿರಾಜು ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಇಂದಿಗೂ ಹಲವಾರು ಹಳ್ಳಿಗಾಡಿನ ಶಾಲೆಗಳು ಸುಸ್ಥಿತಿಯಲ್ಲಿವೆ. ಈ ಹಿಂದೆ ಲಕ್ಷ್ಮೀಪುರದ ಈ ಶಾಲೆ ಬಹಳ ಅವ್ಯವಸ್ಥೆಯ ಸ್ಥಿತಿಯಲ್ಲಿತ್ತು, ಇದನ್ನು ಮನಗಂಡು ಎನ್ ಟಿ ಟಿ ಡೇಟಾ ಮತ್ತು ಅಕ್ಷಯಪಾತ್ರ ಫೌಂಡೇಷನ್ ಸಂಸ್ಥೆಗಳು ಸಹಯೋಗ ವಹಿಸಿಕೊಂಡು ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಿಸಿ ಲೋಕಾರ್ಪಣೆ ಮಾಡುವ ಮೂಲಕ ಬಡಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಇನ್ಫ್ರಾಸ್ಟ್ರಕ್ಚರ್ ಸರ್ವೀಸಸ್ ನ ಹಿರಿಯ ಉಪಾಧ್ಯಕ್ಷ ಆದಿತ್ಯ ಅಫ್ಜಲ್ಪುರ್ ಕರ್, ಎನ್ ಟಿ ಟಿ ಡೇಟಾ ಸಂಸ್ಥೆಯ ಉಪಾಧ್ಯಕ್ಷ ರವಿ ಕಲಗಟಕಿ, ಪ್ರಸಾದ್, ಬಿಇಓ ರಾಮಮೂರ್ತಿ ಬಿ.ಆರ್. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶಾಲೆಯಲ್ಲಿರುವ ಸೌಲಭ್ಯಗಳು: ಶಾಲೆಯಲ್ಲಿ 241 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಒಟ್ಟು 902 ಚದರ ವಿಸ್ತೀರ್ಣದಲ್ಲಿ ಎನ್ ಟಿ ಟಿ ಡೇಟಾ ಸಂಸ್ಥೆಯ ಸಿಎಸ್ ಆರ್ ಅನುದಾನದಲ್ಲಿ 4.73 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡದಲ್ಲಿ 8 ತರಗತಿ ಕೊಠಡಿಗಳು, ಕಂಪ್ಯೂಟರ್ ಲ್ಯಾಬ್, ಲೈಬ್ರರಿ, ಮುಖ್ಯ ಶಿಕ್ಷಕ ಮತ್ತು ಸಹಶಿಕ್ಷಕರ ಕೊಠಡಿ, ಸಿಸಿ ಟಿವಿ, ಶೌಚಾಲಯ, ಧ್ವನಿವರ್ಧಕ ವ್ಯವಸ್ಥೆ ಹಾಗೂ ಆ್ಯಂಪಿ ಥಿಯೆಟರ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಮತ್ತು ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.




