ಮೋದಿಗೆ ಪಾಲೆಷ್ಟು? ಅಮಿತ್ ಶಾ ಪಾಲೆಷ್ಟು? ಕಟೀಲ್, ಸಂತೋಷರ ಪಾಲೆಷ್ಟು?: ಕೆಪಿಸಿಸಿ

3 years ago

#Howmuch #share #Modi #AmithShah #Kateel #BLSantosh #KPCC #bjpticketforsale

ಬೆಂಗಳೂರು: ದಿನದಿನವೂ ಹೊಸ ಹೊಸ ಬಿಜೆಪಿಯ ಟಿಕೆಟ್ ವಂಚನೆ ಪ್ರಕರಣಗಳು ಹೊರಬರುತ್ತಿವೆ, ಕಲೆಕ್ಷನ್ ಮಾಸ್ಟರ್ ಅಮಿತ್ ಶಾ ಅವರ ಅಣತಿಯಂತೆ ಬಿಜೆಪಿಯ ಕಲೆಕ್ಷನ್ ಏಜೆಂಟ್ ಗಳು ವ್ಯಾಪಕವಾಗಿ “ಟೋಪಿ ವ್ಯಾಪಾರ” ಮಾಡಿದ್ದಾರೆ! ಎಂದು ಕೆಪಿಸಿಸಿ ಆರೋಪಿಸಿದೆ.

ಬಿಜೆಪಿ ಟಿಕೆಟ್ ಹೆಸರಲ್ಲಿ ವಂಚನೆ ಪ್ರಕರಣದಲ್ಲಿ ಚೈತ್ರ ಕುಂದಾಪುರ ಮತ್ತು ಇತರರ ಬಂಧನ ಮತ್ತು ಎರಡು ದಿನಗಳ ಹಿಂದೆ ವರದಿಯಾಗಿರುವ 2.5 ಕೋಟಿ ವಸೂಲಿ ಪ್ರಕರಣ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಸೋಲಿನ ಮುನ್ಸೂಚನೆ ಸಿಕ್ಕಿದ್ದೇ ತಡ, ಅಮಾಯಕ ಆಕಾಂಕ್ಷಿಗಳಲ್ಲಿ BJP Karnataka ಆಮಿಷ ತೋರಿಸಿ ವಂಚನೆ ಮಾಡಿದೆ. ಈ ಎಲ್ಲಾ ವಂಚನೆಗಳು ಬಿಜೆಪಿ ಕಚೇರಿಯಿಂದಲೇ ನಿಯಂತ್ರಣವಾದಂತಿದೆ ಎಂದು ಆರೋಪಿಸಿದೆ.

ಬಿಜೆಪಿ ಅಧ್ಯಕ್ಷ Nalin Kumar Kateel ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಪಕ್ಷದ ಭಿನ್ನಮತಗಳನ್ನು ನಿಭಾಯಿಸುವ ಬದಲು ಟಿಕೆಟ್ ಹೆಸರಲ್ಲಿ ವಸೂಲಿಗೆ ಇಳಿದಿದ್ದಾರೆ. ತನಗೆ ಸಿಕ್ಕಿರುವ ಅಧ್ಯಕ್ಷ ಸ್ಥಾನವನ್ನು ತುಂಬಾ ಚೆನ್ನಾಗಿ “ಸದುಪಯೋಗ”ಪಡಿಸಿಕೊಳ್ಳುತ್ತಿದ್ದಾರೆ! ಎಂದಿದೆ.

ಸ್ವತಃ ಕಟೀಲ್ ಅವರೇ ಟಿಕೆಟ್ ವಂಚಕರನ್ನು ಮಿಕಗಳನ್ನು ಹಿಡಿಯಲು ಮುಂದೆ ಬಿಟ್ಟಿದ್ದಾರೆ, ವಂಚನೆಗೊಳಗಾದವರ ತಲೆಗೆ ಮಾತಿನ ಬೆಣ್ಣೆ ಸವರಿದ್ದಾರೆ. Dear BJP Karnataka 224 ಕ್ಷೇತ್ರಗಳಲ್ಲಿ ವಸೂಲಿಯಾದ ಮೊತ್ತವೆಷ್ಟು? ಮೋದಿಗೆ ಪಾಲೆಷ್ಟು? ಅಮಿತ್ ಶಾ ಪಾಲೆಷ್ಟು? ಕಟೀಲ್, ಸಂತೋಷರ ಪಾಲೆಷ್ಟು? ಎಂದು ಪ್ರಶ್ನಿಸಿದೆ.

Leave a Reply