ಧಾರವಾಡ: ರಾಜ್ಯ ಸರ್ಕಾರದ ಪ್ರತಿಷ್ಠಿತ ಯೋಜನೆಯಾದ ಯುವನಿಧಿಪ್ಲಸ್ ಅಡಿಯಲ್ಲಿ ಜಿಲ್ಲೆಯ ಪದವಿಧರ ಮಹಿಳೆಯರಿಗಾಗಿ 30 ದಿನಗಳ ಉಚಿತ ಬುಟಿಷಿಯನ್ ತರಬೇತಿಯನ್ನು ಕೋಮಲ್ ಬ್ಯುಟಿ ಅಕ್ಯಾಡೆಮಿ, ಧಾರವಾಡದಲ್ಲಿ ಜ್ಯೋತಿ ಬೆಳಗಿಸುವುದರ ಮುಖಾಂತರ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ಎಸ್. ಮಲ್ಲಿಕಾರ್ಜುನ ಅವರು ಉದ್ಘಾಟಿಸಿದರು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಕೌಶಲ್ಯ ತರಬೇತಿಯ ಸಂಪೂರ್ಣ ಲಾಭಪಡೆದು ಜಿಲ್ಲಾ ಕೈಗಾರಿಕಾ ಕೇಂದ್ರದ ಮುಖಾಂತರ ಪಿ.ಎಂ.ಇ.ಜಿ.ಪಿ. ಯೋಜನೆಯಡಿಯಲ್ಲಿ ಸಾಲಸೌಲಭ್ಯ ಹೊಂದಿ ತಮ್ಮ ಬ್ಯುಟಿಷಿಯನ್ ಉದ್ದಿಮೆಯನ್ನು ಬೆಳೆಸಲು ಎಲ್ಲ ರೀತಿಯ ಸಹಾಯ ನೀಡಲಾಗುವುದು ಎಂದರು.
ಜಿಲ್ಲೆಯ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ರವಿ ಎ. ಎನ್. ಮಾತನಾಡಿ, ರಾಷ್ಟ್ರ ಹಾಗೂ ಅಂತರಾಷ್ಟ್ರಿಯ ಮಟ್ಟದಲ್ಲಿ ಬ್ಯುಟಿಷಿಯನ್ ಕೌಶಲ್ಯಕ್ಕೆ ಇರುವ ಅವಕಾಶ ಬಗ್ಗೆ ಉದಾಹರಣೆಗಳೊಂದಿಗೆ ಅಭ್ಯರ್ಥಿಗಳಿಗೆ ಮನವರಿಕೆ ಮಾಡಿದರು.
ಕೋಮಲ್ ಬ್ಯುಟಿ ಅಕ್ಯಾಡೆಮಿ ಮಾಲೀಕ ರಂಜನಾ ಕೃಷ್ಣ ಪೇಟೆ ಅವರು ಪದವಿಧರರಿಗೆ ಬ್ಯುಟಿಷಿಯನ್ ತರಬೇತಿ ನೀಡುವ ಜವಾಬ್ದಾರಿ ಹೊಂದಿದ್ದು, ಶಿಬಿರಾರ್ಥಿಗಳಿಗೆ ಸ್ಕಿನ್ ಕೇರ್, ಹೇರ್ ಕೇರ್, ನೇಲ್ ಆರ್ಟ್ ಹಾಗೂ ಮೆಕಪ್ ವಿಷಯಗಳಲ್ಲಿ ಸುಧೀರ್ಘವಾಗಿ ಪ್ರಾಯೋಗಿಕ ತರಬೇತಿಯನ್ನು ವ್ಯವಸ್ಥಿತವಾಗಿ ನೀಡುವುದರ ಬಗ್ಗೆ ಶಿಭಿರಾರ್ಥಿಗಳಿಗೆ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಡಾಕ್‍ನ ಜಂಟಿ ನಿರ್ದೇಶಕ ಚಂದ್ರಶೇಖರ ಹೆಚ್. ಅಂಗಡಿ ಮಾತನಾಡಿ, ಒಂದು ತಿಂಗಳ ಅವಧಿಯಲ್ಲಿ ಯಶಸ್ವಿಯಾಗಿ ಬ್ಯುಟಿಷಿಯನ್ ತರಬೇತಿ ಹೊಂದಲು ಹಾಗೂ ಸರ್ಕಾರದ ಹಣಕಾಸು ಹಾಗೂ ಇತರೆ ಸೌವಲತ್ತುಗಳನ್ನು ಪಡೆಯಲು ಶಿಭಿರಾರ್ಥಿಗಳಿಗೆ ಬೆಂಬಲ ಸೇವೆ ನೀಡಲಾಗುವುದೆಂದು ತಿಳಿಸಿದರು.
ತರಬೇತಿಯಲ್ಲಿ ಜಿಲ್ಲೆಯ ಒಟ್ಟು 30 ಮಹಿಳಾ ಅಭ್ಯರ್ಥಿಗಳು ಭಾಗವಹಿಸಿದ್ದಾರೆ. ಸಿಡಾಕ್‍ನ ತರಬೇತಿದಾರರಾದ ರೋಹಿಣಿ ಘಂಟಿ ಕಾರ್ಯಕ್ರಮ ನಿರೂಪಿಸಿದರು.




