ಅಜಯ್ ಸಿಂಗ್ ಯಾತಕ್ಕೆ ಈ ಬಲಪಂಥೀಯ ಕರ್ಜಗಿಯವರನ್ನು ಓಲೈಸುತ್ತಿದ್ದಾರೆ?

2 years ago

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಕೆಆರ್ ಡಿಬಿ) ಮತ್ತು ಆರೆಸ್ಸೆಸ್ ಸಿದ್ಧಾಂತದ ಪರ ಒಲುವಿರುವ ಗುರರಾಜ್ ಕರ್ಜಗಿ ನಡುವೆ ಯಾವ ಬಗೆಯ ಸಂಬಂಧಗಳಿವೆ? ಮಂಡಳಿಯ ಅಧ್ಯಕ್ಷ, ಜೇವರ್ಗಿ ಶಾಸಕ ಅಜಯ್ ಸಿಂಗ್ ಯಾತಕ್ಕೆ ಈ ಬಲಪಂಥೀಯ ಕರ್ಜಗಿಯವರನ್ನು ಓಲೈಸುತ್ತಿದ್ದಾರೆ?  ಕೆಕೆಆರ್ ಡಿಬಿ ನಡೆಸುವ ಶಿಕ್ಷಕರ ತರಬೇತಿಯನ್ನು ಕರ್ಜಗಿ ಸಂಬಂಧಿತ ಸಂಸ್ಥೆಗೆ ಹೊರಗುತ್ತಿಗೆ ನೀಡಲಾಗಿದೆಯೇ?
ಈ ಆರೋಪಗಳು ನಿಜವಾಗಿದ್ದರೆ ಅಜಯಸಿಂಗ್ ಅವರು ಯಾವ ಆಧಾರದಲ್ಲಿ ಕರ್ಜಗಿಯವರೊಂದಿಗೆ
ವ್ಯವಹಾರ ನಡೆಸುತ್ತಿದ್ದಾರೆ? ಇವರ ಈ ಅನೈತಿಕತೆಯ ಕುರಿತು ಮಂಡಳಿಯ ಇತರ ಸದಸ್ಯರು ಯಾಕೆ ಮಾತನಾಡುತ್ತಿಲ್ಲ?


ಇದರ ಸದಸ್ಯಾಗಿರುವ ಬಿ. ಆರ್. ಪಾಟೀಲ್, ಬಸವರಾಜ ರಾಯರೆಡ್ಡಿ, ತುಕಾರಾಂರಂತಹ ಶಾಸಕರು, ಸಂಸದರು ಯಾಕೆ ಮೌನವಾಗಿದ್ದಾರೆ?

ಸಿದ್ದರಾಮಯ್ಯ ಸರ್ಕಾರಕ್ಕೆ ಇದರ ಕುರಿತು ಮಾಹಿತಿ ಇಲ್ಲವೇ? ಹೈದರಾಬಾದ್ ಕರ್ನಾಟಕ ಭಾಗದ ಶಿಕ್ಷಕರಿಗೆ ಆರೆಸ್ಸೆಸ್, ಚಾತುರ್ವರ್ಣ ಸಿದ್ಧಾಂತದ ತರಬೇತಿ ಕೊಡಲಿಕ್ಕಾಗಿ ಕೆಕೆಆರ್ ಡಿಬಿಯನ್ನು ಬಳಸಿಕೊಳ್ಳುತ್ತಿರುವುದು ನಿಜವಾಗಿದ್ದರೆ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ್ದು ಯಾಕೆ?
ಮುಖ್ಯಮಂತ್ರಿಗಳು, ಪ್ರಿಯಾಂಕ ಖರ್ಗೆ ಅವರು ಬಹಿರಂಗವಾಗಿ ಆರೆಸ್ಸೆಸ್ ವಿರೋಧಿಸುತ್ತಿದ್ದಾರೆ, ಆದರೆ ಯಾಕೆ ಕೆಕೆಆರ್ ಡಿಬಿಯ ಈ ಅನೈತಿಕತೆಯ ಆರೋಪದ ಕುರಿತು ಮಾತನಾಡುತ್ತಿಲ್ಲ?

ಈ ಎಲ್ಲಾ ಪ್ರಶ್ನೆಗಳಿಗೆ ಯಾರು ಉತ್ತರಿಸಬೇಕು?

ಸದ್ಯಕ್ಕೆ ಈ ಕುರಿತು ಕಲಬುರ್ಗಿಯ ಅಸಹಾಯಕ ಶಿಕ್ಷಕರೊಬ್ಬರು ಬರೆದದ್ದ ಬರಹ ಇಲ್ಲಿದೆ..

ನಮಸ್ಕಾರಗಳು ಸರ್

ಕೆ ಕೆಆರ್ ಡಿ ಬಿ ಹಾಗೂ ಗುರುರಾಜ ಕರಜಗಿ ಅವರ ವ್ಯವಹಾರಗಳಿಗೂ  ಅವಿನಾಭಾವ ಸಂಬಂಧವಿದೆ.

ಕಳೆದ ವರ್ಷ ಕೆ ಕೆ ಆರ್ ಡಿ ಬಿ ವತಿಯಿಂದ ಕಲ್ಬುರ್ಗಿ ಜಿಲ್ಲೆಯ ಎಲ್ಲ ಶಾಲೆಯ ಕನಿಷ್ಠ ಒಬ್ಬ ಶಿಕ್ಷಕರಿಗೆ ತರಬೇತಿಯನ್ನು ಆಯೋಜಿಸಲಾಗಿತ್ತು.

ಈ ತರಬೇತಿ ಪ್ರತಿ ಬ್ಯಾಚ್ ಗೆ 12 ದಿನಗಳ ಕಾಲ ನಡೆದಿದೆ.

ಇದಕ್ಕೆ ಅನುದಾನ ನೀಡಿದ್ದು ಕೆ ಕೆಆರ್ ಡಿ ಬಿ.
ತರಬೇತಿಯನ್ನು ನೀಡಿದವರು ಮಾನ್ಯ ಗುರುರಾಜ್ ಕರ್ಜಗಿ ಅವರು ನಡೆಸುವ ಶಿಕ್ಷಣ ಸಂಸ್ಥೆ, ಕೋಚಿಂಗ್ ಸೆಂಟರ್ ಗಳ ಸಿಬ್ಬಂದಿ. ಅವರಿಗೆ ಹಣ ಪಾವತಿಸಿದ್ದು ಕೆ ಕೆ ಆರ್ ಡಿ ಬಿ ವತಿಯಿಂದ.
ಈ ತರಬೇತಿ ವ್ಯವಹಾರದ ಮೊತ್ತ ಎಷ್ಟು ಎಂದು ನನಗೂ ಗೊತ್ತಿಲ್ಲ. ಆದರೆ ನಮ್ಮ ಶಿಕ್ಷಕರ ಮಧ್ಯದಲ್ಲಿ ಹಾಗೂ ಪರಿಚಿತ ಅಧಿಕಾರಿಗಳಿಗೆ ಈ ಕುರಿತು ಪ್ರಶ್ನೆಸಿದ್ದೆ. ಬಿಜಿನೆಸ್ ಮ್ಯಾನ್ ಒಬ್ಬ ಸರಕಾರಿ ಶಿಕ್ಷಕರಿಗೆ ನೈತಿಕತೆಯ ಪಾಠವನ್ನು ಹೇಳಿ ತಾನು ಬಿಸಿನೆಸ್ ಮಾಡಿಕೊಂಡಿದ್ದು ನಮ್ಮ ದಡ್ಡತನದಿಂದಲೇ.

ನೆನ್ನೆ ಈ ಸಮಿತಿ ಅಧ್ಯಕ್ಷರ ಆಯ್ಕೆ ಆಗಿರಲಿಲ್ಲ. ಅದಕ್ಕಿಂತ ಮುಂಚಿತವಾಗಿಯೇ ಈ ಸಮಿತಿಯ ಸದಸ್ಯರ ಬಗ್ಗೆ ನಾನು ಚಿಂತಿತ್ತನಾಗಿದ್ದೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರು ಸರ್ಕಾರಿ ವ್ಯವಸ್ಥೆಗೆ ಹೇಗೆ ಮಾರ್ಗದರ್ಶನ ನೀಡಬಲ್ಲರು? ಎಂಬುದು ನನ್ನ ಪ್ರಶ್ನೆಯಾಗಿತ್ತು.

ಇವೆಲ್ಲವನ್ನೂ ಯಾರಿಗೆ ಹೇಳುವುದು ಸರ್?

– ಬಿ ಶ್ರೀಪಾದ್ ಭಟ್, ಸಾಮಾಜಿಕ ಹೋರಾಟಗಾರರು

Leave a Reply