ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ
ಧಾರವಾಡ: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ ಅಡಿ 2024-25 ನೇ ಸಾಲಿನ ಹಿಂಗಾರು ಹಂಗಾಮಿಗೆ ಧಾರವಾಡ ಜಿಲ್ಲೆಯಲ್ಲಿ ಕೈಗೊಂಡಿರುವ ಬೆಳೆ ಕಟಾವು ಪ್ರಯೋಗದ ಸಮೀಕ್ಷೆ ಕಾರ್ಯದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಪಾಲ್ಗೊಂಡಿದ್ದರು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮ ಪಂಚಾಯತಿ ವಿಮಾ ಘಟಕದ ವ್ಯಾಪ್ತಿಯ ಬ್ಯಾಲಾಳ ಗ್ರಾಮದ ರೈತ ಶಿವರೆಡ್ಡಿ ಭೀಮರೆಡ್ಡಿ ಹೆಬ್ಬಾಳ ಇವರ ಸರ್ವೆ ನಂ: 138 ರ ಜಮೀನದಲ್ಲಿರುವ ಕಡಲೆ (ಮಳೆ ಆಶ್ರಿತ) ಬೆಳೆಯ ಬೆಳೆ ಕಟಾವು ಪ್ರಯೋಗದ ಸಮೀಕ್ಷೆ ಕಾರ್ಯದ ಮೇಲ್ವಿಚಾರಣೆಯನ್ನು ಜಿಲ್ಲಾಧಿಕಾರಿಗಳು ಮಾಡಿದರು.
ಗ್ರಾಮ ಪಂಚಾಯತ ಮಟ್ಟಕ್ಕೆ ಜೋಳ (ಮಳೆ ಆಶ್ರಿತ), ಕಡಲೆ (ಮಳೆ ಆಶ್ರಿತ) ಬೆಳೆಗಳ ಒಟ್ಟು 237 ಹಾಗೂ ಹೋಬಳಿ ಮಟ್ಟಕ್ಕೆ ಜೋಳ(ನೀ), ಮುಸುಕಿನಜೋಳ(ನೀ), ಗೋಧಿ(ಮಳೆ ಆಶ್ರಿತ), ಗೋಧಿ(ನೀ), ಕಡಲೆ(ಮಳೆ ಆಶ್ರಿತ), ಕಡಲೆ(ಮಳೆ ಆಶ್ರಿತ), ಕಡಲೆ(ನೀ), ಕುಸುಮೆ(ಮಳೆ ಆಶ್ರಿತ), ಹೆಸರು(ಮಳೆ ಆಶ್ರಿತ), ಹುರುಳಿ(ಮಳೆ ಆಶ್ರಿತ), ಸೂರ್ಯಕಾಂತಿ (ಮಳೆ ಆಶ್ರಿತ), ಸೂರ್ಯಕಾಂತಿ(ನೀ) ಬೆಳೆಗಳ ಒಟ್ಟು 65 ಸೇರಿದಂತೆ ಒಟ್ಟು 302 ವಿಮಾ ಘಟಕಗಳಿಗೆ ಮತ್ತು ಹತ್ತಿ (ಮಳೆ ಆಶ್ರಿತ), ಸೋಯಾಬಿನ್(ನೀ), ಸಾವೆ(ಮಳೆ ಆಶ್ರಿತ) ಬೆಳೆಗಳ 06 ಹೋಬಳಿಗಳನ್ನು ಸೇರಿದಂತೆ ಒಟ್ಟು 1658 ಬೆಳೆ ಕಟಾವು ಪ್ರಯೋಗಗಳ ಕಾರ್ಯಯೋಜನಾ ಪಟ್ಟಿಯನ್ನು ಅನುಮೋದಿಸಲಾಗಿದೆ. ಸದರಿ ಬೆಳೆ ಕಟಾವು ಪ್ರಯೋಗಗಳು ನಮೂನೆ-1 ಮತ್ತು ನಮೂನೆ-2 ರಲ್ಲಿ ಪ್ರಗತಿಯಲ್ಲಿವೆ.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಶೀಲ್ದಾರ ಸುಧೀರ ಸಾಹುಕಾರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ವೀರನಗೌಡ ಪಾಟೀಲ, ತಾಲೂಕಾ ಯೋಜನಾಧಿಕಾರಿಗಳು, ಸಹಾಯ ಸಾಂಖ್ಯಿಕ ಅಧಿಕಾರಿಗಳು, ಸಾಂಖ್ಯಿಕ ನಿರೀಕ್ಷಕರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮದ ರೈತರು ಹಾಗೂ ಎಐಸಿ ವಿಮಾ ಕಂಪನಿಯ ಜಿಲ್ಲಾ ಕೋ-ಆರ್ಡಿನೇಟರ್ ಹಾಜರಿದ್ದರು.




