ಅಂಧಭಕ್ತನ ಸ್ವಗತ –
ಏನ್ ಜನಾರ್ರಿ.. ನಮ್ಮೆಲ್ಲರ ಆರಾಧ್ಯದೈವ ಶ್ರೀರಾಮಚಂದ್ರನ ಭವ್ಯವಾದ ರಾಮಮಂದಿರದಲ್ಲಿ ಕೋಟ್ಯಾಂತರ ರೂಪಾಯಿ ಹುಂಡಿ ಹಣ ಹಾಗೂ ಚಿನ್ನದಾಭರಣಗಳು ಕಳುವಾಗಿದ್ದಾವಂತೆ. ಇದನ್ನೆಲ್ಲಾ ನಂಬೋಕೆ ಸಾಧ್ಯಾನಾ? ಶ್ರೀರಾಮಚಂದ್ರನ ಆದೇಶ ಇಲ್ಲದೇ ಜಗತ್ತಿನಲ್ಲಿ ಒಂದು ಹುಲ್ಲು ಕಡ್ಡಿಯೂ ಅಲ್ಲಾಡಲು ಸಾಧ್ಯವಿಲ್ಲಾ.. ಹೀಗಿರುವಾಗ ಆ ದೇವರ ದೇವಸ್ಥಾನದ ಹಣ ದೋಚಲಾಗಿದೆಯಾ? ಸಾಧ್ಯವೇ ಇಲ್ಲಾ..
- ಈ ದೇಶ ಕಟ್ಟಿದ್ದೇ ದಲಿತರು, ನೀಲಿ ಶಾಲು ಬಗ್ಗೆ ಮಾತಾಡೋಕೆ ನೀನ್ಯಾವನೋ?
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
ಅಸಲಿಗೆ ಆಗಿದ್ದೇನಪಾಂತಂದ್ರೆ..
ಆ ಪಾಪಿ ಪಾಕಿಸ್ಥಾನದವರು ಮಾರುವೇಷದಲ್ಲಿ ಬಂದು ಶ್ರೀರಾಮ ದೇಗುಲದಲ್ಲಿ ದರೋಡೆ ಮಾಡಲು ಬಲು ದೊಡ್ಡ ಸಂಚು ರೂಪಿಸಿದ್ರು. ಹಾಗೇನಾದ್ರೂ ಆ ಭಯೋತ್ಪಾದಕರು ದರೋಡೆ ಮಾಡುವಲ್ಲಿ ಯಶಸ್ವಿಯಾಗಿದ್ರೆ ಶ್ರೀರಾಮಚಂದ್ರನ ಹೆಸರಿಗೆ ಕಳಂಕ ಬರುತ್ತಿತ್ತು. ಅದಕ್ಕೆ ನಮ್ಮ ಆದರನೀಯ ಯೋಗಿ ಆದಿತ್ಯನಾಥರು ಒಂದು ಐಡಿಯಾ ಮಾಡಿದರು. ಅದೇನಪಾಂತಂದ್ರೆ ಹುಂಡಿ ಹಣ ಮತ್ತು ಚಿನ್ನವನ್ನು ಶ್ರೀರಾಮ ದೇವಸ್ಥಾನದಲ್ಲಿ ಕೆಲಸ ಮಾಡುವವರ ಮನೆಯಲ್ಲಿ ಜೋಪಾನವಾಗಿ ಇರಿಸಿದರು. ಹೀಗಾಗಿ ಪಾಕಿಸ್ತಾನಿ ಸಾಬಿಗಳ ಲೂಟಿ ಪ್ಲಾನ್ ಪ್ಲಾಪ್ ಆಯ್ತು. ಅಷ್ಟೇ.. ಇಷ್ಟಕ್ಕೆ ಅಯೋದ್ಯಯ ಶ್ರೀರಾಮ ದೇವಸ್ಥಾನದ ನೌಕರರು ಹುಂಡಿ ಹಣ ಲೂಟಿ ಮಾಡಿದ್ದಾರೆ ಎಂದು ವಿರೋಧ ಪಕ್ಷದವರು ಗುಲ್ಲೆಬ್ಬಿಸಿದ್ದಾರೆ.
ಇದೆಲ್ಲಾ ಬರೀ ರಾಜಕೀಯ. ಯೋಗಿಯವರ ಮೇಲೆ, ಮೋದಿಯವರ ಮೇಲೆ ಇಲ್ಲಸಲ್ಲದ ಆರೋಪಗಳನ್ನ ಹಿಂದೂ ಧರ್ಮದ್ರೋಹಿಗಳು ಮಾಡ್ತಿದ್ದಾರೆ. ಅದನ್ನೆಲ್ಲಾ ಆ ನಮ್ಮ ಶ್ರೀರಾಮ ದೇವರು ನೋಡಿಕೊಳ್ತಾನೆ ಬಿಡಿ. ಹೀಗಾಗಿ ಯಾರೂ ದೇಶದ್ರೋಹಿಗಳ ಮಾತನ್ನು ನಂಬಬಾರದು. ನಂಬಿದ್ದೇ ಆದರೆ ಅದು ಹಿಂದೂ ಹೃದಯ ಸಾಮ್ರಾಟ್ ಮೋದಿಯವರಿಗೆ ಮಾಡಿದ ಅಪಮಾನ. ದೇಶದ್ರೋಹಿಗಳ ಸುಳ್ಳು ಆರೋಪಗಳನ್ನು ಸಮಸ್ತ ಅಂಧಭಕ್ತರು ಖಂಡಿಸಬೇಕು.
ಜೈ ಶ್ರೀರಾಂ.
– ಶಶಿಕಾಂತ ಯಡಹಳ್ಳಿ




