ಮುಂಬೈ: ಹಿರಿಯ ಬಾಲಿವುಡ್ ನಟ ಧರ್ಮೇಂದ್ರ ಕಾಲವಶರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಕಾರಣ ಆಸ್ಪತ್ರೆಯಿಂದ ಮನೆಗೆ ಮರಳಿದ್ದ ಅವರು ಎರಡು ವಾರಗಳ ನಂತರ ಇಂದು ನಿಧನರಾಗಿದ್ದಾರೆ. ಧರ್ಮೇಂದ್ರ ಅವರನ್ನು ಕಳೆದ ವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಮತ್ತು ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದವು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮುನ್ನ ಸುದ್ದಿ ಮಾಧ್ಯಮಗಳಲ್ಲಿ ಧರ್ಮೇಂದ್ರ ನಿಧನದ ಸುದ್ದಿ ಹರಿದಾಡಿತ್ತು. ಕೆಲವು ರಾಜಕಾರಣಿಗಳು ಕೂಡ ಧರ್ಮೇಂದ್ರ ನಿಧನಕ್ಕೆ ಸಂತಾಪ ಸೂಚಿಸಿ ಪೋಸ್ಟರ್ ಗಳನ್ನು ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ, ಧರ್ಮೇಂದ್ರ ಪುತ್ರ ಸನ್ನಿ ಡಿಯೋಲ್ ಮನೆಯ ಹೊರಗೆ ನಿಂತಿದ್ದ ಛಾಯಾಗ್ರಾಹಕರ ಮೇಲೆ ಕೋಪಗೊಂಡಿದ್ದರು. “ನಿಮಗೆಲ್ಲ ನಾಚಿಕೆಯಾಗಬೇಕು… ನಿಮ್ಮ ಮನೆಯಲ್ಲಿ ಅಪ್ಪ, ಅಮ್ಮ ಮಕ್ಕಳಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸುಮಾರು ಆರು ದಶಕಗಳ ಕಾಲದ ಬಾಲಿವುಡ್ ವೃತ್ತಿಜೀವನದಲ್ಲಿ, ಧರ್ಮೇಂದ್ರ ಅವರು ಆಯೀ ಮಿಲನ್ ಕಿ ಬೇಲಾ, ಫೂಲ್ ಔರ್ ಪತ್ತರ್, ಆಯೆ ದಿನ್ ಬಹರ್ ಕೆ, ಸೀತಾ ಔರ್ ಗೀತಾ, ರಾಜಾ ಜಾನಿ, ಜುಗ್ನು, ಚುಪ್ಕೆ ಚುಪ್ಕೆ, ಮೇರಾ ಗಾಂವ್ ಮೇರಾ ದೇಶ್, ಬಾಂದಿನಿ, ಡ್ರೀಮ್ ಗರ್ಲ್, ಯಾದೋನ್ ಕಿ ಬಾರಾತ್, ದೋಸ್ತ್, ಶೋಲೆ, ಪ್ರತಿಗ್ಯಾ, ಚರಸ್, ಧರಮ್ ವೀರ್ ಮುಂತಾದ ಚಿತ್ರಗಳಲ್ಲಿ ಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ್ದರು. ನಟ ಅಗಸ್ತ್ಯ ನಂದ ಅಭಿನಯದ ‘ಇಕ್ಕಿಸ್’ ಅವರು ಅಭಿನಯಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ.




