ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿರುವ ಈ ಮಹಿಳೆ ಅಂತಿಂಥಾ ಮಹಿಳೆಯಲ್ಲ. ತನಗೆ ಸಿಎಂ ಸಿದ್ದರಾಮಯ್ಯ ಗೊತ್ತು, ಡಿಸಿಎಂ ಡಿ ಕೆ ಶಿವಕುಮಾರ್ ಆಪ್ತರು, ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅತ್ಯಂತ ಆಪ್ತರು ಎಂದು ಶ್ರೀಮಂತ ಮಹಿಳೆಯರನ್ನು ನಂಬಿಸಿ ಕೋಟಿ, ಕೋಟಿ ರೂಪಾಯಿ ವಂಚಿಸಿದ್ದಾರೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಕಿಟ್ಟಿ ಪಾರ್ಟಿಗಳ ಖಾಯಂ ಗಿರಾಕಿಯಾದ ಮಹಿಳೆಯ ಹೆಸರು ಸವಿತಾ. ತನಗೆ ಅನೇಕ ಪ್ರಭಾವಿಗಳ ಒಡನಾಟವಿದೆ ಎಂದು ಹೇಳುತ್ತಿದ್ದರು. ಅವರೊಂದಿಗೆ ತೆಗಿಸಿಕೊಂಡ ಫೊಟೋ ತೋರಿಸಿ ಶ್ರೀಮಂತ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ನಂತರ ತಾನೂ ಕಿಟ್ಟಿ ಪಾರ್ಟಿ ಆಯೋಜಿಸುವ ಮೂಲಕ ತನ್ನ ಸ್ನೇಹಿತೆಯರಿಗೆ ನಯವಾದ ಮಾತುಗಳಿಂದ ಹೂಡಿಕೆ ಮತ್ತು ಚಿನ್ನಾಭರಣದ ಆಸೆ ತೋರಿಸಿ ಕೋಟಿ ಕೋಟಿ ವಂಚನೆ ಮಾಡಿದ್ದಾರೆ.
ಈ ಕುರಿತಂತೆ ಸಲ್ಲಿಕೆಯಾದ ಹಲವು ದೂರುಗಳ ಹಿನ್ನೆಲೆಯಲ್ಲಿ ಈ ಮಹಿಳೆಯನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ಸುಮಾರು 20 ಮಹಿಳೆಯರಿಗೆ 30 ಕೋಟಿ ರೂ.ಗಿಂತಲೂ ಹೆಚ್ಚು ವಂಚನೆ ಮಾಡಿದ್ದ ಆರೋಪದಡಿ ಇವರನ್ನು ಬಂಧಿಸಲಾಗಿದೆ.
ಕಿಟ್ಟಿ ಪಾರ್ಟಿ ಹೆಸರಲ್ಲಿ ಶ್ರೀಮಂತ ಮಹಿಳೆಯರನ್ನು ಪರಿಚಯ ಮಾಡಿಕೊಂಡಿದ್ದ ಸವಿತಾ ತನಗೆ ಸಿಎಂ, ಡಿಸಿಎಂ, ಸಚಿವ ಎಂ ಬಿ ಪಾಟೀಲ್ ಪರಿಚಯವಿದ್ದಾರೆ ಎಂದು ನಂಬಿಕೆ ಹುಟ್ಟಿಸಿ ಅಧಿಕ ಲಾಭಾಂಶದ ನೆಪ ಮಾಡಿ ಹೂಡಿಕೆ ನೆಪದಲ್ಲಿ ಆರೋಪಿಯ ಹಣ ಪಡೆದುಕೊಳ್ಳುತ್ತಿದ್ದರು.
ಅಮೆರಿಕದಿಂದ ಕಡಿಮೆ ಬೆಲೆಗೆ ಚಿನ್ನ ತರಿಸಿಕೊಡುವುದಾಗಿ ವಂಚನೆ ಮಾಡಿದ್ದಾಳೆ. ಒಬ್ಬರಿಂದ ತಲಾ 50 ಲಕ್ಷದಿಂದ ಎರಡೂವರೆ ಕೋಟಿ ಹಣ ಪಡೆದು ವಾಪಸ್ ಹಣ ನೀಡದೇ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು.
ಈ ಹಿಂದೆ ಗೋವಿಂದರಾಜನಗರ ಠಾಣೆಯಲ್ಲಿ ಈಕೆ ವಿರುದ್ಧ ವಂಚನೆ ಕೇಸ್ ದಾಖಲಾಗಿ ಬಂಧನವಾಗಿದ್ದರು. ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದ ಸವಿತಾ ಮತ್ತದೇ ಚಾಳಿ ಮುಂದುವರೆಸಿ ಬಸವೇಶ್ವರನಗರ ಪೊಲೀಸರ ಅತಿಥಿಯಾಗಿದ್ದಾರೆ.




