ಸೋನಮ್ ವಾಂಗ್‌ಚುಕ್ ಅವರೇ, ದಯವಿಟ್ಟು ನಿಮ್ಮ ಉಪವಾಸವನ್ನು ಕೈಬಿಡಿ ಎಂದು ಬೂಕರ್ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಹೋರಾಟಗಾರ್ತಿ ಬಾನು ಮುಷ್ತಾಕ್ ಮನವಿ ಮಾಡಿದ್ದಾರೆ.
- ಟಿಪ್ಪು ಸುಲ್ತಾನ್ ಶಹೀದ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ
- ಕನ್ನಡ ಪತ್ರಿಕೋದ್ಯಮಕ್ಕೆ ಮತ್ತೊಂದು ಹೊಸ ಗರಿ
- ರಾಜಕೀಯ, ಸಾಮಾಜಿಕ, ಆರ್ಥಿಕ ಬದುಕು ಕಟ್ಟಿಕೊಟ್ಟ ಕಾಂಗ್ರೆಸ್ ಹಿಂದೂ ವಿರೋಧಿ!
- ಪುಟ್ಟ ‘ಒಡೆಯ’ನನ್ನು ಪರಿಚಯಿಸಿದ ಡಾಲಿ ಧನಂಜಯ
- ಸತೀಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಹೊರಗಿಡಬೇಕು: ಆರ್ ಅಶೋಕ್
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆಗಳಲ್ಲಿ ಅವ್ಯವಹಾರ ಇತ್ಯಾದಿ ಕಾರಣಗಳಿಂದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ದೆಹಲಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್ ಚುಕ್ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿರುವ ಬಾನು ಮುಷ್ತಾಕ್, ಸಿ.ಇ.ಟಿ. ಪರೀಕ್ಷೆಯಲ್ಲಿನ ಭ್ರಷ್ಟಾಚಾರ, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ನಡೆದ ವಂಚನೆ ಮತ್ತು ಅದರ ಪರಿಣಾಮವಾಗಿ ಅಮಾಯಕ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಇಡೀ ದೇಶದ ಮನಸ್ಸನ್ನು ಕಲಕಿವೆ. ಈ ಅನ್ಯಾಯಕ್ಕೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂಬ ನಿಮ್ಮ ಆಗ್ರಹ ನ್ಯಾಯಯುತವಾಗಿದೆ ಎಂದಿದ್ದಾರೆ.
ನಿಮ್ಮ ಹೋರಾಟವು ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು ಮತ್ತು ನ್ಯಾಯಪ್ರಿಯ ನಾಗರಿಕರ ಧ್ವನಿಯಾಗಿದೆ. ಆದರೆ ನಿಮ್ಮ ಉಪವಾಸ ಸತ್ಯಾಗ್ರಹ ನಿಮ್ಮ ಆರೋಗ್ಯ ಮತ್ತು ಜೀವವನ್ನೇ ಅಪಾಯಕ್ಕೆ ತಳ್ಳುತ್ತಿದೆ. ಈ ದೇಶಕ್ಕೆ ನಿಮ್ಮಂತಹ ಚಿಂತಕರು ಮತ್ತು ಹೋರಾಟಗಾರರು ಅತ್ಯಗತ್ಯ. ಆದ್ದರಿಂದ, ದಯವಿಟ್ಟು ಉಪವಾಸವನ್ನು ಕೈಬಿಡಿ. ನಿಮ್ಮ ಧ್ವನಿ ಮೌನವಾಗಬಾರದು; ಅದು ಇನ್ನಷ್ಟು ಬಲವಾಗಿ ಮೊಳಗಬೇಕು ಎಂದಿದ್ದಾರೆ.
ಅದೇ ಸಮಯದಲ್ಲಿ ಕೇಂದ್ರ ಸರ್ಕಾರವು ಈ ಪ್ರತಿಭಟನೆಯನ್ನು ನಿರ್ಲಕ್ಷಿಸದೆ, ವಿದ್ಯಾರ್ಥಿಗಳ ಜೀವಗಳನ್ನು ಬಲಿ ಪಡೆದಿರುವ ಪರೀಕ್ಷಾ ವ್ಯವಸ್ಥೆಯ ವೈಫಲ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಸಿ.ಇ.ಟಿ. ಪರೀಕ್ಷಾ ಅಕ್ರಮಗಳ ಕುರಿತು ಸ್ವತಂತ್ರ ಮತ್ತು ಪಾರದರ್ಶಕ ತನಿಖೆ ನಡೆಸಿ, ಅದರ ನೈತಿಕ ಹೊಣೆಯನ್ನು ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು. ಅಧಿಕಾರ ಎಂದರೆ ಕೇವಲ ಹುದ್ದೆಯಲ್ಲ, ಜವಾಬ್ದಾರಿಯೂ ಹೌದು. ವಿದ್ಯಾರ್ಥಿಗಳ ಕನಸುಗಳು ಮತ್ತು ಜೀವಗಳಿಗೆ ನ್ಯಾಯ ದೊರಕಿದಾಗ ಮಾತ್ರ ಪ್ರಜಾಪ್ರಭುತ್ವದ ಮೇಲಿನ ಜನರ ವಿಶ್ವಾಸ ಉಳಿಯುತ್ತದೆ ಎಂದಿದ್ದಾರೆ.




