ಅದ್ಯಾರೋ ಪ್ರವೀಣ್ ಮಾವಿನ ಕಾಡು ಎಂಬ ವ್ಯಕ್ತಿ, ಸುಮಾರು ಎಂಟು ಹತ್ತು ವರ್ಷಗಳ ಹಿಂದೆ ಬಿಡುಗಡೆಯಾದ ಒಂದು ಪುಸ್ತಕದ ಕುರಿತು ನಾನು ಮಾತನಾಡುವಾಗ ಅದರಲ್ಲಿ ಇರುವ ವೇಶ್ಯೆಯ ವಿಚಾರದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ, ಆ ಸಂದರ್ಭದಲ್ಲಿ ವೇಶ್ಯಾವಾಟಿಕೆ ಕಾನೂನು ಏಕೆ ಬದ್ಧವಾಗಬೇಕು ಎಂದು ಹೇಳಿದ್ದನ್ನು ಮತ್ತು ದೇವದಾಸಿ ಪದ್ಧತಿ ಹೇಗೆ ಹುಟ್ಟಿತು ಅದು ಹೇಗೆ ದುರ್ಬಳಕೆಯಾಯಿತು ಮತ್ತು ಈಗ ಪ್ರಸ್ತುತ ಸಮಾಜದಲ್ಲಿಯೂ ಕೂಡ ಪುರುಷ ಮತ್ತು ಮಹಿಳೆಯರ ವೇಶ್ಯಾವಾಟಿಕೆಗಳು ಈ ಕಾನೂನು ಬದ್ಧವಾಗಿ ಇರಬಹುದು ಎಂಬ ಚರ್ಚೆಯನ್ನು ವೇದಿಕೆಯ ಮೇಲೆ ಮಾಡಿದ್ದನ್ನು ಸುಮಾರು ಏಳೆಂಟು ವರ್ಷಗಳ ನಂತರ ಆಯ್ದ ಸುದ್ದಿಯ ತುಣುಕುಗಳನ್ನು ಹಾಕಿಕೊಂಡಿದ್ದರಂತೆ. ಅದು ಒಂದು ಪೇಪರ್ ಕಟ್ಟಿಂಗ್ ಅಷ್ಟೇ. ಅದನ್ನು ಯಾವುದೋ ವೆಬ್ ಸುದ್ದಿಯವರು ಮೂರು ಸಾಲನ್ನು ಹಿಡಿದು ಪೋಸ್ಟರ್ ಮಾಡಿ ಬಿಟ್ಟರಂತೆ. ನಮ್ಮಂತಹ ಲೇಖಕರನ್ನು ಗುರಿಯಾಗಿಸಿ ಒಂದಿಷ್ಟು ಜನಗಳಲ್ಲಿ ಸಂಚಲನ ಹುಟ್ಟಿಸಿ ಖಂಡಿಸುವ ನಿಂದಿಸುವ ಮತ್ತು ಆದಷ್ಟು ಚಾರಿತ್ರ್ಯ ವಧೆ ಮಾಡುವ ಒಂದಿಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಅದು ಅವರ ಗುರಿ. ಇಂದು ಯಾವ ವಿಚಾರವಂತಿಕೆಯು ಅಥವಾ ಸಾಮಾಜಿಕ ಕಳಕಳಿಯೂ ಇರುವುದಿಲ್ಲ. ಅವರ ಗುರಿಯಲ್ಲಿ ಅವರು ಯಶಸ್ವಿಯಾದರು.
- ಗಮನ ಬೇರೆಡೆ ಸೆಳೆದು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ: ಪ್ರಕಾಶ್ ರಾಜ್
- ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯೂ ವ್ಯಂಗ್ಯಕ್ಕೆ ಅತೀತರಲ್ಲ
- ಹಾಲಿನ ದರ ಏರಿಕೆ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಡಿ ಕೆ ಶಿವಕುಮಾರ್
- ಒಂದು ತಿಂಗಳ ಸಂಬಳವನ್ನು ಬರ ಪರಿಹಾರ ನಿಧಿಗೆ ನೀಡಿ
- ಕಾಮಗಾರಿ ಬಿಲ್ ಪಾವತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ : ಕೃಷ್ಣ ಬೈರೇಗೌಡ
ಪೋಸ್ಟರ್ನಲ್ಲಿ ಹೇಳುವ ಈ ಮೂರು ಸಾಲನ್ನು ಬಹಳಷ್ಟು ಜನ ನನ್ನ ತಿಳಿದವರು ಮತ್ತು ತಿಳಿಯದವರು, ನನ್ನನ್ನು ಮತ್ತು ನನ್ನ ಬರವಣಿಗೆಯನ್ನು ನನ್ನ ಆಶಯಗಳನ್ನು ಬಲ್ಲವರು ಮತ್ತು ಅರ್ಧಂಬರ್ಧ ತಿಳಿದವರು ಎಲ್ಲರೂ ಇದರ ಬಗ್ಗೆ ಹಿಗ್ಗಾಮುಗ್ಗ ಚರ್ಚೆ ಮಾಡುತ್ತಿದ್ದಾರೆ. ನನ್ನ ವಿರೋಧಿಸುವವರಿಗೆ ಮತ್ತು ವಿಚಾರವನ್ನು ಬಿಟ್ಟು ವೈಯಕ್ತಿಕವಾಗಿ ನಿಂದನೆ ಮಾಡಲು ಮತ್ತು ತೇಜೋವಧೆ ಮಾಡಲು ಬಯಸುವವರಿಗೆ ನಾನು ಏನು ಹೇಳಲು ಬಯಸುವುದೇ ಇಲ್ಲ. ಹಾಗೆಯೇ ನನ್ನ ತಿಳಿದವರು ತಿಳಿದುಕೊಳ್ಳಲು ಪ್ರಯತ್ನಿಸಿ ಎಂದು ಹೇಳುತ್ತೇನೆ ಅಷ್ಟೇ. ಇನ್ನ ನನ್ನನ್ನು ಕಟಕಟೆಗೆ ಎಳೆಯಲು ಯತ್ನಿಸಿದರೆ, ನೂರಾರು ಜನ ಮಾಡುವ ವಿಚಾರಣೆಗಳಿಗೆಲ್ಲ ಉತ್ತರ ಕೊಡಿ ಎಂದು ಒತ್ತಾಯ ಮಾಡಿದರೆ, ಖಂಡಿತ ನನಗೆ ಅಷ್ಟು ಪುರುಸೊತ್ತಿಲ್ಲ.
ಅಂದು ನಾನು ಮಾತನಾಡಿದ್ದು ದೇವದಾಸಿ ಪದ್ಧತಿಯ ಹುಟ್ಟು, ಅದರ ಐತಿಹಾಸಿಕ ರೂಪಾಂತರ, ಅದರ ಹೆಸರಿನಲ್ಲಿ ನಡೆದ ಶೋಷಣೆ ಹಾಗೂ ಇಂದಿನ ಸಮಾಜದಲ್ಲಿರುವ ಸ್ತ್ರೀ–ಪುರುಷ sex work ಕುರಿತು. ಅದರ ಕೇಂದ್ರ ಪ್ರಶ್ನೆ — ಸಮಾಜದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಒಂದು ವಾಸ್ತವವನ್ನು ಕೇವಲ ನೈತಿಕ ಖಂಡನೆಯಿಂದ ಎದುರಿಸಬೇಕೇ, ಅಥವಾ ಕಾನೂನು, ಸುರಕ್ಷತೆ, ಆರೋಗ್ಯ, ಶೋಷಣೆಯಿಂದ ರಕ್ಷಣೆ ಮತ್ತು ಮಾನವ ಘನತೆಯ ದೃಷ್ಟಿಯಿಂದಲೂ ಚರ್ಚಿಸಬೇಕೇ? ಎಂಬುದು.
ಮೂರು ಸಾಲುಗಳನ್ನು ಕತ್ತರಿಸಿ ತೆಗೆದುಕೊಂಡಾಗ ಮೂರು ಸಾಲುಗಳೇ ಕಾಣುತ್ತವೆ; ಸಂಪೂರ್ಣ ಸಂವಾದವನ್ನು ನೋಡಿದಾಗ ಅದರ ಆಶಯ ಕಾಣುತ್ತದೆ. ನನ್ನನ್ನು, ನನ್ನ ಬರವಣಿಗೆಯನ್ನು ಮತ್ತು ನನ್ನ ವಿಚಾರಧಾರೆಯನ್ನು ತಿಳಿದಿರುವವರು ಇದನ್ನು ಆ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬಹುದು. ತಿಳಿಯದವರು ತಿಳಿದುಕೊಳ್ಳಲು ಪ್ರಯತ್ನಿಸಬಹುದು. ಭಿನ್ನಾಭಿಪ್ರಾಯ ಇರುವವರು ವಿಚಾರವನ್ನು ಪ್ರಶ್ನಿಸಬಹುದು; ಅಂತಹ ಪ್ರಶ್ನೆಗಳಿಗೆ ನನಗೆ ಯಾವ ವಿರೋಧವೂ ಇಲ್ಲ. ಆದರೆ ಸಂದರ್ಭದಿಂದ ಕತ್ತರಿಸಿದ ಪ್ರತಿಯೊಂದು ಪೋಸ್ಟ್‌ಗೂ, ಪ್ರತಿಯೊಬ್ಬರ ಆರೋಪಕ್ಕೂ, ಪ್ರತಿಯೊಂದು ಸಾಮಾಜಿಕ ಮಾಧ್ಯಮದ ವಿಚಾರಣೆಗೂ ಪ್ರತ್ಯೇಕವಾಗಿ ಉತ್ತರಿಸುತ್ತಾ ಕೂರುವುದು ನನಗೆ ಸಾಧ್ಯವಿಲ್ಲ. ನನ್ನ ಸಮಯವನ್ನು ನನ್ನ ಕೆಲಸ, ಬರವಣಿಗೆ ಮತ್ತು ಸಂವಾದಗಳಿಗೆ ಉಳಿಸಿಕೊಳ್ಳಲು ಬಯಸುತ್ತೇನೆ.
ನನ್ನ ಅಭಿಪ್ರಾಯವನ್ನು ವಿಮರ್ಶಿಸಿ; ಪ್ರಶ್ನಿಸಿ; ವಿರೋಧಿಸಿ. ಆದರೆ ಮೊದಲು ನಾನು ಹೇಳಿದ್ದೇನು ಎಂಬುದನ್ನು ಪೂರ್ಣವಾಗಿ ತಿಳಿದುಕೊಂಡು ಮಾಡಿ. ವ್ಯಕ್ತಿಯ ಮೇಲೆ ತೀರ್ಪು ಕೊಡುವುದಕ್ಕಿಂತ ವಿಚಾರದೊಂದಿಗೆ ಸಂವಾದ ಮಾಡುವುದು ನನಗೆ ಹೆಚ್ಚು ಆಸಕ್ತಿಕರ. ಇಷ್ಟೇ ನನ್ನ ಸ್ಪಷ್ಟೀಕರಣ. ತುಂಬಾ ವಿಚಿತ್ರವೆಂದರೆ ಬಹಳಷ್ಟು ಜನ ಈ ಮೂರು ಸಾಲಿನ ಮೂಲ ಯಾವುದು ಇರಬಹುದು ಎಂದು ಕೂಡ ಯೋಚಿಸದೇ ಇರುವುದು.
ವಿಶೇಷ ಆಶ್ಚರ್ಯ: ವ್ಯಕ್ತಿಗಳ ಮತ್ತು ಸಮಾಜದ ಆರೋಗ್ಯದ ದೃಷ್ಟಿಯಿಂದ ಬರೆಯುವ ಸಾವಿರಾರು ಸಾಲುಗಳಲ್ಲಿ ಒಂದಷ್ಟನ್ನು ಹೆಚ್ಚು ಪ್ರಚಾರ ಮಾಡದ ಜನ ಇಂತಹ ಯಾವುದೋ ಪ್ರಚೋದಕ ಸಂಗತಿಗಳನ್ನು ಹೆಚ್ಚೆಚ್ಚು ಪ್ರಚಾರ ಮಾಡುತ್ತ ಚರ್ಚೆ ಮಾಡುವುದು!
– ಯೋಗೇಶ್ ಮಾಸ್ಟರ್, ಹಿರಿಯ ರಂಗಕರ್ಮಿಗಳು






